ಇಳಿಸಂಜೆ
ಇಳಿಸಂಜೆ



ಈ ಸಂಜೆ ಯಾಕಾಗಿದೆ ನೀನಿಲ್ಲದೇ
ನನ್ನ ಪ್ರತಿ ಸಂಜೆಯೂ ನಿನ್ನದೇನೇ
ಸದಾ ಮನದಾಳದಲ್ಲಿದೆ ನೀನಿದ್ದ ಇಳಿ ಸಂಜೆ
ಹೇಗೆ ಮರೆಸೀತು ಈ ನನ್ನ ಬಾಳ ಮುಸ್ಸಂಜೆ
ನೀನು ಪುಣ್ಯವಂತೆ ಕಾಣದೆ ಹೋದೆ ಮುಸ್ಸಂಜೆ
ನಿನ್ನ ನೆನೆಸಿ ಸವೆಸುತಿರುವೆ ಇರುಳಲಿ ಇಳಿಸಂಜೆ
ಎಲ್ಲಿಗೆ ನನ್ನ ಪಯಣ ಕೇಳಬೇಡ ನನ್ನಪರಂಜಿ
ನಿನ್ನೆಡೆಗೆ ಇರುಳ ಭೇದಿಸಿಬರುವೆಕಳೆಯಲಿಳಿಸಂಜೆ
ಎಲ್ಲರ ಬಾಳಿನಲ್ಲೂ ಕಟ್ಟಿಟ್ಟ ಬುತ್ತಿ ಈ ಮುಸ್ಸಂಜೆ
ಒಂಟಿಯೋ ಜೊತೆಯೋ ಕಳಿಲೇಬೇಕುಮುಸ್ಸಂಜೆ
ಗೊತ್ತಿದ್ದೂ ದ
ುಃಖವೇಕೋ ಕಂಡಾಗ ಈ ಇಳಿಸಂಜೆ
ಪೃಕೃತಿ ನಿಯಮ ಬಿಸಿಲಿಳಿದಾಗ ತಂಪಲ್ಲವೇ ಸಂಜೆ
ಯೇ ಮನುಜ,ನೀನೆಂದುಕೊಂಡಂತೆ ಇಳಿ ಸಂಜೆ
ಹೊರತಲ್ಲ ಮುಸ್ಸಂಜೆಗೆಮಾತ್ರ ಕಡಲತೀರದಸಂಜೆ ತಂಗಾಳಿ,
ಹೊಂಬಣ್ಣ ಪ್ರೇಮಿಗಳಿಗೆ ಪ್ರೇಮಸಂಜೆ
ನವದಂಪತಿಗಳಿಗೆ ಮರೆಯದ ಮಧುಚಂದ್ರಸಂಜೆ
ಸೂರ್ಯೋದಯದ ನಂತರಸೂರ್ಯಾಸ್ತವಲ್ಲವೇ
ಹಾಗೇ ಬಾಲ್ಯ ಯವ್ವನ ನಂತರ ವೃದ್ಧಾಪ್ಯವಲ್ಲವೇ
ಅಂಜಿಕೇಕೆಮುಸ್ಸಂಜೆಗೆಊರುಗೋಲುಬೇಕಲ್ಲವೇ
ಇಳಿಸಂಜೆದಾಟಿಸೆ ಊರುಗೋಲಾಗಿದೇವರಿಲ್ಲವೇ