ಅಜ್ಞಾನಿಗೆ ಜ್ಞಾನದ ಅಂಧನಿಗೆ ಬೆಳಕಿನ ಕನಸು
ಅಜ್ಞಾನಿಗೆ ಜ್ಞಾನದ ಅಂಧನಿಗೆ ಬೆಳಕಿನ ಕನಸು
ಮಾಗಿಯ ಕನಸು, ಜೋಗಿಯ ಮನಸು
ನಿಜವೋ ಹುಸಿಯೋ ಅರಿಯದು ನನ್ನ ಮನಸು
ಈ ನನ್ನ ಅಜ್ಞಾನಕ್ಕೆ ಕಾಣುವುದೇ ಜ್ಞಾನದ ಕನಸು
ಅಂಧನಿಗೆ ಕಾಣಬೇಕಾಗಿರುವುದೇಬೆಳಕಿನಕನಸು
ಬಡವನಿಗೆ ಶ್ರೀಮಂತನಾಗಿ
ಸುಖವಾಗಿರಬೇಕೆಂಬ ಕನಸು
ಶ್ರೀಮಂತನಿಗೆ ಎಲ್ಲ ಭಯಗಳಿಂದ ನೆಮ್ಮದಿಯಾಗಿರುವ ಕನಸು
ಸಾವಿನ ಭಯದಿಂದ ರೋಗಿಗೆ
ಉಳಿವಿನ ಕನಸು
ನೋವು ನುಂಗಿ ಬದುಕಲಾರದವಗೆ
ಸಾವಿನಕನಸು
ಬಾಳಿನ ಅರ್ಥಅರಿಯದಅಜ್ಞಾನಿಗಳಿಗೆ
ಕಾಣುವುದೇ ಜ್ಞಾನದಕನಸು
ಕಣ್ಣಿದ್ದು ಕುರುಡರಂತೆ ಬಾಳುವ ಅಂಧರಿಗೆ ಕಾಣುವುದೇ ಬೆಳಕಿನಕನಸು