ಈ ಬಂಧನಕೆಲ್ಲಿ ಕೊನೆ
ಈ ಬಂಧನಕೆಲ್ಲಿ ಕೊನೆ

1 min

20
ಮಾತೆಯ ಮಮತೆಯ ಬಂಧನ
ತಂದೆಯ ಜವಾಬ್ದಾರಿಯ ಬಂಧನ
ಹೆಂಡತಿಯ ಅನುರಾಗ ಬಂಧನ
ಮಕ್ಕಳ ಪ್ರೀತಿ ವಾತ್ಸಲ್ಯ ಬಂಧನ
ಸಮಾಜದಲ್ಲಿ ಸಾಮಾಜಿಕ ಬಂಧನ
ವೃತ್ತಿಯಲ್ಲಿ ವಿಶ್ವಾಸದ ಕರ್ತವ್ಯ ಬಂಧನ
ಸ್ನೇಹಿತರ ಮರೆಯದ ಆತ್ಮ ಬಂಧನ
ವ್ಯವಹಾರದಲ್ಲಿ ಹೊಂದಾಣಿಕೆ ಬಂಧನ
ವಾಸ್ತವದಲ್ಲಿ ಕಾಣದ ರೋಗಾಣುವಿನ ಬಂಧನ
ಮನೆಯೊಳಗೆ ಯೋಗ ಜಪ ತಪಗಳ ಬಂಧನ
ಹೊರಗೆ ಹೋದರೆ ಎಲ್ಲಾ ಮಾರ್ಗಗಳ ದಿಗ್ಬಂಧನ
ಅನೇಕ ಬಂಧಗಳು ಮಾಡಿವೆ ಎಲ್ಲರ ಗೃಹಬಂಧನ
ಪಂಚಮಾಸಗಳಿಂದಲೂ ಕೇಳುತಿದೆ ಆಕ್ರಂದನ
ರೋಗ ಸೋಂಕಿತರಿಂದಾಗಿದೆ ನೋವಿನ ಸದನ
ಕೇಳಲಾಗದು ಮೃತರ ಬಂಧುಗಳ ರೋದನ
ಯಾರು ನಿರ್ಧರಿಸುವರೀ ಬಂಧನದ ಕೊನೆ ದಿನ?