Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

SIDDU GP

Classics Inspirational

2  

SIDDU GP

Classics Inspirational

ಸಾಗಿ ಪಡೆದದ್ದು

ಸಾಗಿ ಪಡೆದದ್ದು

1 min
178


ಅಸಮರ್ಥ ಮನಸ್ಸಿನಾಳದ ಗೂಡಲ್ಲಿ ಬೆಂದು

ಕರಗಿ ಅರಳಿ ಬೆಳಕಾಗಿ ಹೊಮ್ಮಿರುವೆ ಇಂದು

ನಾನು ಹಾರಾಡಬಲ್ಲೆ ದುಃಖದ ಹೃದಯಗಳನ್ನು ಕದ್ದು

ನಾನು ಕುಣಿಯಬಲ್ಲೆ ಕಷ್ಟದ ಭಾರವನ್ನು ಕರಗಿಸಿ

ಜಗತ್ತನ್ನೇ ಮರಿಸಬಲ್ಲೆ ಸಾಗಿ ಪಡೆದದ್ದು ||


ಕೂಗಳತೆಯ ದೂರದಲ್ಲಿ ಅರಿಯದೆ ಸಾಗಿದರೂ

ದಾರಿಯ ಅಂತರಾಳದಲ್ಲಿ ನಲಿಯುವೆ ನಗುವಾಗಿ

ಸೋತ ದೇಹದಲ್ಲೊಂದು ಸೋಲಿಲ್ಲದ ಕನಸಾಗಿ

ನಾನು ಖುಷಿಯಾಗಬಲ್ಲೆ ನೋವನ್ನು ಪಡೆದರೂ

ಜಗತ್ತನ್ನೇ ಸೆರೆಹಿಡಿಯಬಲ್ಲೆ ಸಾಗಿ ಪಡೆದದ್ದು ||


ನಶ್ವರಗಳಲ್ಲಿ ಈಶ್ವರ ರೂಪದ ಆದರ್ಶ ಹೊತ್ತು

ಪ್ರಪಂಚ ಕೆರಳಿ ಅರಳಿ ಪಾದದಡಿಯಲ್ಲಿ ಬಿದ್ದರೂ

ಕೊನೆಯಲ್ಲಿ ಪರಿಶುದ್ಧತೆಗೆ ಗೆಲುವಾಗುವುದು ಸಾವಿಲ್ಲದೆ

ನಾನು ನಗಬಲ್ಲೆ ಜಗತ್ತಿನ ಅಳುವನ್ನು ಮರಿಸಿ

ಜಗತ್ತನ್ನೇ ಸಾಧಿಸಬಲ್ಲೆ ಸಾಗಿ ಪಡೆದದ್ದು ||


Rate this content
Log in

Similar kannada poem from Classics