STORYMIRROR

Bellala Gopinath Rao

Others

3  

Bellala Gopinath Rao

Others

ಗ್ರೀಷ್ಮ ವಸಂತ

ಗ್ರೀಷ್ಮ ವಸಂತ

1 min
47


ಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇ

ನಲ್ಲೆಯೊಲವಿನ ಮತ್ತೇ ನೆರಳಿನಂತೆ


ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ

ಒಲವಿನುಯ್ಯಾಲೆಯನೇ ಜೀಕಿದಂತೆ


ಎದೆಯ ಭಾವನೆ ಬಸಿರು ರಾಗ ತಾನದ ಉಸಿರು

ತನುವು ತನುವಲಿ ಬೆರೆತ ನೆನಪೆ ಹಸಿರು


ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ

ಅವಳ ಚೆಲುವಿನ ಸಿರಿಯು ಹರಿವ ತನುವ


ಕೋಗಿಲೆಯ ಪಂಚಮದ ಮಧುರ ಮಂಜುಳ ಗಾನ

ನಮ್ಮ ಒಲವಿನ ಸವಿಯ ಕುರುಹು ತಾನ


ಹಳೆಯ ನೆನಪಿನ ಬುತ್ತಿ , ಬಿಚ್ಚಿ ತೆನ್ನನು ಮುತ್ತಿ

ಮನೆ ಮನದ ತುಂಬೆಲ್ಲಾ ನೆನಪು ಸುತ್ತಿ


ಪ್ರೀತಿ ನೆಮ್ಮದಿ ಭರಿತ ಬದುಕೇ ಸಾರ್ಥಕ ಪಥವು

ಸ್ನೇಹದೊಲವಿನ ನೆರಳಲಿನ್ನು ಹರಿವು


ಉಕ್ಕಿ ಹರಿಯಲಿ ಒಲವು ವಿಶ್ವ ದೊಳಗೆಲ್ಲೆಲ್ಲೂ

ಪ್ರಕೃತಿ ಮನುಜನ ಸನಿಹ ಬಾಳ್ವೆಯಲ್ಲೂ

 

 


இந்த உள்ளடக்கத்தை மதிப்பிடவும்
உள்நுழை