ದೀಪಾವಳಿ
ದೀಪಾವಳಿ
ಸಡಗರ ತುಂಬಿದ
ಒಡೆಯರ ಮನೆಯ
ಬೆಳಕಿನ ಹಬ್ಬಕ್ಕೆ
ನಾ ಹೋದೆ
ಸುರು,ಸುರು ಕಡ್ಡಿಯ
ಸ್ವಗತ ಮೆರೆಗೆ
ಸಂತಸ ಸಂತೆಗೆ
ಶರಣಾದೆ
ಸಿಹಿ ಸಿಹಿ ಪಾಕವ
ರಾಶಿಯೆ ಕಂಡು
ಹೆಂಡತಿ ಮಕ್ಕಳ
ನಾ ಮರೆತೆ
ಮಾವಿನ ಎಲೆಯ ತೋರಣ ಕಟ್ಟಿದ
ಮೈ ಜುಮ್ಮೆನ್ನುವ ವಿದ್ಯುತ್ ಹಾಸಿದ
ಜಗುಳಿ ಎದುರಿನ ರಂಗೊಳಿ ಬಿಡಿಸಿದ
ದಿವಾಳಿ ಹಬ್ಬಕ್ಕೆ ಋಣಿಯಾದೆ