ಚಳಿಗಾಲ
ಚಳಿಗಾಲ
1 min
335
ಅಯ್ಯೋ, ಮೈನಡುಗಿಸುವ ಹಲ್ಲು ಕಟಕಟಿಸುವ ಚಳಿ
ಬೇಕೇಬೇಕು ಹೊದೆಯಲು ಎರಡು ಕಂಬಳಿ
ಬಿಸಿ ಬಿಸಿ ಕಾಫಿ ಕುಡಿದರೂ ಬಗ್ಗದು ಈ ನಡುಕ
ಬೆಳ್ಳಂಬೆಳಗ್ಗೆಯೇ ಇದೊಂದು ಹೊಸ ಕಂಟಕ
ಇಬ್ಬನಿಗೆ ಮುತ್ತಿಡುವ ಹೂವು ಚಳಿಗೆ ಮೈಮರೆತಿದೆ
ಮೂಡಣದಿ ಮೂಡಿದ ರವಿ ಕಿರಣವೂ ಕಾಣದಾಗಿದೆ
ಕೋಗಿಲೆಯ ಮಧುರಗಾನಕ್ಕೂ ಚಳಿಯೇ ಶೃತಿಯಾಗಿದೆ
ಚಳಿ ಹೊತ್ತು ತಂದ ತಂಗಾಳಿಗೆ ಬಿಡದಾಗಿದೆ ನಿದ್ದೆ
ಬಯಲು ತುಂಬಾ ಆವರಿಸಿದೆ ದಟ್ಟ ಬಿಳಿ ಪರದೆ
ಪರದೆ ಕಳಚದು ದಿನಕರನು ಮುಗಿಲಿಗೆ ಬರದೆ
ಈ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬ
ಆದರೂ ಮೈ ಜುಮ್ಮೆನಿಸುವ ಚಳಿ… ಅಬ್ಬಾ
ತನು ಕೊರೆಯುವ ಚಳಿಯ ಅಬ್ಬರ ನೋಡು
ಸ್ನಾನಕ್ಕೆ ಬಿಸಿನೀರು ಮರೆಯದೇ ಮಾಡು!
ಕಾಲೇಜ್ಗೆ ಹೋಗಲು ಬರೇ ಬೇಜಾರು
ಇನ್ನೂ ಮಾಡಲೇ ಸಿಹಿನಿದ್ರೆ…ಒಂಚೂರು!
