STORYMIRROR

Gireesh pm Giree

Action Classics Inspirational

4  

Gireesh pm Giree

Action Classics Inspirational

ಅಮೃತ ಮಹೋತ್ಸವ

ಅಮೃತ ಮಹೋತ್ಸವ

1 min
283

ಭರತ ಖಂಡ ಕಂಡ ಕನಸ್ಸು ನನಸ್ಸಾದ ಸುದಿನ

ಸಹಸ್ರ ಜ್ಯೋತಿಗಳ ತ್ಯಾಗಕ್ಕೆ ನಮ್ರತೆಯ ನಮನ

ನೆತ್ತರು ಹರಿಸಿತು ಕಣ್ಣೀರು ಸುರಿಸಿತು ಪರಕಿಯರ ದೌರ್ಜನ್ಯ

ಬಿಳಿ ಕುನ್ನಿಗಳ ಹೆಡೆಮುರಿ ಕಟ್ಟಿದ ಕಥೆಯೇ ಅಸಾಮಾನ್ಯ


ವೀರ ಮರಣವ ಅಪ್ಪಿಕೊಂಡರು  ಧೀರರು

ಬ್ರಿಟಿಷ್ ಬಂಡಾಯದ ವಿರುದ್ಧ ಸಿಡಿದೆದ್ದರು

ಶಾಂತಿ ಕ್ರಾಂತಿ ಹೋರಾಟದ ಮಜಲುಗಳಿಗೆ ಸಿಕ್ಕ ಉತ್ತರ

ಭಾರತೀಯರಿಗೆ ಭಾರತವ ಆಳುವ ಸಾರ್ವಭೌಮ ಅಧಿಕಾರ



ಉತ್ತರದಲ್ಲಿ ಕಿಡಿ ಹೊತ್ತಿದ ಸ್ವಾತಂತ್ರ್ಯದ ಜ್ವಾಲೆ

ದಕ್ಷಿಣದಲ್ಲೂ ಎಬ್ಬಿಸಿತು ದೇಶ ಪ್ರೇಮದ ಅಲೆ

ಎಲ್ಲೆಲ್ಲೂ ಮೊಳಗಿತು ಬಾನು ಭುವಿ ಒಂದಾಗೋ ಹಾಗೆ

ಸ್ವಾತಂತ್ರ್ಯ ಸಿಕ್ಕಿ ಭಾರತಾಂಬೆ ಚೆಲ್ಲಿದಳು ನಗೆ


Rate this content
Log in

Similar kannada poem from Action