ದೀಪಾವಳಿ
ದೀಪಾವಳಿ
ಆಲಯದ ಎದುರಿನಲ್ಲಿ ಸಾಲು ಸಾಲು ದೀಪ
ಮನದಾಳದಿಂದ ಭಕ್ತಿಯ ದೇವರ ಜಪ ತಪ
ನವ ಉಡುಪನ್ನು ತೊಟ್ಟು ಮನೆಯೆಲ್ಲಾ ಸುತ್ತಿ
ಹಚ್ಚುತ್ತಿದ್ದೆವು ಆನೆ ಪಟಾಕಿಯ ಬತ್ತಿ
ಇರುಳನು ಸೂಸುವ ಕತ್ತಲ ಕರಗಿಸಿ
ಅಜ್ಞಾನ ಅಂಧಕಾರದ ಬೇಗೆಯ ನೀಗಿಸಿ
ಸುಜ್ಞಾನ ಸುಗಂಧ ಎಲ್ಲೆಡೆ ಹರಡಿಸಿ
ಜ್ಯಾನವೆಂಬ ಜ್ಯೋತಿಯ ಮನದಲ್ಲಿ ಬೆಳಗಿಸಿ
ಬಾಳೆಂಬ ಪಯಣದಲ್ಲಿ ಬೆಳಕಿನ ಚಿತ್ತಾರ
ಬದುಕೆಂಬ ತಾಣಕ್ಕೆ ನವಹುರುಪಿನ ಸಿಂಗಾರ
ದೀಪದಂತೆ ಬೆಳಗಲಿ ಎಲ್ಲರ ಬಾಳು ಬಂಗಾರ
ಅದರ ಶಾಖಕ್ಕೆ ಅಳಿಸಲಿ ಜಗದ ಅನಾಚಾರ
ತಾನು ಉರಿದು ಬೆಳಕನು ಚೆಲ್ಲುತ
ತಾ ತೈಲದಿ ವಿಂದು ಕಾಂತಿಯ ಬಿತ್ತುತ
ಗೆಲುವಿನ ನಗೆಯ ಸುತ್ತಲೂ ಬೀರುತ್ತ
ಸಕಲರ ಬಾಳನ್ನು ಬೆಳಗುತ್ತ ನಲಿವ ಸೂಸುತ್ತಾ
