ನನ್ನವಳು
ನನ್ನವಳು
ಪಳ ಪಳ ಹೊಳೆಯುವ ಪಿಳಿ ಪಿಳಿ ಕಣ್ಣುವಳು..!
ದಾವಣಗೆರೆ ಬೆಣ್ಣೆ ಹೋಲುವ ಮೃದುವಾದ ಕೆನ್ನೆಯವಳು..!
ಮಾಸಿಕ ಕಂತು ಕಟ್ಟಿಯಾದರೂ
ನೋಡಬೇಕೆನ್ನುವ ನಾಸಿಕದವಳು..!
ಅಮೃತ ಶಿಲೆಯೇ ಬೆರಗಾಗುವ ಬಿಳುಪಾದ ಮೈಬಣ್ಣದವಳು..!
ಹುಣ್ಣಿಮೆ ಚಂದಿರನ ಹಾಲ್ಬಳೆಕಿಗೆ ಪೈಪೋಟಿ
ನೀಡುವ ಚೆಂದನವನದ ಗೊಂಬೆ ನನ್ನವಳು...!
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಖಾರದವಳು ನನ್ನವಳು...!

