ತುಂಬಿ
ತುಂಬಿ
ತುಂಬಿ
ಗೊತ್ತಿಲ್ಲ. ನನಗೆ ಅವನ್ಯಾರೋ..
ಇದ್ದಕ್ಕಿದ್ದಂತೆ ಚಂದ್ರನಂತೆ
ಬರುತ್ತಾನೆ |
ಹೇಳದೆ ಕೇಳದೆ
ಹೋಗುತ್ತಾನೆ |
ಬೇಕಿಲ್ಲ ಅವಗೆ ಹೂಗಳಲಿ ಭೇದ
ಭಾವಗಳು |
ಬೇಕಿತ್ತಷ್ಟಕ್ಕೆ ಮಕರಂದ | ಹೀರುವ ಪರಿ ಮಾತ್ರ
ಬೇರೆ ಬೇರೆ |
ಬದಲಾಗುವ ಜಗದಲಿ
ಅಗತ್ಯಕ್ಕೆ ತಕ್ಕಂತೆ
ಭಾವ-ವೇಷ |
ಪ್ರತೀ ಹೂವಿಗೂ
ಇಷ್ಟಕಾಮ್ಯ | ಹೇಳದೆ ಕೇಳದೆ
ಬಂದರೂ ಬರಲಿ
ಬಾಡುವ ಮುನ್ನ
ಸ್ಪರ್ಶಿಸಲಿ
ಒಮ್ಮೆಯಾದರೂ
ನಿರೀಕ್ಷೆಯೊತ್ತ ಹೂವುಗಳು ||

