ಹುಡುಕತೊಡಗಿದೆ
ಹುಡುಕತೊಡಗಿದೆ
ಹುಡುಕತೊಡಗಿದ
ಎಷ್ಟೊಂದು ಸಂತೆಗಳು
ಅರ್ಥವಾಗದ ಸಂಬಂಧಗಳು
ಕಳೆದು ಹೋದ ನನ್ನ
ನಾನೇ ಹುಡುಕತೊಡಗಿದೆ ..!!
ಎಷ್ಟಂತ ಹುಡುಕುವುದು
ಮತ್ತೆ ಮತ್ತೆ ಕಳೆದು ಹೋಗುವ ನನ್ನ..!
ದ್ವೇಷವಾದ ನನ್ನೊಳಗೆ,
ಸತ್ಯದ ನನ್ನನ್ನು ಸುಳ್ಳಾದ ನನ್ನೊಳಗೆ,
ಸತ್ಯದ ನನ್ನನ್ನು |
ಗೋಜಲುಗಳೊಳಗಿನ ತಿಳಿಹರವಿನ ನನ್ನನ್ನು ತಿಳಿಹರವಿನ ನನ್ನೊಳಗೆ
ಗೋಜಲುಗಳ ನನ್ನನ್ನು
ಕಳೆದು ಹೋದ ನನ್ನ
ನಾನೇ ಹುಡುಕತೊಡಗಿದೆ ||
ಮತೀಯ ಬೀಜದುಂಡೆಗಳ
ನಡುವಿನ ಗೊಬ್ಬರದೊಳು
ಶಾಂತಿಪುಷ್ಪವಾದ
ನನ್ನನ್ನು ಹುಡುಕುತ್ತಿದ್ದೇನೆ ||
ತಂದೆತಾಯಿ ಬಂಧುಬಳಗ
ಜಾತಿಧರ್ಮ ಕುಲಗೋತ್ರ
ಸಂಬಂಧಗಳ ಸಂತೆಯಲ್ಲಿ
ನಾನೇ ನನ್ನನ್ನು ಹುಡುಕುತ್ತಿದ್ದೇನೆ ||
