STORYMIRROR

JAISHREE HALLUR

Romance Inspirational Thriller

4  

JAISHREE HALLUR

Romance Inspirational Thriller

ಒಲವಿನ ರಾಗ

ಒಲವಿನ ರಾಗ

1 min
299

ಭೃಂಗವದು ಮಕರಂದದಾ ಘಮಲಿನಲಿ ತೇಲುತ 

ಶೃಂಗಶಿಲಾಬಾಲೆಯ ನಯನದ್ವಂಗಳ ಕಮಲವೆಂದರಿತು ಸಂಗಮಿಸಿತ್ತು.


ಹೆದರಿ ಕಂಗಾಲಾಗಿ, 

ಅತ್ತಿತ್ತ ಸುಳಿದಾಡಿದ ಬಾಲೆಯ

ಅರಳು ಚೆಂದುಟಿಯನು ಕೆಂದಾವರೆಯೆಂದರಸಿತ್ತು..


ವಸಂತನಾಗಮನ, 

ಮೈದುಂಬಿ ನಿಂತ ಶಾಕುಂತಲೇ!

ನವಪುಷ್ಪಾಲಂಕೃತಳಾಗಿ ವನಸಿರಿಯ ಮಡಿಲಲ್ಲಿ , ಹಸಿರುಟ್ಟ ನೀರೆ!


ಸಖೀಯರೊಡಗೂಡಿ ವಿಹರಿಸುವಾಗ ಭೃಂಗ ತಾ ಮೋಹದಲಿ ಮುತ್ತಿಕ್ಕೆ, ಅಧರಂಗಳ ಕಂಪನ!


ವನದೇವಿ ನಲಿದು ಒಲಿದು 

ಹರಿವ ಜಲದಿ ಮಿಂದೆದ್ದ ಶುಖಪಿಕಂಗಳದೇ ಸಂಭ್ರಮ, 

ಶೃಂಗಾರ ತಾಣ!


ಆಮಿಷ, ಆಕಾಂಕ್ಷೆಗಳ 

ಹೊತ್ತ ಚಂಚಲೆ ಬಾಲೆಯತನುಮನ ಹೂವಾಗಿರೆ

ಸುಮಧುರ ಪರಾಗದ ಸಿಂಚನ!


ಭೇಟೆಗೆಂದಾಗಮಿಸಿ, ದುಶ್ಯಂತನಿಗೆ ಭ್ರಮರದೊಡನೆ ಸಲ್ಲಾಪಗೈವ ಲಲನೆಯ ಕಂಡಾಗ ವಿಸ್ಮಯ!


ಸಾಮ್ರಾಟಂಗೆ ಮೋಹಮಾಯೆ ಕಾಡಿತ್ತು, ಅಂತರಂಗದಾ ಸುಗಂಧ 

ಮೈಮನಕೂ ಹರಡಿತ್ತು!


ಬೆದರಿದ ಹರಿಣಿಯ ತಬ್ಬಿ 

ಹಗುರ ಭಾವಗಳ ತೀಡೆ,

ಮನಕರಗಿ, ಹರಿಸಿತ್ತು 

ರಸನಿಮಿಷದ ಕೋಡಿ!


ವನ್ಯಮೃಗಂಗಳು ಸ್ತಬ್ದ! ಜೀವರಾಶಿಯೆಲ್ಲ ಮೌನ!

ಹರಿದ್ವರ್ಣಗಳೂ ತಟಸ್ತವಾಗೆ,

ನವಿಲನಾಟ್ಯ ಮರೆತಂತೆ ಅರೆಗಳಿಗೆ !


ಆನನದಿ ಉನ್ಮಾದುತ್ತುಂಗ; 

ಅಧರಸವಿ, ಬೆದರುಕಣ್ಣೆವೆಗಳ

ಸವರೆ ಮೆಲ್ಲನೆ, 

ಕನ್ಯೆಯವಳ ಹೃದಯಮಿಡಿದ 

ಒಲವಿನ ರಾಗ ಮೋಹನ.


Rate this content
Log in

Similar kannada poem from Romance