ರಾಷ್ಟ್ರ ನೇತಾರರು
ರಾಷ್ಟ್ರ ನೇತಾರರು
ಸ್ಮರಿಸಬೇಕು ದೇಶದ ಜನರು
ಇರುವವರೆಗೂ ಕೊನೆಯ ಉಸಿರು,
ಸ್ವಾತಂತ್ರವ ಬಿತ್ತಿ ಹೋಗಿಹರು
ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
ಸತ್ಯ ಅಹಿಂಸೆಯ ಹೇಳಿಕೊಟ್ಟರು
ರಾಷ್ಟ್ರಪಿತರಾಗಿ ಹೆಸರಾದವರು,
ಖಾದಿ ಉಡುಗೆಯಲ್ಲೇ ಹಿತ ಕಂಡವರು
ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
ಕೈಯ್ಯ ಕೋಲಿನಲೆ ದೇಶ ನಡೆಸಿದರು
ಬ್ರಿಟಿಷರ ಭಾರತದಿಂದ ತೊಲಗಿಸಿದರು,
ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದವರು
ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
ಸ್ವತಂತ್ರ ಭಾರತದ ಕನಸು ಕಂಡವರು
ಬಾಪೂಜಿ ಮಹಾತ್ಮ ಬಿರುದಾಂಕಿತರು,
ಸರಳ ಸನ್ನಡತೆ ತೋರಿಸಿಕೊಟ್ಟವರು
ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
ಜೈ ಜವಾನ್ ಜೈ ಕಿಸಾನ್ ಘೋಷಿಸಿದವರು
ಪ್ರಧಾನಿಯಾಗಿ ಬುನಾದಿ ಕಟ್ಟಿಕೊಟ್ಟವರು,
ಕಾರಾಗೃಹದಲ್ಲೂ ಸ್ವಾಭಿಮಾನ ಮೆರೆದರು
ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
ಗಾಂಧಿ ಶಾಸ್ತ್ರಿಯಂತಹ ಹೆಮ್ಮೆಯ ಪುತ್ರರು
ಭಾರತಾಂಬೆಯ ಮಡಿಲ ದಿಟ್ಟ ನಾಯಕರು,
ರಾಷ್ಟ್ರಭಕ್ತಿಮಾರ್ಗವ ಎಲ್ಲರಿಗೆ ತೋರಿದರು
ಇವರೇ ನಮ್ಮ ಹೆಮ್ಮೆಯ ರಾಷ್ಟ್ರ ನೇತಾರರು!
