STORYMIRROR

manjula g s

Abstract Inspirational Others

3  

manjula g s

Abstract Inspirational Others

ಮಮತೆಯ ಕಡಲು

ಮಮತೆಯ ಕಡಲು

1 min
17



ಶೀರ್ಷಿಕೆ:- ಮಮತೆಯ ಕಡಲು

ಅಮ್ಮಾ.... ನಿನ್ನಯ ಮಡಿಲು 
ಅದುವೇ ಮಮತೆಯ ಕಡಲು, 
ನಿತ್ಯ ನಿನ್ನಾದರವ ಪಡೆಯಲು 
ನಾನಾದೆ ತೆರೆದೆದೆಯ ಮುಗಿಲು! 

ಸಾಧ್ಯವೇ ನಿನ್ನೊಲವ ಬಣ್ಣಿಸಲು 
ಅದು ಪ್ರಜ್ವಲಿಸಿದಂತೆಯೇ ಹಗಲು, 
ಪ್ರಶಾಂತ ನೆಮ್ಮದಿಯ ನಾನರಸಲು 
ಮತ್ತದೇ ತಂಪಿಡುವ ಬೆಳದಿಂಗಳು! 

ನೀನಿರುವೆ ಕನಸ ಕೊಸರಾಟದಲು
ಉಸಿರಿಗೆ ಉಸಿರಾಗೆನ್ನ ಶ್ವಾಸದಲು, 
ನನ್ನಯ ಪ್ರತಿ ನೋವೂ ನಲಿವಲು 
ಕೊಡು ನಿನ್ನ ಛಾಯೆಯ ಎರವಲು! 

✍️ ಮಂಜುಳಾ ಪ್ರಸಾದ್✍️


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract