ಹಸಿರ ತಾಯಿ
ಹಸಿರ ತಾಯಿ
ನಾನು ನಿನ್ನ ಹುಡುಕಿ ಬಂದೆ
ನೀನು ನನ್ನ ನೋಡು ಇಂದೆ,
ಜೇನು ಸವಿಯ ಪ್ರೀತಿ ನೀಡು
ಬೇನೆ ತಾಗದಂತೆ ಮಾಡು!
ತಾಯೆ ನಿನ್ನ ಮಗಳು ನಾನು
ಕಾಯಬೇಕು ನನ್ನ ನೀನು,
ನೋಯದಂತ ಬಾಳು ಕೊಡಲು
ಛಾಯೆಯಾಗಿ ಕಾಯೆ ಒಡಲು!
ಹಸಿರ ಮರವೇ ನೀನೆ ಮಾತೆ
ಉಸಿರ ನೀಡ್ವ ಜನ್ಮದಾತೆ,
ಬಸಿರ ಹೊತ್ತು ಜೀವ ಪೊರೆವೆ
ಸಸಿಯ ತೆರದಿ ನಾನು ಬೆಳೆವೆ!
ಸಕಲ ಜೀವರಾಶಿ ಜಗದಿ
ವಿಕಲವಾಗದಂತೆ ಸೊಗದಿ
ಸುಖವ ನೀಡಿ ಸಲಹು ಸಾಕು
ಚಕಿತ ಲೋಕ ಉಳಿಯಬೇಕು!
✍️ ಮಂಜುಳಾ ಪ್ರಸಾದ್✍️
