ತಾಯ ಸೆರಗು
ತಾಯ ಸೆರಗು
ಏನು ಮುದವೊ ಕಾಣೆ ತಾಯೆ
ನಿನ್ನ ಸೆರಗ ಅಡಿಯಲಿ,
ಸೋನೆ ಸುರಿವಮಳೆಯ ಮಾಯೆ
ಕಾಣದಾಯ್ತು ನಡೆಯಲಿ!
ಮನೆಗೆ ಮರೆತು ಬಂದ ಕೊಡೆಯೆ
ಬೇಡವಾಯ್ತು ದಾರಿಲಿ,
ಮಳೆಗೆ ನೆನೆವ ಭಯವು ಇಲ್ಲದೆಯೆ
ನಡೆದುದಾಯ್ತು ಹುರುಪಲಿ!
ಬಿಸಿಲು ಬಿರುಗಾಳಿ ಹೊಡೆಯೆ
ಅಸ್ತ್ರವಿದುವೆ ನಿನ್ನಲಿ,
ತಾಪ ಧೂಳಿನ ಪ್ರತಾಪ ತಡೆಯೆ
ವಸ್ತ್ರವಿಹುದು ಜೊತೆಯಲಿ!
ನೀನು ಹಾಗೆ ಸೆರಗ ಹೊದೆಯೆ
ಅದುವೆ ಬಲವು ಬಾಳಲಿ,
ತಾಗದಂತೆ ಯಾವ ದುಷ್ಟ ಛಾಯೆ
ಕಾಪಾಡುವುದು ಒಡಲಲಿ!
✍️ ಮಂಜುಳಾ ಪ್ರಸಾದ್✍️
