STORYMIRROR

manjula g s

Abstract Inspirational Others

4  

manjula g s

Abstract Inspirational Others

ಚಿಲಿಪಿಲಿ ಕಲರವ

ಚಿಲಿಪಿಲಿ ಕಲರವ

1 min
6


ಅರುಣೋದಯದ ಆರತಿಗೆ 

ಹಿಮ್ಮೇಳದಂತಹ ವಾದ್ಯಗೋಷ್ಠಿ!  

ಚಿಲಿಪಿಲಿ ಕಲರವದಲಿ ಬುವಿಗೆ 

ರಸದೌತಣ ಉಣಬಡಿಸಿದೆ ಈ ಸೃಷ್ಟಿ! 


ಸಪ್ತಸ್ವರದ ಏರಿಳಿತಗಳಿಗೆ 

ಮಿಡಿದು ಮುದಗೊಳ್ಳುವ ಮನಸು,

ಗೂಡಿನಿಂದ ಹೊರ ಬರುವ ಕನಸಿಗೆ 

ರೋಮಾಂಚನದಿ ಪುಳಕವಾಗುವ ಸೊಗಸು!


ಎಲೆ ಮರೆಯ ಪೊಟರೆಯೊಳಗೆ 

ನಾನಾ ಹಕ್ಕಿ ಭಾಷೆಗಳ ಸಂವಹನ, 

ಮೈಮನ ಮರೆಯುವ ಜಗದೊಳಗೆ 

ನವೋತ್ಸಾಹ ಚೈತನ್ಯದ ಮರು ಸಂಚಲನ! 


ಮುಂಜಾನೆಯ ಸವಿ ನಿದ್ರೆಗೆ 

ಎಚ್ಚರಿಕೆಯ ಕರೆಗಂಟೆಯ ಕೂಗು, 

ಹೆಗಲೇರುವ ನಿತ್ಯ ಕಾರ್ಯಗಳಿಗೆ 

ಪ್ರಾರಂಭೋತ್ಸವ ಸಾರಿದೆ ಹೊಸ ಬೆಳಗು! 


Rate this content
Log in

Similar kannada poem from Abstract