STORYMIRROR

manjula g s

Abstract Inspirational Others

4  

manjula g s

Abstract Inspirational Others

ಚಳಿಗಾಲ

ಚಳಿಗಾಲ

1 min
23


(ಮಂದಾನಿಲ ಲಯ) 


ಚುಮುಚುಮು ಚಳಿಯಲಿ ಮಲೆಗಳ ನಡುವಲಿ

ಮಂಜಿನ ತೇರಿನ ಮೆರವಣಿಗೆ/

ಹನಿಹನಿ ಇಬ್ಬನಿ ಗಾಳಿಯ ಸೇರುತ 

ಬೀಸಿದೆ ತಂಪಿನ ಬೀಸಣಿಗೆ//


ಗಿಡಮರ ತೂಗುತ ಸಮ್ಮತಿ ತೋರುತ 

ಹಸಿರಿನ ಚಿಗುರಿನ ದೀವಟಿಗೆ/

ಹಾರುವ ಹಕ್ಕಿಗೆ ಗೂಡಿನ ಒಳಗಡೆ 

ಒಲವಿನ ಬಂಧದ ಉಪ್ಪರಿಗೆ//


ನೇಸರ ಉದಯಿಸಿ ಬೆಳಕನು ಚುಮುಕಿಸಿ 

ಹಗಲನು ಬಿತ್ತಿಹ ಜಗದೊಳಗೆ/

ಜುಳುಜುಳು ನೀರಿಗೆ ನಿಲ್ಲದ ಆತುರ 

ಕಲರವ ಮಿಂದಿದೆ ಹೊಳೆಯೊಳಗೆ//


ಸಗ್ಗವ ಮೀರಿಸಿ ಧರೆಯದು ಬೀಗುತ 

ಪಂದ್ಯವ ಒಡ್ಡಿದೆ ಕಂಗಳಿಗೆ/

ಕಲುಷಿತ ಮಾಡದೆ ಪರಿಸರ ಉಳಿಸುತ 

ರಕ್ಷಣೆ ಮಾಡುವ ಇದಹೀಗೆ//


Rate this content
Log in

Similar kannada poem from Abstract