ಪ್ರೇಮದಮಲು
ಪ್ರೇಮದಮಲು
ನನ್ನ ಚೆಲುವಿಕೆಗೆ ನೀನೇ ಕಾರಣವೆಂದು
ಬೀಗಿದ್ದೆ ನಾನಂದು ಕನ್ನಡಿಯ ಮುಂದೆ.
ನನ್ನ ಪ್ರೇಮದಮಲು ನೀನೇ ಎಂದು
ಮನದೊಳಗೆ ಕನಸುಗಳ ಕಟ್ಟಿದ್ದೆನಲ್ಲಾ.
ನನ್ನ ಕವನಗಳಿಗೆ ಪದಗಳೆಂದು ನಿನ್ನನೇ
ಆಯ್ದು ಪೋಣಿಸಿದ್ದು ಸುಳ್ಳಾದವಲ್ಲಾ.
ನನ್ನ ಭಾವನೆಗಳಿಗೆ ಜೀವವಿತ್ತು ಮಿಡಿವ
ರಾಗವಿದು ಮೌನವಾಗಿ ರೋಧಿಸುತಿದೆ.
ನನ್ನ ಅಚಲ ಪ್ರೀತಿಯಲಿ ಕಳಂಕವಿತ್ತೇ?
ಹೊಸೆದ ಆಸೆಗಳಲಿ ಸ್ವಾರ್ಥ ಕಂಡಿತೇ?
ಇರಲಿ ಬಿಡು ವಾದ ಬೇಡ, ಕೇಳೆನೆಂತು
ಬರಲಿ ಬಿಡು ಬಿಕ್ಕುವಿಕೆ ನಿನಗೇಕೆ ಚಿಂತೆ
ಭಾವ ಬರಿದಾದರೇನು? ಭುವಿ ಬರಡೇ
ಹಾವ ಬದಲಾದರೇನು? ನಾನು ನಾನೇ.
ನಿನ್ನತನವನೇ ಕಳೆದೊಗೆದ ಜೋಗಿ ನೀ
ಭಿನ್ನಹವಿಲ್ಲ ನಿನ್ನಲಿ, ಅಚಲವೆನ್ನ ಮನ.
ಏಕಾಂಗಿಯಾಗಿ ಹೊರಡಲನುವಷ್ಟೇ
ಯಾರಾದರೂ ಸಿಕ್ಕಾರು ಪ್ರೀತಿ ಜಗದಿ.

