ಕರುಣೆಯಿರದ...ಕೊರೋನಾ
ಕರುಣೆಯಿರದ...ಕೊರೋನಾ


ಕರೆಯದೆಯೇ ಬಂದ ನಿನ್ನ ಹ್ಯಾಂಗ ಗುರುತಿಸಲಿ?
ಕಂಗಳಿಗೆ ನೀ ಕಾಣಾಂಗಿಲ್ಲ,ಎದುರಿಗೂ ಬರಾಂಗಿಲ್ಲ
ಕಣ್ಣು,ಮೂಗು,ಬಾಯಿ ಸುತ್ತ ತಿರಗತಿಯಂದ್ರ ನಂಬಂಗಿಲ್ಲ
ಗಾಳಿಗುಟ ಹಾದ ಹೋದಿ,ಸ್ಪರ್ಶಕ ಸೊರಗಿ ಬಿದ್ದಾತು.
ಮಳಿಹನಿಯಾಗ ತೇಲದಂಗಾತು,ರೆಪ್ಪಿಮಾತು ಕಳದೋತು.
ಮುಖಗವುಸು ಧರಿಸಿಕೊಂಡು ಬೆಪ್ಪನಹಾಂಗ ನಡದಾತು
ವಿದೇಶದ ವ್ಯಾಮೋಹ ಕಳಚಿದಂಗಾತು
ತುತ್ತುಕೂಳಿಗೂ ರೈತನ ನಂಬಿ ಬದುಕುದಾತು.
ದುಡಿಯುವ ಕೈಗಳು ಕೈ ಕಟ್ಟಿ ಕೂತಾತು.
ಮನಿಮನಿ ತಿರುಗೋ ಕಾಲಿಗೆ ಚಕ್ರ ಬಿದ್ದಂಗಾತು.
ಇದ್ದ ಬಿದ್ದದ್ದೆಲ್ಲ ತಗದು ತಿಂದು ತೇಗಿದಂಗಾತು.
ಸ್ಯಾನಿಟರೈಸ್ ಹಾಕಿ ತೊಳದಿದ್ದೆ ಬಂತು.
ಮಾಸ್ಕ ಧರಿಸಿ ಓಡಾಡಿದ್ದೆ ಬಂತು.
ಆದರೂ ಕರುಣೆಯಿರದ ಕೊರೋನಾ ಒಕ್ಕರಿಸಿದಂಗಾತು
ಇದ್ದಬಿದ್ದ ಮೂಲಿ ಸ್ವಚ್ಜಾಗಿ ಹೊಳಿತಿದ್ದರೂ
ಉಸಿರುಗಟ್ಟಿ ಸಾಯವಂತ ಜೀವ ನಮ್ಮ ದಾತು
ಹಾಳುಮುಳು ತಿಂದು ಕೊರೋನಾ ಬರುವಂಗ
ಾತು
ಸ್ವಚ್ಚತೆ ದಿಕ್ಕರಿಸಿದರ ರೋಗ ಬರದ ಉಳಿದಿತೇನು?
ಭಾರತೀಯ ಪರಂಪರೆಯ ಮರೆಯೋದೇನು?
ಇನ್ನಾದರೂ ಎದ್ದೆಳಿ.! ಜೀವದ ಮೌಲ್ಯಕೆ ಬೆಲೆ ನೀಡಿ.!
ಗಳಿಸಿದ್ದೆಲ್ಲ ಮಣ್ಣಾಗ ಮಣ್ಣಾಗಿ ಹುದುಗಿಹುದು
ಕೊರೋನಾ ಅಥಿತಿಯಾಗಲು ಬಿಡದೇ
ಎಚ್ಚರದಿಂದ ಬಾಳುವೆ ನಡಿಸೋದ ಕಲಿಯಬೆಕು.
ಮಕ್ಕಳು, ವೃದ್ದರ ರಕ್ಷಣೆ ನಮ್ಮದು ಮರೆಯದಿರಿ
ದೇಶಕೆ ಬಲವಾಗಲೂ ಹಿಂದೇಟಾಕದಿರಿ
ಸತ್ತರು ಹೂಳಲು ಬರರು ಯ್ಯಾರು?
ನಮ್ಮ ಗೋರಿಗೆ ನಾವೇ ಸಾಕ್ಷಿಯಾಗದಿರಲಿ
ಮನೋಬಲವ ಹೆಚ್ಚಿಸಿ,ಜಾಗೃತಿಯ ಮೂಡಿಸಿ
ಸೊಂಕಿತರಿಗೆ ಧೈರ್ಯ ತುಂಬಿ ಬದುಕಲು
ಮಾನವೀಯತೆಯ ಮಂತ್ರವ ಹಾಡಲು
ಭಾರತಮಾತೆಯ ಮಕ್ಕಳು ನಾವು
ಸಾವಿಗೆ ಜಾತಿಮತದ ಅಂತರವಿಲ್ಲವೆಂಬುದ ಸಾರಿ..
ವಿಶ್ವವೇ ನಡುಗುತಲಿಹುದು ಸೊಂಕಿಂದ..
ಧೈರ್ಯಗೆಡದೆ ಒಗ್ಗಟ್ಟಿನಿಂದ ಹೋರಾಡಿ
ಮನೆಯಲ್ಲಿದ್ದು ಆರೋಗ್ಯ ಕಾಪಾಡಿ...