STORYMIRROR

Lakshmi Kanth L V

Romance Classics Others

4  

Lakshmi Kanth L V

Romance Classics Others

ಗಜಲ್

ಗಜಲ್

1 min
318

ಹಗಲು ಕಾಣದ ರಾತ್ರಿಗಳಲ್ಲಿ ನಿನ್ನ ಕಣ್ಣಿನ ಕಾಂತಿಯಾದರೂ ತುಂಬಿರಲಿ

ಇಲ್ಲವೇ ಅದೇ ರಾತ್ರಿಗಳಲ್ಲಿ ನಿನ್ನ ಒಲವಿನ ಬೆಳದಿಂಗಳಾದರೂ ತುಂಬಿರಲಿ


ಹುಣ್ಣಿಮೆ ಬರದಿದ್ದರೇನಂತೆ ಚೆಂಬೆಳಕು ನಿನ್ನ ಮೊಗದಲ್ಲಿಯೇ ತುಂಬಿದೆ

ನೋವಿಲ್ಲದ ಪ್ರೀತಿಗೆ ಸದಾ ಜೊತೆಯಿರುವ ನಿನ್ನ ನಗುವಾದರೂ ತುಂಬಿರಲಿ


ಸೋತರೂ ಗೆಲ್ಲುವ ದಿಕ್ಕಿಗೆ ಹೆಜ್ಜೆಯಿಟ್ಟು ಸಾಗೋಣ ಮನಸು ಮುರಿಯದಂತೆ

ಕನಸು ನನಸಾದಾಗ ಕೈಹಿಡಿದು ಜೊತೆಯಾಗುವ ಗಳಿಗೆಯಾದರೂ ತುಂಬಿರಲಿ


ಮೈಖಾನೆಯಲ್ಲಿ ಖಾಲಿ ಕನಸುಗಳು ನಿದ್ದೆಗೆಡಿಸುತ್ತಾ ಗಿರಕಿ ಹೊಡೆಯುತ್ತಿವೆ

ಕಣ್ಣಿಂದ ಜಾರಿದರೂ ಹನಿಯಲ್ಲಿ ನಿನ್ನ ಒಲವಿನ ಸನ್ನೆಯಾದರೂ ತುಂಬಿರಲಿ


ಮೌನ ಮನಸ್ಸಿಗೇನು ಗೊತ್ತು ಲಕ್ಷ್ಮೀಶನ ಒಲವಿನ ಅಂತರಂಗದ ಗುಟ್ಟು

ಪ್ರೀತಿಗಾಗಿ ಕಾಡಿ ಬೇಡದಂತೆ ಹಗಲಿನಲ್ಲಿ ನಿನ್ನ ಸನಿಹವಾದರೂ ತುಂಬಿರಲಿ


Rate this content
Log in

Similar kannada poem from Romance