ಪಯಣ ಪ್ರೀತಿ
ಪಯಣ ಪ್ರೀತಿ
ಕಾರ್ಮೋಡ ಕವಿದು ಬಂದಿದೆ
ಮಳೆರಾಯನಿಗೆ ಕಾಯುತ್ತಿರುವೆ ಬಸವಳಿದು ಹೋಗುತ್ತಿರುವೆ
ಭೂಮಿ ಮಾತೆಗೆ ನಮಸ್ಕಾರ ಹಾಕಿದೆ
ಅಂದು ನೀನು ಹೇಳಿದ ಮಾತುಗಳನ್ನು ಕೇಳಿಸಿತು
ನನ್ನ ಮನಸಿಗೆ ಎನ್ನೋ ಒಂದು ಭಾವ ಹೇಳಿಸಿತು
ನನ್ನ ಆ ಕಷ್ಟದ ನಷ್ಟವನ್ನು ನಿನ್ನ ಕವಿತೆ ಮರೆಸಿತು
ನನ್ನಲ್ಲಿ ಹೊಸ ಛಲವನ್ನು ಆ ಸಾಹಿತ್ಯ ಸಾಧಿಸಿತು
ನಿನ್ನ ಮುದ್ದಾದ ನುಡಿಯುವ ಭಾವದಲ್ಲಿ
ಮನಸಿಗೆ ಏನೋ ಹೊಸ ಸಂಚಲನದಲ್ಲಿ
ನಿನ್ನ ಕಂಡ ಆ ಮನದ ಸಂತೋಷದಲ್ಲಿ
ಮುದ್ದಾದ ನವ ಪ್ರೀತಿಯ ನಿಯಮದಲ್ಲಿ

