ನನ್ನ ಒಲವೇ ❤️
ನನ್ನ ಒಲವೇ ❤️
ನೀ ಎದುರಿಗೆ ಬರುವ ಸೂಚನೆ
ಧರೆಗೆ ಬೀಳುವ ಹನಿಯೇ ಎಂದು
ಬಾನಲ್ಲಿನ ಮೋಡ ನುಸು ನಕ್ಕಿದೆ
ತಂಗಾಳಿ ಮೈಗೆ ತಾಗಿ ನಿನ್ನನೇ ಅನುಕರಿಸಿದೆ
ನೋಡದಿರು ನೀನು ಅರಿಯದೆಯೇ ನಾ ನಾಚಿದೆ
ಮುಂಜಾನೆಯ ಬಾನಲ್ಲಿನ ದೀಪವೇ ನೀನು
ಇರುಳಲ್ಲಿ ನಾನೊಬ್ಬನೇ ನೋಡ ಬಯಸುವೆ ನ್ನಿನನು
ತಡ ಮಾಡದೆ ಬಂದುಬಿಡು ತುಸು ಸ್ವಾರ್ಥಿ ನಾನು
ಮಾತಾಡದೆ ಹೇಗಿರಲೇ ನಿನ್ನ ಸನಿಹದಲ್ಲಿ
ನಿನ್ನ ಮುಂಗುರುಳ ದಾಸ ನಾನು
ಸರಿಸುವ ಆತುರದಲ್ಲಿ
ನಿನ್ನ ನಗುವಿಗೆ ಆ ಸೂರ್ಯನೇ ನಾಚಿ
ಆಕಾಶವೇ ಕೆಂಪಾಗಿ..
ಇನ್ನು ನನ್ನ ಕಥೆ ಕೇಳುವೆಯೇ?
ಕಳೆದು ಹೋದ ಮಗುವು ನಾನು ದೂರದಿಂದಲೇ ನೋಡಿ ತೀರಾ ಸಾಮಾನ್ಯನಾಗಿ
ನನ್ನ ಒಲವೇ ನನ್ನ ಒಲವೇ.

