ಒಲವೆ ವಿಸ್ಮಯ
ಒಲವೆ ವಿಸ್ಮಯ
ಅಲೆದಾಡುತ ಮನವು
ಎಲ್ಲೋ ಸನಿಹದಲ್ಲಿ..
ಹೊರನಡೆಯಿತು, ನೆರಳ
ನಿನ್ನ ಮರೆಯಲ್ಲಿ.
ಮುಂಗುರುಳವು ಕಣ್ಣ ಕಾವಲಾಗಿ ನಿಂದೆ..
ಆ ಗಾಳಿಗೂ ನಾನು ಹಿತಶತ್ರುವಿನಂತೆ..
ಕನ್ನೋಟದ, ಸಮ್ಮೀಲನಕೆ , ಕಾಯುತ ಘಳಿಗೆ..
ಕುಡಿನೋಟಕೆ ಸಿಲುಕಿ ಮರೆತಂತೆ ಧರೆಯೆ..
ಮಾತಿದ್ದರು ನೂರು ,ಮೌನಿಯಾದ ಗಂಗೆ..
ನಾಚಿಕೆಗೆ ಒಂದು, ಪರಿಭಾಷೆಯಂತೆ..
ಕನವರಿಕೆಯ, ಪರಮಾವಧಿ..
ಬರೆಯುತ ಕವನ..
ನಿನ್ನನಗೆಯ ,ಆಲ್ಫಾವಧಿ..
ಹೊಳೆಯಿತು ಗಗನ..
ಗುಣದಲ್ಲಿ ಅವಳ, ಸೌಂದರ್ಯವೇ ಹೋಲುವಂತೆ..
ಕರುಣೆಯೇ ಒಮ್ಮೆ, ಇವಳ ಅನುಸರಿಸುವಂತೆ..
ಪ್ರೀತಿಗೂ ಇವಳೇ ,ಅದರ್ಷದಂತೆ..
ಮಳೆಬಿಲ್ಲು ಕೂಡ ಇವಳಿಗೆ ಸ್ಪರ್ಧಿಸುವಂತೆ..
ದೇವತೆಯೇ, ಸ್ನೇಹಿತೆಯೇ..
ನನ್ನೀ ಗಮನ ..
ಎಂದೆಂದಿಗೂ, ನನ್ನೊಂದಿಗೆ
ನಿನ್ನ ಪಯಣ!...

