ಓಡಿ ಹೋಗದಿರು
ಓಡಿ ಹೋಗದಿರು
ನಿಲ್ಲು ಹುಡುಗೀ.... ಓಡಿ ಹೋಗದಿರು
ಕಣ್ಣರೆಪ್ಪೆ ಬಿಡುವ ಮುನ್ನ ಕಳೆದು ಹೋಗದಿರು..
ನೀ ಮಾಯವಾಗದಿರು..
ಸನಿಹ ಇದ್ದರೆ ನೀನು ಎದೆಯಲೇನೋ ಸೆಳೆತ
ಬಿಡದೆ ಕಾಡಿದೆ ಒಲವ ಅಲೆಯ ಮೊರೆತ
ಕಾಣದೆ ಮರೆಯಾಗಿ ಹೋಗದಿರು..
ನೀ ಓಡಿ ಹೋಗದಿರು...
ಏನೋ ಗೀಚಿ ಹೋದೆ ನೀನು
ನನ್ಹೆದೆಯ ಪುಟದ ಮೇಲೆ
ಹಾಡಾಗಿ ಎದೆತುಂಬಿ ಹರಿಯುತಿದೆ
ನೋವು ಮರೆಸಿ ಒಲವ ವೀಣೆ ನುಡಿಸಿ
ಪ್ರೀತಿ ಅಂಚೆ ತಂದು ಕಂಗಳಿಗೆ ಸುಖವ ಕೊಟ್ಟು
ಕಣ್ಣು ತೆರೆವ ಮೊದಲೆ ಮಾಯವಾಗದಿರು...
ನೀ ಓಡಿ ಹೋಗದಿರು..

