ಮೌನ ಶರಣಾಗಿದೆ
ಮೌನ ಶರಣಾಗಿದೆ
ಮಳೆ ಹನಿಯೇ ಮಾತಾಡಿ
ನನ್ನೆದೆಯೊಳಗೆ ಪ್ರೀತಿ ಜಾರೋಗಿ
ನೆನಪೊಂದು ಇಲ್ಲಿ ನೆಪವಾಗಿ
ನಿನ್ನ ದಾರಿಯೇ ಕಾದಿದೆ
ಮಾತೇ ಮರೆತು ಹೋದಂತೆ
ಹೊಸ ಪ್ರೀತಿ ಶುರುವಾದಂತೆ
ಮನಸೊಂದು ಇಲ್ಲಿ ಶರಣಾಗಿ
ಮೌನ ಸಮ್ಮತಿ ನೀಡಿದೆ
ನನ್ನೊಲವೇ ನೀನು ನಿನ್ನೊಳಗೆ ನಾನು
ಕಳೆದೋದೆ ನಾನಿಂದು
ಬರಬಾರದೇ ನೀನು ಜೊತೆಯಾಗಿ ನಾನು
ನನಸಾಗಿದೆ ಕನಸಿಂದು
ಮೌನವೇ ಇಲ್ಲಿ ಶರಣಾಗಿ
ಮನದಿ ಪದ ಬರಿದಾಗಿದೆ
ಮುಂಗುರಳ ಸೋಕಿ ನಗುವಿಲ್ಲಿ
ವಿಳಾಸ ಇಲ್ಲದೆ ಅಲೆದಾಡಿದೆ
ಕಳೆದು ಹೋಗೋ ಮನಸು
ನಿನ್ನ ನೆನಪನೆ ಕನವರಿಸಿ
ಕಾಣದೆ ಬೇರೊಂದು ಕನಸು
ನಿನ್ನ ದಾರಿಯೇ ಕಾದಿದೆ
ನನ್ನೊಲವೇ ನೀನು ನಿನ್ನೊಳಗೆ ನಾನು
ಕಳೆದೋದೆ ನಾನಿಂದು
ಬರಬಾರದೇ ನೀನು ಜೊತೆಯಾಗಿ ನಾನು
ನನಸಾಗಿದೆ ಕನಸಿಂದು

