STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಓ ಗೆಳೆಯಾ!!!!!

ಓ ಗೆಳೆಯಾ!!!!!

1 min
327

ನನ್ನ ನಿನ್ನ ಪರಿಚಯ ಇಂದಿನದಲ್ಲ ಗೆಳೆಯಾ..

ಹೆಸರಿಂದಲ್ಲ, ಮುಖಪರಿಚಯವೂ ಅಲ್ಲ

ಮತ್ಯಾವುದೆನ್ನುವೆಯಾ...?

ಅದು ಅಂತರಂಗದ ಮಾತು..

ತರಂಗಗಳ ರಂಗಾಯಣ

ಮಧುರ ಕನಸುಗಳ ಶೃಂಗಾರ ಹಾರ

ಚುಕ್ಕಿಚಂದ್ರಮರ ಸುಂದರ ನಗರ


ಅಲ್ಲೊಂದು ವೇದಿಕೆ, ಒಂದಿಷ್ಟು ಗಾಯನ, 

ಪ್ರೇಮಾಯಣ, ಕವನ.

ಹೃದಯಕೊಂದಿಷ್ಟು ಹವನ

ಈ ಪ್ರೇಮಜ್ವಾಲೆಗೆ ನೀನೆರೆದ 

ಬಿಸಿತುಪ್ಪ ಅದೆಂತು ಘನ..

ಉರಿವ ವಿರಹಾಗ್ನಿ ಭುಗಿಲ್ಲೆಂದು..

ಹೊಗೆಯಾಡುವ ಕ್ಷಣ.


ಆದರೂ ಆ ನಿನ್ನ ಪದಸ್ಪರ್ಶಗಳಿಗೆ

ಎಲ್ಲಿಲ್ಲದ ಮಾಧುರ್ಯ

ನಿನ್ನೊಲವ ಮಂತ್ರಗಳ ಘೋಷಕೆ

ಇಲ್ಲಿ ಮಿಡಿವ ಭಾವಗಳ ಆವೇಶ

ಕದಡಿ ಹೊರಳಾಡುವ ಕನಸಿವಶೇಷ

ಉಫ್! ಎಂದುಬಿಡು ಒಮ್ಮೆ ..

ತಂಪಿನ ಬಿಸಿಯುಸಿರನು

ನಂದಿಹೋಗಲಿ ಜ್ವಾಲೆ, ಕನಸು ಹಾರಲಿ ಮೇಲೆ..

ನಿತ್ಯ ಕುಸುಮದನುರಾಗ ಮಾಲೆ

ಅರಳಿ ಚೆಲ್ಲಲಿ ಪರಾಗ...


இந்த உள்ளடக்கத்தை மதிப்பிடவும்
உள்நுழை

Similar kannada poem from Romance