ನನ್ನೊಲವೇ
ನನ್ನೊಲವೇ
ನಿನ್ನ ಹೆಸರೊಡನೆ ನನ್ನ ಹೆಸರ ಸೇರಿಸುವ ಆಸೆ ಒಂದು ಬಾರಿ ಒಪ್ಪಿಗೆ ನೀಡುವೆಯಾ.
ನಿನ್ನ ನೆರಳನ್ನು ಹಿಂಬಾಲಿಸುವ ಬಯಕೆ ನನ್ನನ್ನು ಹಿಂದಿರುಗಿ ನೋಡುವೆಯಾ.....
ನಿನ್ನ ಬೆರಳುಗಳೊಂದಿಗೆ ನನ್ನ ಪುಟ್ಟ ಬೆರಳುಗಳನ್ನು ಬಂಧಿಸುವ ಇಚ್ಛೆ ಪೂರ್ಣಗೊಳಿಸಲು ಸಹಕಾರಿಸುವೆಯಾ....
ನಿನ್ನ ಬಾಹುವಿನಲ್ಲಿ ಪುಟ್ಟ ಕಂದನಂತೆ ಬಚ್ಚಿಟು ಕೊಳ್ಳುವ ಹಂಬಲ ನನ್ನನ್ನು ಅಪ್ಪುವೆಯಾ...
ನಿನ್ನ ಎದೆಗುಡಿನಲ್ಲಿ ಸೇರಿ ಹಾಡೊಂದನ್ನು ಗೊಣುಗುವ ಕನಸು ನಿನ್ನ ಎದೆ ಎಂಬ ಸಿಂಹಾಸನದಲ್ಲಿ ನಿನ್ನ ಸಿಂಹಿಣಿ ಆಗಲು ಅವಕಾಶ ಕೊಡುವೆಯಾ....

