STORYMIRROR

Gireesh pm Giree

Abstract Action Inspirational

4  

Gireesh pm Giree

Abstract Action Inspirational

ಅರಿವಿನ ಜ್ಯೋತಿ

ಅರಿವಿನ ಜ್ಯೋತಿ

1 min
326

ಅರಿವಿನಸ್ತುತಿ ಜ್ಞಾನ ಜ್ಯೋತಿ ಬೆಳಗಿಸಿ

ಬದುಕಿನ ಪುಟಗಳಿಗೆ ಹೊಸ ಹುರುಪ ರೂಪಿಸಿ

ಅಜ್ಞಾನ ಅಂಧಕಾರವ ತೊಲಗಿಸಿ ಅಳಿಸಿ

ಸುಜ್ಞಾನ ಕುಸುಮ ಬಾಳಲ್ಲಿ ಅರಳಿಸಿ  


 ಸರ್ವರಲ್ಲೂ ಸಹಬಾಳ್ವೆ ಸಮಾನತೆ ಸಮನ್ವಯ ಚಿಂತನೆ ಉತ್ತು

ಒಂದೇ ಜಾತಿ -ಮತ ಒಬ್ಬನೇ ದೇವನೆಂಬ ತತ್ವ ಬಿತ್ತು 

ಮನುಷ್ಯ ಧರ್ಮವೇ ಹಿರಿದೆಂದು ಒಪ್ಪಿಸುವಲ್ಲಿ ಜಗತ್ತು

ಗುರುವಿನ ಚಿಂತನೆ ಮಂಥನೆ ಯಶಸ್ಸಿನ ಬೆಳಕಾಯಿತು 


ತನ್ನ ಧರ್ಮ ಸಿದ್ಧಾಂತ ಶ್ರೇಷ್ಠ ಎನ್ನುವವನು ಗುರುವಾಗನು ಎಂದೂ

ಸರ್ವಧರ್ಮ ಶ್ರೇಷ್ಠವೆಂದು ಸಾರುವಾತ ವಿಶ್ವಗುರುವಾಗುವನು ಎಂದೆದೂ

ಜಾತ್ಯಾತೀತ ತೊಟ್ಟಿಲು ತೂಗುವ ದೇಶ ನಮ್ಮ ಭಾರತ

ಆದುದರಿಂದಲೇ ಜಗಕ್ಕೆ ಜ್ಞಾನ ಜ್ಯೋತಿ ನಮ್ಮ ಭಾರತ 


ನಿನ್ನ ಮೊದಲು ಪ್ರೀತಿಸು ನೀನಿರುವ ಸಮಾಜ ಪ್ರೀತಿಸು

ಬೇಡ ಮುನಿಸು ನಾಲ್ಕು ದಿನ ನಮ್ಮ ಆಯಸ್ಸು

ಗುರುವು ಅಕ್ಷರಕ್ಕೆ ಸೀಮಿತನಾಗಿಲ್ಲದ ಸಂತ

ಅಕ್ಷರ ಸಾಗರ ಹೊರತಾಗಿಯೂ ಬದುಕಿಗೆ ನೀತಿ ಹೇಳಿದಾತ


Rate this content
Log in

Similar kannada poem from Abstract