STORYMIRROR

shristi Jat

Abstract Action Inspirational

4  

shristi Jat

Abstract Action Inspirational

ಫ್ಯಾಂಟಸಿ

ಫ್ಯಾಂಟಸಿ

1 min
308

ದಡ ತಲುಪಿದನು ಆಯಾಸಗೊಂಡು ಭ್ರಮಣ,     

ಮುಸುಕಿನಲೆ ಮೂಡಿತು ಹೊಂಗಿರಣ,         

 ಜಲ ಸೇವಿಸಲು ಬಂದ ಒಬ್ಬ ತರುಣ,        

 ಅಲ್ಲಿಂದ ಎದ್ದು ನಡೆದನು ದಾಹ ತೀರಿತು ಕ್ರಮೇಣ.

ನೀರಿನಲ್ಲಿದ್ದ ಮೊಸಳೆ ಕೂಗಿತು ಹೇ ವರುಣ,       

ಹಿಂತಿರುಗಿ ನೋಡಿ ಆಶ್ಚರ್ಯಚಿಕಿತಗೊಂಡ ತ

ರುಣ ಪ್ರಶ್ನಿಸಿದನು ಮೊಸಳೆಗೆ ಕೂಗಿನ ಕಾರಣ,        

ಸುಳಿಗೆ ಬಾಲ ಸುತ್ತಿರುವುದು ಜೀವನವಾಗಿದೆ ದಾರುಣ,                        

ಬಿಡಿಸಿದರೆ ನಮಸ್ಕರಿಸುವೆ ನಿನ್ನ ಚರಣ.

ಸುಳಿಮುಕ್ತ ಬಾಲಕಂಡು ಮೊಸಳೆ ಕೃತಜ್ಞತೆ ಜೊತೆ ನೀಡಿತು ತರುಣನಿಗೆ ಓರಣ,                  

ಮುತ್ತಿನ ಕವಚದ ಆಭರಣ,                 

ಅದನ್ನು ತೆಗೆದಾಗ ನಿನ್ನ ಬಾಳಾಗಲಿ ಸ್ಫುರಣ.

ತೆಗೆದು ನೋಡಲು ಕಾತುರತೆಯಿಂದ ಕೂಡಿತು ಅವನ ಮನ ಉಲ್ಬಣ,                      

ತೆರೆದು ಅವನಿಟ್ಟ ಹೆಜ್ಜೆ ಆಗಿತ್ತು ಬೇರೊಂದು ಗ್ರಹದ ಅಂಕಣ,                         

 ಗ್ರಹಗಳಿಂದ ಕೂಡಿದ ವಾತಾವರಣ  ದಿಗಭ್ರಮೆಗೊಂಡ ನೋಡಿ ಅಲ್ಲಿನ ಲಕ್ಷಣ,        

ಮರು ಮುಚ್ಚಿದ ಕವಚದ ಆಭರಣ ಮತ್ತೆ ಧರೆಗಿಳಿದಿದ್ದ

ಅಪಾರ ಶಕ್ತಿಯೊಂದಿಗೆ ಅಜ್ಞಾತದ ಮೌಲ್ಯಾಧಾರಣ.


Rate this content
Log in

Similar kannada poem from Abstract