STORYMIRROR

shristi Jat

Classics Inspirational Children

4  

shristi Jat

Classics Inspirational Children

ಮಕ್ಕಳು

ಮಕ್ಕಳು

1 min
289

"ಮಕ್ಕಳಿದ್ದರೆ ಮನೆ ಸಂತಸ ತುಂಬಿದ ಗೊನೆ"

ಇವರ ಹುಟ್ಟು ಒಂದು ಪರಂಪರೆ,               

ಮನೆಯ ಖುಷಿಯು ನಿರಂತರೆ.

ಇವರ ಬೆಳವಣಿಗೆಯ ಹೊನಲು,              

 ತರುವುದು ಅಂಗಳದ ನಲಿವು ನೋಡುವಾಗ ಎಲ್ಲದಕ್ಕಿಂತ ಮಿಗಿಲು.

ಇವರ ಕಲಿಕೆಯ ವಿಧಾನ,                    

ಜ್ಞಾನ ದೇಗುಲಾಗುವುದು ಪ್ರಧಾನ.

ಇವರ ಯೌವ್ವನ ಕನಸು ತುಂಬಿದ ಮೂಟೆಯ ಭಾರ, 

ನನಸಾಗಿಸಲು ನಡೆದಿದೆ ಹೋರಾಟದ ಭಂಡಾರ.

ಇವರ ಯಶಸ್ಸಿನ ವೈಶಿಷ್ಟ್ಯತೆ,                  

ನಾಡ ಬೆಳಗಿಸುವ ಹಣತೆ.

ಇವರ ಆಟವೆ ಮುಂದಿನ ಕ್ರೀಡೆಯ ಹೊಂಬಾಳೆ,    

ಜಗತ್ತಿಗೆ ಬರುವುದು ಪ್ರಗತಿಯ ಕಳೆ.

"ಮಕ್ಕಳಿದ್ದರೆ ಮನೆ ಸಂತಸ, ತುಂಬಿದ ಗೊನೆ"


Rate this content
Log in

Similar kannada poem from Classics