STORYMIRROR

shristi Jat

Classics Inspirational Others

4  

shristi Jat

Classics Inspirational Others

ಹುಟ್ಟುಹಬ್ಬ

ಹುಟ್ಟುಹಬ್ಬ

1 min
385

"ಮರಳಿ ಮರಳಿ ಬರಲಿ ಹುಟ್ಟು ಹಬ್ಬ ನಿನ್ನ ಬಾಳಿನಲಿ, ಬೆಳದಿಂಗಳಂತೆ ನಿನ್ನ ಬದುಕು ಸದಾ ಬೆಳಗುತಿರಲಿ."

ಪ್ರತಿ ನಿನ್ನ ಕ್ಷಣಗಳು ಕಳೆಯಲಿ ಹೊಸ ಹರುಷದ ಸೊಬಗಿನಲಿ.


ನಿನ್ನ ಮುಂದೆ ಗುರಿಯಿರಲಿ ಹಿಂದೆ ಗುರುವಿನ ಕೃಪೆಯಿರಲಿ.


ನಿನ್ನ ಬಾಳಿನ ದುಃಖಗಳು ಮಾಯಾವಾಗಲಿ ಸುಖಗಳು ಪ್ರತ್ಯೇಕ್ಷವಾಗಲಿ.


ನಿನ್ನ ದುಶ್ಚಟಗಳು ದೂರವಿರಲಿ ನಿನ್ನ ಹಿತಾಸಕ್ತಿಯ ಕಲೆಗಳು ಯಶಸ್ವಿಯಾಗಲಿ.


ನಿನ್ನ ಹತಾಶೆ ತೊರೆಯಲಿ ಸಂತೋಷ ಚಿಮ್ಮುತಿರಲಿ.


ನಿನ್ನಲ್ಲಿರುವ ನಕಾರಾತ್ಮಕ ಅಳಿಯಲಿ ಸಕರಾತ್ಮಕ ಬೆಳೆಯಲಿ.


ನಿನ್ನ ಕೆಡು ಬಯಸುವ ದುಷ್ಟರನ್ನು ಹೊಡೆದೊಡಿಸುವಂತಾಗಲಿ ಒಳ್ಳೆಯವರ ಬರುವಿಕೆಗೆ ಎಡೆಮಾಡಿಸುವಂತಾಗಲಿ.


ಸಜ್ಜನರ ಸಂಗ ಸಿಗುವಂತಾಗಲಿ ದುರ್ಜನರ ಸಂಗ ಅಲ್ಲಗಳೆಯುವಂತಾಗಲಿ.


"ಮರಳಿ ಮರಳಿ ಬರಲಿ ಹುಟ್ಟು ಹಬ್ಬ ನಿನ್ನ ಬಾಳಿನಲಿ, ಬೆಳದಿಂಗಳಂತೆ ನಿನ್ನ ಬದುಕು ಸದಾ ಬೆಳಗುತಿರಲಿ."


Rate this content
Log in

Similar kannada poem from Classics