ಸಹಕಾರದ ಕಾರ್ಡ್
ಸಹಕಾರದ ಕಾರ್ಡ್
ಪೊಷಕರು,ಸ್ನೇಹಿತರು, ಬಂಧುಮಿತ್ರರು,
ಸಾಲದ ರೂಪದಲ್ಲಿ ನಮ್ಮ ಬೆಳವಣಿಗೆಗೆ ಸಹಕಾರರಾಗುವವರು,
ತರಹ ಕ್ರೇಡಿಟ್ ಕಾರ್ಡ್.
ಗುರುತು ಪರಿಚಯ ಆಧಾರಗಳ ಮೂಲಕ ನಮ್ಮನ್ನು
ಸಮಾಜಕ್ಕೆ ಹೇಗೆ ತೋರ್ಪಡಿಸಿಕೊಳ್ಳಕತ್ತೆವೆ,
ನಮ್ಮ ಜೀವನ ಶೈಲಿಯು ಸಹ ಸಹಕಾರಿಯಾಗುತ್ತದೆ, ತರಹ ಆಧಾರ್ ಕಾರ್ಡ್.
ಪ್ರೋತ್ಸಾಹ ಪ್ರೀತಿ ಬೆಂಬಲ ನೀಡಿ ಸಹಕರಿಸುತ್ತೆವೆ ನಮ್ಮ ಹತ್ತಿರದವರಿಗೆ,
ಅವರ ಅವಶ್ಯಕತೆಗಳನ್ನು ಪೂರೈಸುವ ಖರ್ಚಿನ ರೀತಿ,
ತರಹ ಡೆಬಿಟ್ ಕಾರ್ಡ್.
ಸಾಂತ್ವನ ಧೈರ್ಯ ಆತ್ಮಸ್ಥೈರ್ಯವನ್ನು ತುಂಬಿ ಸಂಕಷ್ಟದಲ್ಲಿದ್ದಾಗ ನಮ್ಮ ಆತ್ಮೀಯರಿಗೆ,
ಜೀವನ ಸಾಗಿಸಲು ಪಡಿತರ ಹಾಗೆ ಸಹಕರಿಸುವೆವು, ತರಹ ರೇಶನ್ ಕಾರ್ಡ್.
ಸೌಲಭ್ಯ ಸುಧಾರಣೆ ತಿದ್ದುಪಡಿಗಳ ಬೇಡಿಕೆಗಳನ್ನಿಡುವೆವು ಗುರುಹಿರಿಯರ ಮುಂದೆ ಹಕ್ಕಿನಿಂದ,
ಮತ ನೀಡಿದ ಪ್ರಜೆ ರಾಜಕೀಯದ ಮುಂದೆ ಬೇಡಿಕೆ ಇಡುವ ಹಾಗೆ,
ತರಹ ಎಲೆಕ್ಷನ್ ಕಾರ್ಡ್.
