STORYMIRROR

shristi Jat

Classics Inspirational Others

4  

shristi Jat

Classics Inspirational Others

ಕಲ್ಪನಾ ಕಥೆ

ಕಲ್ಪನಾ ಕಥೆ

1 min
225

ಸಾಗರದಂತಹ ಕಣ್ಣುಳ್ಳವಳು 

ಹಗಲು ಮತ್ತು ರಾತ್ರಿಯಿಡಿ ನಿನ್ನ ಯೊಚನೆ ತುಂಬಿರುವೆ

ಯಾರೆ ನೀ ಯಾಮಿನಿ,                              

ಗಿಣಿಯಂತಹ ಮೂಗಿನವಳು

ತುಟಿ ಅoಚಿನಲಿ ಮಂದಹಾಸ

ಬೀರುವ ಸುಹಾಸಿನಿ,             

 ಮುದ್ದಾದ ಮೃದು ಯೋಗದಿಂದ ಕೂಡಿರುವ ನಳಿನಿ, 

ಸೌಂದರ್ಯವನ್ನೆ ನಾಚಿಸುವ ಮೋಹಿಣಿ.

ಸಕಲ ಜ್ನಾನವನ್ನೊಳಗೊಂಡಿರುವೆ

ಯಾರೆ ನೀ ಗುಪ್ತಗಾಮಿನಿ,                          

 ವಿವಿಧ ಕಲೆಗಳಲ್ಲಿ ಬೆಳಕು ಮೂಡಿಸುವ ತೇಜಸ್ವಿನಿ, 

ಆಗಾಗ ಕನವರಿಕೆಯ ಸ್ಪಟಿಕದಂತೆ ಬಂದು ಮಾಯಾವಾಗುವ ಸೌದಾಮಿನಿ,               

ನನ್ನ ರಾಗದಲ್ಲಿ ಬೆರೆತೆ ನೀ ರಾಗಿಣಿ.

ಅಧರ್ಮದೆದುರು ಸಿಡಿದೇಳುವೆ ನೀ ಭಾಮಿನಿ,     

ಧೈರ್ಯದ ನಿಲುಮೆಯಲ್ಲಿ ಈಜಿಸುವ ಹಂಸಿನಿ,   

ಇತರ ಕೇಡು ಬಯಸದ ಒಳಿತನ್ನೊಳಗೊಂಡ ಶಾಲಿನಿ,                               

ಪರ ಹಂಗಿಲ್ಲದೆ ಹೋರಾಡುವ ಸಿಂಹಿಣಿ. 

"ನನ್ನ ಕಲ್ಪನೆಯ ಹೆಣ್ಣು ನೀ ಸರ್ವ ರೂಪಿಣಿ"

    



Rate this content
Log in

Similar kannada poem from Classics