STORYMIRROR

shristi Jat

Abstract Classics Inspirational

4  

shristi Jat

Abstract Classics Inspirational

ಪ್ರೀತಿ

ಪ್ರೀತಿ

1 min
314

ಅಮ್ಮನ ಪ್ರೀತಿ,                          

ವಿಶಾಲವಾದ ಕಡಲಿನ ರೀತಿ,                 

ಇವಳ ವಾತ್ಸಲ್ಯಕ್ಕಿಲ್ಲ ಇತಿಮಿತಿ.

ಅಪ್ಪನ ಪ್ರೀತಿ,                           

 ಎತ್ತರವಾದ ಬೆಟ್ಟದ ರೀತಿ,                   

ಇವನ ಪೂರೈಕೆಗಳಿಗಿಲ್ಲ ಇತಿಮಿತಿ.

ಒಡಹುಟ್ಟಿದವರ ಪ್ರೀತಿ,                     

ಕೊಂಬೆಗಳಿಂದ ಕೂಡಿದ ಮರದ ರೀತಿ,         

 ಇವರ ಬೆಂಬಲಕ್ಕಿಲ್ಲ ಇತಿಮಿತಿ.

ಗುರುವಿನ ಪ್ರೀತಿ,                         

 ಜ್ಞಾನದ ಸರಪಳಿಯ ರೀತಿ,                  

ಇವನ ಬೊದನೆಗಿಲ್ಲ ಇತಿಮಿತಿ.

ಸ್ನೇಹಿತರ ಪ್ರೀತಿ,                         

 ಕೊನೆಯಿಲ್ಲದ ಆಕಾಶದ ರೀತಿ,               

 ಇವರ ಸಹಕಾರಕ್ಕಿಲ್ಲ ಇತಿಮಿತಿ.

ಅರ್ಧಾಂಗಿಯ ಪ್ರೀತಿ,                       

ಹಂಚಿಕೊಳ್ಳುವ ಚಪ್ಪಾಳೆಯ ರೀತಿ,            

 ಇವರ ಸ್ಪಂದನೆಗಿಲ್ಲ ಇತಿಮಿತಿ.

"ಹೆತ್ತವರ ಪ್ರೀತಿ,ಸಂಬಂಧಿಕರ ಪ್ರೀತಿ,

ಅಪರಿಚಿತರ ಪ್ರೀತಿ, ನೆರೆಹೊರೆಯವರ ಪ್ರೀತಿ,

ಪ್ರಾಣಿಗಳ ಮೇಲಿನ ಪ್ರೀತಿ, ಪಕ್ಷಿಗಳ ಮೇಲಿನ ಪ್ರೀತಿ

ಬದುಕಿಗೆ ಆಸರೆಯಾಗುವುದು ಇವರೆಲ್ಲರ ಸಂಪ್ರೀತಿ"



Rate this content
Log in

Similar kannada poem from Abstract