ಜೀವನ ಒಂದು ಕೈಪಿಡಿ
ಜೀವನ ಒಂದು ಕೈಪಿಡಿ
ನಮ್ಮ ಚಹರೆಯ ವಿನ್ಯಾಸ,
ನಮ್ಮ ಹೆಸರೆ ಗುರುತಿನ ಸಮಂಜಸ,
ನಮ್ಮ ಹುಟ್ಟಿನಿಂದ ಶುರುವಾಯಿತು ಬದುಕಿನ ಮುನ್ನುಡಿ.
ನಮ್ಮ ಜ್ಞಾನವೆ ನಿರೂಪಣೆ,
ನಮ್ಮ ಹೆತ್ತವರಿಗೆ ಸಮರ್ಪಣೆ,
ನಮ್ಮ ಬದುಕು ಹಂತಗಳನ್ನೊಳಗೊಂಡ ಪರಿವಿಡಿ.
ನಮ್ಮ ಭಾಷೆಯ ಸಂಭಾಷಣೆ,
ನಮ್ಮ ಬದುಕು ಸಾಕಾರಗೊಳ್ಳುವ ನಿರ್ವಹಣೆ,
ನಮ್ಮ ಭಾವನೆಗಳನ್ನು ವಿಸ್ತಾರಗೊಳಿಸುವ ತಾಯ್ನುಡಿ.
ನಮ್ಮ ಕರ್ತವ್ಯಗಳ ಜವಾಬ್ದಾರಿ,
ನಮ್ಮ ಯಶಸ್ಸಿನ ರೂವಾರಿ,
ನಮ್ಮ ಬದುಕು ರೂಪುಗೊಂಡಿರುವುದು ಸುಖ
ಮತ್ತು ದುಃಖಗಳ ಕೈಪಿಡಿ.
ನಮ್ಮ ತಪ್ಪುಗಳನ್ನು ತೋರಿಸಿ,
ನಮ್ಮ ಮುನ್ನಡೆಗಾಗಿ ಸಲಹೆ ಮಾಡಿ ಸರಿಪಡಿಸಿ,
ನಮ್ಮ ಬದುಕಿಗಾದರು ಸಜ್ಜನರು ಮಾದರಿಯೆಂಬ ಕನ್ನಡಿ.
ನಮ್ಮ ಜೀವನದ ಸಮಸ್ಯೆಗಳನ್ನು ಬಗೆಹರಿಸಿ,
ನಮ್ಮ ಗೊಂದಲಗಳನ್ನು ದೂರಿಸಿ,
ನಮ್ಮ ಮುಂದಿನ ಪೀಳಿಗೆಯವರಿಗೆ ಅನುಭವದ ಉಪದೇಶ ನೀಡಿದೆವು ನಾವು ಹಿನ್ನುಡಿ.
