STORYMIRROR

shristi Jat

Children Stories Classics Inspirational

4  

shristi Jat

Children Stories Classics Inspirational

ಅಪರಿಚಿತ

ಅಪರಿಚಿತ

1 min
428

ಹುಟ್ಟಿದ ಶಿಶುಗೆ ತಂದೆ ತಾಯಿ ಅಪರಿಚಿತರೆನಿಸಿದರು, 

ಅವರ ಮಮತೆ ವಾತ್ಸಲ್ಯದಿಂದ ತಿಳಿಯಿತು

ತನ್ನ ರಕ್ತಸಂಬಂಧವಿರುವ ಪೋಷಕರು.

ಬೆಳೆಯುತ್ತಾ ಆಟವಾಡುವ ಸಂಗಡಿಗರು ಅಪರಿಚಿತರೆನಿಸಿದರು,                      

ಆಟದ ಕೂಟ ನಡೆಸುತ್ತಾ ತಿಳಿಯಿತು ಜೊತೆಗೂಡಿ ನಲಿಯುವ ಸ್ನೇಹಿತರೆಂದು.

ಜ್ಞಾನ ವೃದ್ದಿಸಲು ಶಾಲೆಗೆ ಹೋದಾಗ ಭೋದನೆ ಮಾಡುವವರು ಅಪರಿಚಿತರೆನಿಸಿದರು,          

ಮಾರ್ಗದರ್ಶನದಿಂದ ತಿಳಿಯಿತು ಗುರಿಗಳನ್ನು ತಲುಪಿಸುವ ಗುರುಗಳೆಂದು.

ವಿವಾಹ ಬಂಧನದಿಂದ ಒಂದಾದ ಜೊಡಿ ಒಬ್ಬರಿಗೊಬ್ಬರು ಅಪರಿಚಿತರೆನಿಸಿದರು,         

ಕೂಡಿ ಬಾಳುತ್ತಾ ತಿಳಿಯಿತು ಒಬ್ಬರೊನ್ನೊಬ್ಬರು ಸ್ಪಂದಿಸುವ ಅರ್ಧಾಂಗಿಯೆಂದು.

ಅಂದಿನ ಅಪರಿಚಿತರು ಇಂದಿನ ಸ್ನೇಹಿತರು,        

ಅಂದಿನ ಅಪರಿಚಿತರು ಇಂದಿನ ನೆಂಟರು,        

ಅಂದಿನ ಅಪರಿಚಿತರು ಇಂದಿನ ಗುರುವೃಂದರು,    

ಅಂದಿನ ಅಪರಿಚಿತರು ಇಂದಿನ ನಮ್ಮ ಬದುಕಿನ ಭಾಗಿಗಳಾದರು.


              

 


Rate this content
Log in