ಗಮ್ಯ
ಗಮ್ಯ
ತಮವ ಕಳೆದು
ಬೆಳಕು ಹರಿದು
ಬರಲಿ ಹೊಸ ಚೇತನ ಬಾಳಲಿ/
ರಂಗುರಂಗಿನ
ನವ ವಸಂತ
ಧರೆಯಲಿ
ಹೊಸ ಚಿಗುರನು ತಾರಲಿ//.
ಗತದ ಕ್ಲೇಶವ
ಮರೆತು ಮನವು
ಹೊಸ ಗಮ್ಯಕೆ ಸಾಗಲಿ
ನಾನು ಯಾರು
ಎಂಬ ಅರಿವಿಗೆ
ಬೋಧಿವೃಕ್ಷವ ಅರಸಲಿ/
ಇರುವುದೆಲ್ಲವ
ಇರುವ ಹಾಗೆ
ಅಪ್ಪಿಕೊಳ್ಳುವ ಬಾಳಲಿ//
