Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shankararao N

Classics Inspirational Others

3.7  

Shankararao N

Classics Inspirational Others

ಬಣ್ಣದೋಕುಳಿ

ಬಣ್ಣದೋಕುಳಿ

1 min
338



ಪ್ರಕೃತಿಯ ಮಡಿಲಲಿ

ಸುಂದರ ರಂಗುರಂಗಿನ ನಿತ್ಯೋತ್ಸವ/

ಕಣ್ಮನ ಸೆಳೆಯುವ ಮೋಹಕ ನೋಟ,

ಚಿರ ನೂತನ ಬಣ್ಣದೋಕುಳಿ//.


ಬದುಕಿಗೆ ನಾನಾ ಬಣ್ಣ

ಬಣ್ಣದೊಡನಾಟ ಅನವರತ/

ಬಣ್ಣದಿಂ ವ್ಯಕ್ತಿತ್ವ ಪರಿಚಯ

ಭಾವನಾತ್ಮಕ ಪರಿಣಾಮ//. 


ಕಾಮನ ಬಿಲ್ಲಿನ ಏಳು ಬಣ್ಣ

 ಕಾಮನೆಗಳ ಮನ್ಮಥನ ಹೂಬಾಣ/

ಕಾಮಿನಿಯ ಮನದಿ ಹರಿದ ವರ್ಣ

ಕಾಮಿತಾರ್ಥ ಫಲವೀಯ ಮುಕ್ಕಣ್ಣ/.


ಬಣ್ಣ ಬಣ್ಣಗಳಿಂದ ಮನಸ್ಥಿತಿ ಸುಧಾರಿಸಿ

ಹೊಸ ಚೈತನ್ಯ ತುಂಬಲಿ/

ಹೊಸ ಕನಸುಗಳ ಸಾಕಾರ

ಎಲ್ಲರ ಬಾಳಲಿ//. 


ರಂಗುರಂಗಿನ ಬಣ್ಣದೋಕುಳಿ

ಸುಂದರ ಸುಮಧುರ ಬದುಕಲಿ/

ಭಾವರಾಗ ಸಂಗಮದಲಿ

ಅನುರಾಗ ಆತ್ಮೀಯತೆ ಬೆಳೆಯಲಿ//. 



Rate this content
Log in

Similar kannada poem from Classics