STORYMIRROR

Nagalakshmi K.P.

Abstract Classics Inspirational

4  

Nagalakshmi K.P.

Abstract Classics Inspirational

ಪರಿಣತಿ

ಪರಿಣತಿ

1 min
155

ಕರಿ ಬರಿ ನೆರಳಿನ

ಕಿರಿ ಕನಸುಗಳೆ

ಕರ ವರ ಸುಮನದ

ಕಾಡ್ಗಿಚ್ಚುಗಳೆ

ಬರಿದೇ ಡಂಬದ 

ದುವಿ೯ಚಾರವೆ

ಪರಿ ಪರಿ ಮನಸಿನ

ಪರಿತಾಪಗಳೆ

ಪಡದೆ ಕಷ್ಟವ

ಪರಿತಪಿಸದಯೆ

ವಿಜಯವ ಹುಡುಕುವ

ಪರಿಪಾಟಲವೆ

ಬಿಡು ಬಿರುಸನು

ಪಡೆ ಪರಿಣತವ

ಹಿರಿದೇ ಆಗಲಿ

ಮನದ ಕಿರು ಸುಮ

ನಡೆದೇ ಹೋಗಲಿ

ನವರಂಗಿ ನಾಟಕ

ನೀ ಪವಡಿಸು

ಪರಿವಿಲ್ಲದೆಯೆ

ನೀ ಪಡೆದ ಪರಿಣತಿಯ

ಕೈ ಹಿಡಿದು !


Rate this content
Log in

Similar kannada poem from Abstract