Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Tragedy Action Inspirational

4  

Vijaya Bharathi

Tragedy Action Inspirational

ಕ್ಯಾಪ್ಟನ್ ವೀರಣ್ಣ

ಕ್ಯಾಪ್ಟನ್ ವೀರಣ್ಣ

3 mins
254



"ಇರಿಯಲ್ ಬಲ್ಲೊಡೆ ವೀರನಾಗು

ಧರೆಯೊಳ್ ನಾನಾ ಚಮತ್ಕಾರಂಗಳಂ

ಅರಿಯೊಳ್ ಬಲ್ಲೊಡೆ ಮಂತ್ರಿ ಯಾಗು"

ಕನ್ನಡ ಸಾಹಿತ್ಯ ದ ಸುಪ್ರಸಿದ್ಧ ಸೋಮೇಶ್ವರ ಶತಕ

ದ ಸಾಲುಗಳಿವು. ಯೋಧನಾದವನು ಕೆಚ್ಚೆದೆಯ

ಬಂಟನಾಗಿರಬೇಕು. ಅವನಿಗೆ ಶತ್ರು ಗಳೊಡನೆ ಹೋರಾಡುವ ಕಲೆ ತಿಳಿದಿರಬೇಕು ಎಂದು

ಪಾಲ್ಕುರಿಕೆ ಸೋಮನಾಥ ತನ್ನ"ಸೋಮೇಶ್ವರ ಶತಕ"

ದಲ್ಲಿ ಯೋಧನ ಲಕ್ಷಣವನ್ನು ತಿಳಿಸಿದ್ದಾನೆ.

ಹೀಗಾಗಿ ಯೋಧನಾದವನಿಗೆ ಅವನ ಬೆನ್ನ ಹಿಂದೆಯೇ ಸಾವು ಸುಳಿದಾಡುತ್ತಿರುವುದು ಗೊತ್ತಿದ್ದರೂ ಅವನೆಂದೂ

ಎದೆಗುಂದದೆ ತನ್ನ ದೇಶವನ್ನು ಶತ್ರು ಗಳಿಂದ ಕಾಪಾಡಲು ಸದಾಕಾಲ ಸಿದ್ಧನಾಗಿರುತ್ತಾನೆ.ಅಂತಹ ಸೈನಿಕರುಗಳಲ್ಲಿ

ಒಬ್ಬ ನಾದ ವೀರಣ್ಣ ನ ವೀರಗಾಥೆ ಹೀಗಿದೆ.

ಕರ್ನಾಟಕ ದ ಹಳ್ಳಿಯೊಂದರಲ್ಲಿಸಾಧಾರಣ ರೈತ ಕುಟುಂಬ ದಲ್ಲಿ ಎಂಟನೇ ಸಂತಾನವಾಗಿ ಹುಟ್ಟಿದ ವೀರಣ್ಣ,ತನ್ನ ತಂದೆ ಸಂಸಾರ ನಿರ್ವಹಣೆ ಗಾಗಿ ಕಷ್ಟಪಡುತ್ತಿರುವುದನ್ನು ಕಂಡು, ತನ್ನ ಓದನ್ನು ಎಸ್.ಎಸ್.ಎಲ್.ಸಿ.ಗೆ ಮುಗಿಸಿ,ತನ್ನ ಸ್ನೇಹಿತ ಭೀಮಣ್ಣ ನೊಂದಿಗೆ ಭಾರತೀಯ ಸೇನೆಗೆ ಸೇರಿಕೊಳ್ಳುತ್ತಾನೆ.ಸಾಮಾನ್ಯ ಸೈನಿಕ ನಾಗಿ ಸೇರಿಕೊಂಡ ವೀರಣ್ಣ,ಕೆಲವು ವರ್ಷ ಗಳಲ್ಲಿ ಪದೋನ್ನತಿ ಪಡೆಯುತ್ತಾ ಕ್ಯಾಪ್ಟನ್ ಆಗಿ, ಒಳ್ಳೆಯ ಸಂಬಳ ಹಾಗೂ ಮಿಲಿಟರಿ ಸೌಲಭ್ಯಗಳನ್ನು ಪಡೆದುಕೊಂಡು, ಗಣ್ಯ ವ್ಯಕ್ತಿಗಳ ಗುಂಪಿಗೆ ಒಬ್ಬನಾಗಿ ಸೇರಿಕೊಂಡಾಗ,ಅವನ ತಂದೆ ತಾಯಿ, ಅಕ್ಕ ತಂಗಿ ಯರು ಹಾಗೂ ಬಂಧು ಬಾಂಧವರ ಹಿರಿಮೆ ಹೆಚ್ಚಾಗಿ,ಅವನ ಬಗ್ಗೆ ‌ಎಲ್ಲರೂ ಹೆಮ್ಮೆ ಯಿಂದ ಬೀಗುತ್ತಿದ್ದರು. ಅವನ ಮಿಲಿಟರಿ ಸೇವೆಯ ಫಲವಾಗಿ ಅವನ ಹಳ್ಳಿಯ ಮನೆಯಲ್ಲಿ ಆಧುನಿಕ ಯಂತ್ರೋಪಕರಣಗಳು ಸೇರಿದವು.

ಏಳೆಂಟು ವರ್ಷ ಗಳು ಕಳೆದ ಮೇಲೆ ಮನೆಯಲ್ಲಿ ಅವನ ಮದುವೆ ಗೆ ಒತ್ತಾಯ ಶುರುವಾಯಿತು. ಅವನಿಗೆ ಮದುವೆ ಯು ಬಗ್ಗೆ ಭಯವಿತ್ತು. ತಾನು ದೇಶ ಕಾಯುವ ಸೈನ್ಯ ದಲ್ಲಿರುವಾಗ, ತನ್ನ ಜೀವ ಹೋರಾಟದಲ್ಲಿ ಇರುತ್ತದೆ,ಯಾವಾಗ ಏನಾಗುವುದೋ ಗೊತ್ತಾಗುವುದಿಲ್ಲ,ತನ್ನನ್ನೇ ನಂಬಿ ಬಂದ ಒಬ್ಬ ಹೆಣ್ಣು ಮಗಳಿಗೆ ಮೋಸವಾಗುತ್ತದೆ , ಆದ್ದರಿಂದ ತನಗೆ ಮದುವೆ ಬೇಡ ಎಂದು ವಾದ ಮಾಡುತ್ತಿದ್ದ. ಆದರೆ ಹೆತ್ತವರಿಗೆ ಈ ಕೊನೆಯ ಮಗನ ಮದುವೆ ನೋಡಬೇಕೆಂಬ ಆಸೆ,.

ಕಡೆಗೂ ವೀರಣ್ಣ ನನ್ನು ಮದುವೆಗೆ ಒಪ್ಪಿಸಿದರು. ವೀರಣ್ಣ ನ ಸ್ನೇಹಿತ ಭೀಮಣ್ಣ ನ ತಂಗಿ ವನಜಳ ಜೊತೆಗೆ ಮದುವೆ ನಿಶ್ಚಯವಾಯಿತು.

ಎರಡು ವಾರಗಳ ರಜೆಯ ಮೇಲೆ ಬಂದು ವೀರಣ್ಣ ನಿಗೆ ಹಳ್ಳಿಯ ತಮ್ಮ ಮನೆಯಲ್ಲಿ ಮದುವೆ ಮಾಡಿದ್ದರು.

ಮದುವೆಯ ದಿನ ಎಲ್ಲಾ ಶಾಸ್ತ್ರ ಗಳೂ ಸಾಂಗವಾಗಿ ಜರುಗಿ, ವೀರಣ್ಣ ಮತ್ತು ವನಜ ಗಂಡ ಹೆಂಡತಿ ಯಾದರು.ಬೆಳಗಿನ ಎಲ್ಲಾ ಶಾಸ್ತ್ರ ಗಳೂ ಮುಗಿದು, ರಾತ್ರಿ ಯ ಶಾಸ್ತ್ರ ಗಳಿಗೆ ಅದ್ದೂರಿ ಯಾಗಿ ಸಿದ್ಧತೆ ಮಾಡಿದ್ದರು.

ಮದುಮಗ ವೀರಣ್ಣ ತನ್ನ ಮೊದಲ ರಾತ್ರಿ ಯ ಪುಳಕದಲ್ಲಿರುವಾಗಲೇ,ಅವನ ಮೊಬೈಲ್ ಗೆ ಕರೆ ಬಂದಿತ್ತು.ಕರೆಯನ್ನು ನೋಡಿ ಅವನಿಗೆ ತುಂಬಾ ಬೇಸರವಾದರೂ, ಕರ್ತವ್ಯ ದಿಂದ ವಿಮುಖನಾಗುವಂತಿರಲಿಲ್ಲ. ಇನ್ನೆರಡು

ದಿನಗಳಲ್ಲಿ ನಡೆಯಲಿರುವ ಇಂಡಿಯಾ ಚೈನಾ ವಾರ್ ಗೆ ಅವನು ತಕ್ಷಣ ತನ್ನ ಕ್ಯಾಂಪ್ ಗೆ ತೆರಳಲೇ ಬೇಕಾಯಿತು.

ಇತ್ತ ಮೊದಲ ರಾತ್ರಿಯ ಗಂಡನ ಸಮಾಗಮಕ್ಕೆ ನೂರಾರು ಕನಸುಗಳನ್ನು ಹೊತ್ತು ಕಾಯುತ್ತಾ ಕುಳಿತಿದ್ದ ವನಜಳಿಗೆ,ಗಂಡನ ಮಾತುಗಳನ್ನು ಕೇಳಿ ತುಂಬಾ ನಿರಾಶೆಯಾಯಿತು.

ವೀರಣ್ಣ ಅವಳ ಪಕ್ಕದಲ್ಲಿ ಕುಳಿತು, ತನ್ನ ಪರಿಸ್ಥಿತಿ ಯನ್ನು ವಿವರಿಸುತ್ತಾ.,ತಾನು ಈಗಿಂದೀಗಲೇ ಕರ್ತವ್ಯ ಕ್ಕೆ ಹಾಜರಾಗಬೇಕೆಂದು ಹೇಳಿದಾಗ,ವನಜ ಅವನ ಎದೆಗೊರಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಪರಿಪರಿಯಾಗಿ ಸಂತೈಸಿ, ತನ್ನ ಕರ್ತವ್ಯ ದ ಹೊಣೆ ಮುಗಿಸಿ, ಬೇಗ ಬಂದು, ಅವಳನ್ನೂ ತನ್ನೊಂದಿಗೆ ಕರೆದೊಯ್ಯುವುದಾಗಿ ಭರವಸೆ ನೀಡುತ್ತಾ, ಎಲ್ಲರಿಗೂ ವಿದಾಯ ಹೇಳಿ, ಬೆಳಗಿನ ಜಾವ ಹಳ್ಳಿಯನ್ನು ಬಿಟ್ಟು ದಿಲ್ಲಿಯತ್ತ ಹೊರಟೇಬಿಟ್ಟ ನು.

ಅತ್ತ ವೀರಣ್ಣ ಹೊರಟ ನಂತರ, ವನಜ ತನ್ನ ತಂದೆಯ ಮನೆಗೇ ವಾಪಸ್ ಬಂದಳು. ಎಲ್ಲರ ಮುಖದಲ್ಲೂ ಬೇಸರ ಮನೆಮಾಡಿತ್ತು. ಆದರೆ ಯೋಧನಾದ ವೀರಣ್ಣ ನಿಗೆ ಹೀಗೆ ಮಾಡುವ ಹೊರತು ಅನ್ಯ ಮಾರ್ಗ ವಿರಲಿಲ್ಲ.

ದೆಹಲಿಯನ್ನು ತಲುಪಿ, ತನ್ನ ಸೆಕ್ಟರ್ ಗೆ ಬಂದು ಜಾಯಿನ್ ಆದ ಕೂಡಲೇ ವನಜಳೊಂದಿಗೆ ಮಾತನಾಡಿದ್ದನು.

ಮುಂದೆ ವೀರಣ್ಣ ನಿಗೆ ಪುರುಸೊತ್ತು ಇಲ್ವದ ಜವಾಬ್ದಾರಿ ಹೆಗಲೇರಿತು. ಯುದ್ಧದ ಭೀಕರತೆ ಹೆಚ್ಚಾದಂತೆ, ವೀರಣ್ಣ ನ ಕೆಲಸಗಳೂ ಹೆಚ್ಚಾಗುತ್ತಾ ಹೋಯಿತು.

ಒಂದು ಮಧ್ಯರಾತ್ರಿ ಶತ್ರು ಸೈನ್ಯ ದಾಳಿ ನಡೆಸಿದಾಗ,

ಭಾರತೀಯ ಸೈನಿಕರು ವೀರಾವೇಶದಿಂದ‌ ಹೋರಾಡ ತೊಡಗಿದರು.ಆಗ ಅವರಿಗೆ ಮನೆ,ಮಠ, ಹೆಂಡತಿ ,ಮಕ್ಕಳು, ತಂದೆ ತಾಯಿ,ಊರು ಕೇರಿ

ಯಾವುದೂ ನೆನಪಾಗುತ್ತಿರಲಿಲ್ಲ. ಗುಂಡಿನ ಚಕಮಕಿಗಳು ನಡೆದು, ಎರಡೂ ಕಡೆಯ ಸೈನಿಕರು ಹುತಾತ್ಮ ರಾಗತೊಡಗಿದರು. ಹುತಾತ್ಮ ಯೋಧರ ದೇಹಗಳನ್ನು ಅವರ ಊರುಗಳಿಗೆ ರವಾನಿಸುವ ಕೆಲಸವೂ ಸೇರಿಕೊಂಡು, ವೀರಣ್ಣನಿಗೆ ದಿಕ್ಕೇ ತೋಚಲಿಲ್ಲ.

ಯಾವುದೇ ಕರೆಗಳನ್ನೂ ಸ್ವೀಕರಿಸಲು ಸಾಧ್ಯ ವಾಗದ ಪರಿಸ್ಥಿತಿ ಯಲ್ಲಿ ಅವನಿರುತ್ತಿದ್ಧ.

ಹಿ ಮಪಾತಗಳ ನಡುವೆ ಅಡಗಿ ಯುದ್ದ ಮಾಡುವಾಗ ಕೈಕಾಲು ಮರಗಟ್ಟಿದಂತಾಗುತ್ತಿದ್ದವು.ಥರಗುಟ್ಟುವ ಚಳಿಯಲ್ಲಿ ತಾವು ಹೊರಗೆ ಬಿಡುವ ಉಸಿರಿನಿಂದಲೇ ತಮ್ಮ ನ್ನು ಬೆಚ್ಚಗಿಟ್ಟುಕೊಳ್ಳಬೇಕಾಗಿತ್ತು.ಊಟ ತಿಂಡಿ ಗಳಿಲ್ಲದೇ ಹಸಿವಿನಿಂದ ಕಂಗಾಲಾಗುವ ಪರಿಸ್ಥಿತಿ ಗಳೂ ಎದುರಾದವು.

ಒಂದೆರಡು ದಿನಗಳ "ಕದನವಿರಾಮ" ವನ್ನು ಶತ್ರು ಸೈನ್ಯ ಘೋಷಿಸಿದಾಗ, ಭಾರತೀ ಯ ಸೈನಿಕರಿಗೆ ಉಸಿರು ಬಿಡುವಂತಾಯಿತು.ಎಲ್ಲರೂ ತಮ್ಮ ಕ್ಯಾಂಪ್ಗಳತ್ತ ಮರಳಿ, ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದರು. ಅಂದು ವೀರಣ್ಣ ವನಜಳೊಂದಿಗೆ ಲಲ್ಲೆಗರೆದಿದ್ದನು.

ಆದರೆ ಕದನ ವಿರಾಮ ಘೋಷಿಸಿ ದ ಶತ್ರು ಸೈನ್ಯ ಇದ್ದಕ್ಕಿದ್ದ ಹಾಗೆ ಮಧ್ಯರಾತ್ರಿ ಭಾರತೀಯ ಕ್ಯಾಂಪ್ ಗಳ ಮೇಲೆ ಧಾಳಿ ಮಾಡಿದಾಗ, ಈ ಆಕಸ್ಮಿಕ ಮೋಸದ ದಾಳಿಗೆ ಹಲವಾರು ಸೈನಿಕರು‌ ಹುತಾತ್ಮ ರಾದರು. ಆ ದಾಳಿಯಲ್ಲಿ ವೀರಣ್ಣ ನೂ ಬಲಿಪಶುವಾಗಿದ್ದನು.

ಇತ್ತ ಹಳ್ಳಿ ಯಲ್ಲಿ ವಿಷಯ ತಿಳಿದ ವೀರಣ್ಣ ನ ತಂದೆ ತಾಯಿ ಗೆ ಆಘಾತ ವಾಯಿತು. ವೀರಣ್ಣ ವೀರಮರಣವನ್ನಪ್ಪಿದ್ದ.

ವನಜಳಿಗಂತೂ ಪ್ರಜ್ಞೆ ತಪ್ಪಿತು. ಎಲ್ಲರೂ ಸೇರಿ ಅವಳಿಗೆ ಶೈತ್ಯೋಪಚಾರ ಮಾಡಿ ಸಮಾಧಾನ ಮಾಡುತ್ತಿದ್ದರು.ಕೊರಳಿನ ಅರಿಶಿನ ಕೊಂಬಿನ ಮಾಂಗಲ್ಯದ ಹಸಿ ಆರುವ ಮೊದಲೇ ಅದು ಕಿತ್ತು ಬರುವಂತಾಯಿತು.ವನಜಳನ್ನು ನೋಡಿದರೆ ಎಲ್ಲರಿಗೂ ಕರುಳು ಕಿತ್ತು ಬರುವಂತೆ ಆಗುತ್ತಿತ್ತು. ಇದೆಂಥಾ ವಿಧಿಯ ಆಟ?

ಮದುವೆಯ ಶಾಸ್ತ್ರ ಮಾತ್ರ ಆಗಿತ್ತು,ಆದರೆ ನಿಜವಾಗಿಯೂ ಅವರಿಬ್ಬರೂ ಗಂಡ ಹೆಂಡತಿ ಯಾಗಲೇ ಇಲ್ಲ.ವಾರದೊಳಗೇ ಅವಳಿಗೆ ವಿಧವೆಯ ಪಟ್ಟ.

ಅಬ್ಬಾ ಎಲ್ಲರ ರೋಧನ ಮುಗಿಲು ಮುಟ್ಟಿತ್ತು.

ಎರಡು ದಿನಗಳ ನಂತರ ವೀರಣ್ಣ ನ ಶವದ ಪೆಟ್ಟಿಗೆ ‌ಹಳ್ಳಿ ತಲುಪಿದಾಗ, ಆ‌ ಮನೆಯವರ ದು:ಖದ ಕಟ್ಟೆ ಒಡೆಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅವನ ಅಂತ್ಯ ಸಂಸ್ಕಾರ ನಡೆದು, ಅವನ ದೇಹದ ಮೇಲೆ ಹೊದಿಸಿದ್ದರಾಷ್ಟ್ರ ಧ್ವಜ ವನಜಳ ಕೈ ಸೇರಿತು.

ವೀರ ಪುತ್ರ ನ ಶವಸಂಸ್ಕಾರ ನಡೆದಾಗ,

"ಜೈ ಜವಾನ್""ವಂದೇ ಮಾತರಂ"", ಜೈಹಿಂದ್"

"ಕ್ಯಾಪ್ಟನ್ ವೀರಣ್ಣ ಅಮರ್ ರಹೇ" ಘೋಷಣೆಗಳು

ಮುಗಿಲು ಮುಟ್ಟಿತ್ತು.ಒಂದು ದಿನ ಗಂಡನಾದವನಿಗೆ ಹೆಂಡತಿ ವನಜ ಕೈ ಮೇಲೆತ್ತಿ ಸೆಲ್ಯೂಟ್ ಮಾಡಿದ್ದಳು.

ಅವಳ ಮುಖದ ಮೇಲೆ ಹೆಮ್ಮೆ ಅಭಿಮಾನ ಪ್ರೀತಿ

ತುಳುಕುತ್ತಿತ್ತು.



Rate this content
Log in

Similar kannada story from Tragedy