Vijaya Bharathi

Abstract Children Stories Fantasy

4  

Vijaya Bharathi

Abstract Children Stories Fantasy

ಬಹುಮಾನ

ಬಹುಮಾನ

2 mins
621


ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 

ಬಿಗಿನರ್

ದಿನ 4 

ವಿಷಯ : ಗಡಿಯಾರ


ಕೆಳಮಧ್ಯಮ ವರ್ಗದ ಕುಟುಂಬದ ಕೃತಿಗೆ ತನ್ನ ಶಾಲೆಯಲ್ಲಿದ್ದ ಸಾಹುಕರರ ಮಕ್ಕಳೆಲ್ಲಾ ವಿಧವಿಧವಾದ ಕೈ ಗಡಿಯಾರಗಳನ್ನು ಕಟ್ಟಿಕೊಂಡು ಬರುತ್ತಿದ್ದನ್ನು ನೋಡುವಾಗ ತನಗೂ ಒಂದು ಪುಟ್ಟ ಕೈಗಡಿಯಾರ ಬೇಕೆನಿಸುತ್ತಿತ್ತು. ದಿನವೂ ತನ್ನ ಹಳ್ಳಿಯಿಂದ ಬಸ್ ಹಿಡಿದು ನಗರದ ಶಾಲೆಗೆ ಬರುತ್ತಿದ್ದ ಅವಳಿಗೆ ಸಮಯ ನೋಡಿಕೊಳ್ಳಲು ಅದರ ಅವಶ್ಯಕತೆಯೂ ಇತ್ತು,. ಆದರೆ ಏನು ಮಾಡುವುದು? ಎರಡು ಹೊತ್ತಿನ ಊಟ ತಿಂಡಿ, ವರ್ಷಕ್ಕೆರಡು ಜೊತೆ ಬಟ್ಟೆ,ಮೂರು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯಿಂದ ಹೆಣಗಾಡುತ್ತಿದ್ದ ಪ್ರೈಮರಿ ಶಾಲಾ ಉಪಾಧ್ಯಾಯರಾಗಿದ್ದ ತನ್ನ ತಂದೆಯನ್ನು ಗಡಿಯಾರ ತೆಗೆಸಿಕೊಡೆಂದು ಕೇಳುವುದು ಹೇಗೆ? ಮನೆಯ ಹಿರಿಯ ಮಗಳಾಗಿ ದ್ದ ಕೃತಿ ಈಗ ಎಸ್.ಎಸ್.ಎಲ್.ಸಿ. ಓದುತ್ತಿದ್ದಳು. ಮುಂದೆ ಅವಳ ಗುರಿ ತಾನು ಚೆನ್ನಾಗಿ ಓದಿಕೊಂಡು ಒಳ್ಳೆಯ ಉದ್ಯೋಗ ಹಿಡಿದು,ಆರ್ಥಿಕವಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವುದು. ಇದಕ್ಕಾಗಿ ಶ್ರಮಪಟ್ಟು ಓದುತ್ತಿದ್ದಳು. ತನ್ನ ಮನೆಯ ಆರ್ಥಿಕ ಪರಿಸ್ಥಿಯನ್ನ ಅರ್ಥ ಮಾಡಿಕೊಂಡಿದ್ದ ಕೃತಿ ,ಯಾವುದಕ್ಕೂ ಹೆಚ್ಚು ಆಸೆ ಪಡುತ್ತಿರಲಿಲ್ಲವಾದರೂ, ತನ್ನ ಗೆಳತಿಯರ ಕೈಗಳಲ್ಲಿ ಪುಟಾಣಿ ರಿಸ್ಟ್ ವಾಚ್ ಗಳನ್ನು ನೋಡುವಾಗಲೆಲ್ಲ 

ಅವಳಿಗೂ ಅಂತಹುದೊಂದು ಗಡಿಯಾರ ಬೇಕೆನೆಸುತ್ತಿತ್ತು. ಇನ್ನು ಪರೀಕ್ಷೆ ಸಮಯಕ್ಕಾದರೂ ತನಗೆ ಒಂದು ಕೈಗಡಿಯಾರ ಸಿಗುವಂತಾಗಲಿ ಎಂದು ಎಷ್ಟೋ ಬಾರಿ ದೇವರಲ್ಲಿ ಮೊರೆಯಿಡುತ್ತಿದ್ದಳು. ಬಹುಶಃ ದೇವರಿಗೆ ಅವಳ ಮೊರೆ ತಲುಪಿತೇನೋ?


ಒಮ್ಮೆ ಅವಳ ಶಾಲೆಯಲ್ಲಿ ಪ್ರಾಯೋಜಕರೊಬ್ಬರಿಂದ "ದೀಪಾವಳಿ ಕಥಾ ಸ್ಪರ್ಧೆ" ಆಯೋಜಿಸಿದ್ದು, ತುಂಬಾ ಒಳ್ಳೊಳ್ಳೆಯ ಬಹುಮಾನಗಳನ್ನು ಇಟ್ಟಿದ್ದರು. ಪ್ರತಿಭಾವಂತೆ ಹಾಗೂ ತುಂಬಾ ಬುದ್ಧಿವಂತೆಯಾಗಿದ್ದ ಕೃತಿ, ಆ ಸ್ಪರ್ಧೆಗೆ ತನ್ನ ಹೆಸರನ್ನು ನೋಂದಾಯಿಸಿದಳು. ಆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಕೈ ಗಡಿಯಾರ, ಸ್ಕೂಲ್ ಬ್ಯಾಗ್, ಪಾರ್ಕರ್ ಪೆನ್, ಲಂಚ್ಬಾಕ್ಸ್ ಮುಂತಾದ ಬಹುಮಾನಗಳನ್ನು ಇಟ್ಟಿದ್ದರು. 

ಕೃತಿ ಈ ಸ್ಪರ್ಧೆಗಾಗಿ ತಯಾರಿ ನಡೆಸಿದಳು.ಇದುವರೆಗೂ ಎಂದೂ ಕಥೆಯನ್ನು ಬರೆಯದಿದ್ದ ಅವಳು, ಒಳ್ಳೆಯ ಕಥೆ ಬರೆಯಲು, ಗ್ರಂಥಾಲಯದಿಂದ ಅನೇಕ ಪುಸ್ತಕಗಳನ್ನು ತಂದು ಓದಲು ಪ್ರಾರಂಭಿಸಿದಳು. 

ಹೀಗೆ ಓದಿ ಓದಿ, ಕಡೆಗೆ ಒಂದು ಕಥೆಯನ್ನು ಬರೆದು, ತನ್ನ ಪ್ರೀತಿಯ ಕನ್ನಡ ಟಿಚರ್ ಸುಹಾಸಿನಿ ಮೇಡಂಗೆ ತೋರಿಸಿ, ಲೋಪದೋಷಗಳನ್ನು ಸರಿ ಪಡಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದಳು. 


ಒಂದು ದಿನ ಅವಳ ಶಾಲೆಯ ಮುಖ್ಯೋಪಾಧ್ಯಾಯರು ಅವಳನ್ನು ತಮ್ಮ ಚೇಂಬರ್ \ಗೆ ಬರಹೇಳಿದಾಗ, ಹೆದರಿಕೊಂಡೆ ಹೋದ, ಕೃತಿಗೆ, ಒಂದು ಸರ್ಪ್ರೈಸ್ ಕಾದಿತ್ತು. ಕಥಾ ಸ್ಪರ್ಧೆಯಲ್ಲಿ ಅವಳಿಗೆ ಪ್ರಥಮ ಬಹುಮಾನ ಬಂದಿತ್ತು. ಪ್ರಾಯೋಜಕರು ಶಾಲೆಗೆ ಬಹುಮಾನ ನೀಡಲು ಬಂದಿದ್ದರು. 

"ಅಭಿನಂದನೆಗಳು ಕೃತಿ.ನಿನಗೆ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಬಹುಮಾನ ಸ್ವೀಕರಿಸು" ಎಂದು ಹೇಳುತ್ತಾ , ಮುಖ್ಯೋಪಾಧ್ಯಾಯರು ಅವಳಿಗೆ ಒಂದು ಪುಟ್ಟ ಪ್ಯಾಕೆಟ್ ನೊಂದಿಗೆ , ಒಂದು ಪ್ರಶಸ್ತಿ ಪತ್ರವನ್ನು ಕೊಟ್ಟಾಗ, ಅವಳಿಗೆ ಖುಷಿಯಿಂದ ಕುಣಿಯುವಂತಾಯಿತು. ಪ್ರಥಮ ಬಹುಮಾನವಾಗಿ ಅವಳಿಗೆ ಪುಟ್ಟ ಲೇಡಿಸ್ ರಿಸ್ಟ್ ವಾಚ್ ದೊರಕಿತ್ತು. 

"ಥ್ಯಾಂಕ್ಯೂ ಸರ್" ಎಂದು ಹೇಳಿ ಹೊರ ಬಂದು ತನಗೆ ಬಂದ ಬಹುಮಾನವನ್ನು ತರಗತಿಯಲ್ಲಿ ಎಲ್ಲರಿಗೂ ತೋರಿಸಿದಳು. ಅಂದು ಅವಳ ಆನಂದಕ್ಕೆ ಪಾರವೇ ಇರಲಿಲ್ಲ.

ಮನೆಗೆ ಬಂದ ಕೂಡಲೇ ಅಪ್ಪ ಅಮ್ಮನಿಗೆ ತನ್ನ ಬಹುಮಾನವನ್ನು ತೋರಿಸಿದಾಗ, ಅವಳ ಅಮ್ಮ "ಕೃತಿ,ಕೊನೆಗೂ ನಿನ್ನ ಬಹುದಿನಗಳ ಆಸೆ ಇಂದು ಪೂರೈಸಿತಲ್ಲ,. ನಿನ್ನ ಪರೀಕ್ಷೆಗೆ ಮೊದಲೇ ನಿನಗೆ ಕೈ ಗಡಿಯಾರ ದೊರಕಿದೆ. ಒಳ್ಳೆಯದಾಗಲಿ ಕಂದ" ಎಂದು ಬಾಯಿ ತುಂಬಾ ಹರಸಿದಾಗ,ಕೃತಿಯ ಮುಖ ಅರಳಿತು. 

ಕಾಸಗಲದ ಗೋಲ್ಡೆನ್ ಅಂಕಿಗಳ ಕಂದು ಬಣ್ಣದ ಬೆಲ್ಟ್ ಇರುವ "ಕೈಗಡಿಯಾರ"ವನ್ನು ತನ್ನ ಕೈಗೆ ಕಟ್ಕೊಂಡು ಗಡಿಯಾರದ ಆ ಚಿಕ್ಕ ಮುಳ್ಳುಗಳು ಮುಂದೆ ಹೋಗುವುದನ್ನೇ ನೋಡುತ್ತಿದ್ದ ಅವಳಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. 



Rate this content
Log in

Similar kannada story from Abstract