ಉಷಾಕಿರಣ
ಉಷಾಕಿರಣ
ನಾನ್ ಸ್ಟಾಪ್ ನವೆಂಬೆರ್ ಎಡಿಶನ್ 3
ಬಿಗಿನರ್
ದಿನ 3
ವಿಷಯ: ಹೊಂಗಿರಣ
ಮದುವೆಯಾಗಿ ಆರು ವರ್ಷಗಳ ನಂತರ ಹಲವು ದೇವರುಗಳ ಹಾರೈಕೆಯ ಫಲವಾಗಿ , ಕುಸುಮ ಮತ್ತು ಕರಣ್ ದಂಪತಿಗಳಿಗೆ, ಮುದ್ದಾದ ಹೆಣ್ಣು ಮಗುವಾದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೆಂಪು ಕೆಂಪಾಗಿ ಮುದ್ದುಮುದ್ದಾಗಿದ್ದ ಮಗುವನ್ನು ನೋಡಿದ ಕೂಡಲೇ ಕುಸುಮ ಮತ್ತು ಕಿರಣ್ ಗೆ ಸ್ವರ್ಗಕ್ಕೆ ಎರಡೇ ಗೇಣು ಉಳಿದಂತಾಯಿತು. ಮಗುವಿಗೆ ಉಷಾ ಕಿರಣ ಎಂದು ಹೆಸರಿಟ್ಟರು.
ಮಗು ದಿನದಿಂದ ದಿನಕ್ಕೆ ಚೆನ್ನಾಗಿ ಬೆಳೆಯುತ್ತಿತ್ತು. ಆದರೆ ಒಂದು ವರ್ಷದ ಹತ್ತಿರ ಹತ್ತಿರ ಬಂದರೂ, ತಾಯಿಯನ್ನು ಅಥವಾ ತಂದೆಯನ್ನು ನೋಡಿದಾಗ ನಗುತ್ತಿರಲಿಲ್ಲ, ಆಟದ ಸಾಮಾನುಗಳನ್ನು ಮುಂದೆ ಹಿಡಿದರೂ ಅದನ್ನು ನೋಡದೆ ಶಬ್ದವನ್ನು ಮಾತ್ರ ಆಲಿಸಿ ನಗುತ್ತಿತ್ತು. ಮಗುವಿನ ಈ ವಿಚಿತ್ರ ನೋಟವನ್ನು ಗಮನಿಸುತ್ತಿದ್ದ ಕುಸುಮ ಮತ್ತು ಕರಣ್ ಗೆ ಯೋಚನೆಯಾಗಿ ಮಗುವನ್ನು ವೈದ್ಯರ ಹತ್ತಿರ ಚೆಕ್ ಅಪ್ ಗೆ ಕರೆದುಕೊಂಡು ಹೋಗಿ ತೋರಿಸಿದಾಗ, ಮಗುವಿಗೆ ದೃಷ್ಟಿ ದೋಷವಿರುವುದನ್ನು ತಿಳಿಸಿ,
ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಮುಂದುವರಿಸಿದರು.
ವಿವಿಧ ರೀತಿಯ ಚಿಕಿತ್ಸೆ ನೀಡಿದಾಗಲೂ ಏನೂ ಪ್ರಯೋಜನವಾಗದಾದಾಗ, ಮಗುವಿಗೆ ದೃಷ್ಟಿ ಮರಳಿ ಬರಬೇಕಾದರೆ,ಯಾರದಾದರೂ ಕಣ್ಣುಗಳನ್ನು ಅಳವಡಿಸಿದರೆ ಮಾತ್ರ ಸಾಧ್ಯ ಎಂದು ಹೇಳಿ ,ದಾನಿಗಳ ಕಣ್ಣುಗಳಿಗಾಗಿ ಕಾಯುವಂತೆ ತಿಳಿಸಿಬಿಟ್ಟಾಗ, ಕುಸುಮ ಮತ್ತು ಕರಣ್ ಬಾಳಿನಲ್ಲಿ ಕತ್ತಲೆ ಕವಿದಂತಾಯಿತು.
ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ ಈಗ ಮತ್ತೊಂದು ಕೊರಗು ಶುರುವಾಯಿತು. ಮಗುವು ಸ್ವಲ್ಪ ದೊಡ್ಡದಾಗುವತನಕ ಅವರು ಕಾಯಲೇ ಬೇಕಾಯಿತು.
"ಹೆಣ್ಣು ಹಸನು ಕಣ್ಣು ಕುರುಡು" ಎಂಬಂತಾಯಿತು. ವೈದ್ಯರ ಮಾರ್ಗದರ್ಶನದಂತೆ ಅವರು ಮಗುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು.
ಹತ್ತು ವರ್ಷಗಳ ನಂತರ ಕಡೆಗೂ ಒಂದು ದಿನ ಕಣ್ಣಿನ ಚಿಕಿತ್ಸೆಯಾಗಿ, ದಾನಿಯೊಬ್ಬನ ಕಣ್ಣನ್ನು ಉಷಾಕಿರಣ ಳಿಗೆ ಅಳವಡಿಸಿದಾಗ, ಆ ಮಗುವಿನ ಕತ್ತೆಲೆಯ ಬಾಳಲ್ಲಿ ಹೊಂಗಿರಣ ಮೂಡಿ,ದಂಪತಿಗಳಿಬ್ಬರಿಗೆ ಎಷ್ಟೋ ನೆಮ್ಮದಿಯಾಯಿತು. ಕುಸುಮ ಮತ್ತು ಕರಣ್ ಬಾಳಿನಲ್ಲಿ ಹೊಸಬೆಳಕು ಮೂಡಿತ್ತು.