ನಂದಾದೀಪ
ನಂದಾದೀಪ


ಮಧ್ಯರಾತ್ರಿ ಹನ್ನೆರಡು ಘಂಟೆಯ ನೀರವ ಮೌನ. ಅಕ್ಕಪಕ್ಕದಲ್ಲಿ ಮಲಗಿದ್ದ ಮಕ್ಕಳಿಬ್ಬರೂ ನಿದ್ರಿಸಿದ್ದರು. ನಿದ್ರೆ ಬಾರದೆ, ಅತ್ತಿತ್ತ ಹೊರಳಿ ಹೊರಳಿ ಸಾಕಾಗಿ, ಕಡೆಗೆ ಹಾಸಿಗೆಯಿಂದೆದ್ದು, ರೂಮಿನಿಂದ ಹಜಾರಕ್ಕೆ ಬಂದೆ. ಮನೆಗೆ ಬಂದಿದ್ದ ನೆಂಟರಿಷ್ಟರೆಲ್ಲಾ ಮಲಗಿ ನಿದ್ರಿಸುತ್ತಿದೆ. ಅವರೆಲ್ಲರಿಗೂ ಒಲಿದಿದ್ದ ನಿದ್ರಾದೇವಿ, ನನ್ನ ಮೇಲೆ ಮಾತ್ರ ಮುನಿದಿದ್ದಳು. ನನ್ನ ಮುಂದಿನ ಜೀವನದಲ್ಲಿ, ಅವಳ ಅವಕೃಪೆ ಇದ್ದೇ ಇರುತ್ತದೆ. ಅವಳು ತಾನೆ ನನಗೆ ಹೇಗೆ ಒಲಿದಾಳು? ನಾನು ಕಳೆದುಕೊಂಡಿರುವುದಾದರೂ ಎಂತಹ ಅಮೂಲ್ಯವಾದದ್ದು? ನನ್ನ ಮನಸ್ಸು ಮುದುಡಿತು. ಅಲ್ಲಿಯೇ ಮೂಲೆಯಲ್ಲಿದ್ದ ಟೀಪಾಯಿಯ ಮೇಲಿನ 'ನಂದಾದೀಪ' ಇನ್ನೇನೂ ನಂದಿ ಹೋಗುವುದರಲ್ಲಿರುವುದನ್ನು ಗಮನಿಸಿ, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬತ್ತಿ ಮುಂದೆ ಮಾಡಿ, ಅದರ ಮುಂದೆಯೇ ಕುಕ್ಕಲಾಗಿದೆ. ಇಂದಿಗೆ ಹತ್ತು ದಿನಗಳಿಂದಲೂ ನಿರಂತರವಾಗಿ ಉರಿಯುತ್ತಿರುವ ಆ 'ದೀಪ'ವನ್ನೇ ದಿಟ್ಟಿಸುತ್ತಾ, ಅದರ ಕುಡಿಯಲ್ಲಿ' ರಾಘುವಿನ ಮುಖ ಕಾಣಿಸಿತು. ನಿಜ, ಈ ನಂದಾದೀಪಕ್ಕೂ ರಾಘುವಿಗೂ ಇದ್ದ ನಂಟು, ಆ ನಂಟಿನ ಅಂಟು, ಅದ್ಭುತವಾದದ್ದೇ ಎನಿಸಿತು. ಈ 'ದೀಪ' ದ ಜೊತೆಗೆ ಅವನಿಗಿದ್ದ ಅವಿನಾಭಾವ ಸಂಬಂಧ; ಇದರ ನಡುವೆ ನಮ್ಮಿಬ್ಬರ ನಡುವೆ ನಡೆಯುತ್ತಿರುವ ವಾಗ್ವಾದಗಳು; ಮನದೊಂದಿಗೆಸ್ತಾಪಗಳು; ಎಲ್ಲವೂ ನನ್ನ ಮಸ್ತಿಷ್ಕದಲ್ಲಿ ಹರಿದಾಡತೊಡಗಿದವು. ಈ 'ದೀಪ'ವನ್ನು ಬೆಳಗಿಸುವ ವಿಷಯವಾಗಿ ನಡೆದ ಹಲವಾರು ಘಟನೆಗಳು ನನ್ನ ನೆನಪಿನ ಭಿತ್ತಿಯೊಳಗಿಂದ ಇಣುಕತೊಡಗಿ, ಒಂದೋ ಒಂದು ದೇ ಘಟನೆಗಳು ಕಣ್ಮುಂದೆ ಹಾದುಹೋಗತೊಡಗಿದವು.
'ಪ್ರತಿದಿನ ಸ್ನಾನವಾದ ನಂತರ, ರಾಘು, ಯಾವ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರುವುದುವಾದರೂ, ಈ' ನಂದಾದೀಪ'ವನ್ನು ಮಾತ್ರ ಬೆಳಗಲಾಗುತ್ತಿದೆ. ಅವನ ಪಾಲಿಗೆ ಇದೆ ಎಲ್ಲಾ ಪೂಜೆ-ಪುನಸ್ಕಾರಗಳಿಗೆ ಸಮಾನವಾಗಿದೆ. ಒಂದೇ ಒಂದು ದಿನ ಇದನ್ನು ಹಚ್ಚಿಸದಿದ್ದರೂ, ಅವನ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ. ಆದರೆ ನನಗೋ? 'ಒಂಟಿದೀಪ'ವನ್ನು ಹಚ್ಚಿಸಬಾರದೆಂದು ಹೇಳುತ್ತಿರುವ ಮಾತುಗಳೇ ಪ್ರತಿಧ್ವನಿತವಾಗುತ್ತಿದ್ದವು. ದೇವರ ಮುಂದೆ ಕೇವಲ 'ಒಂದು ದೀಪ'ವನ್ನು ಬೆಳಗಿಸುವುದರ ಬಗ್ಗೆ ನನ್ನಲ್ಲಿ ಒಂದು ರೀತಿ ಮೂಢನಂಬಿಕೆ ಅಂಕುರವಾಗೊಡಗಿತು. ಈ ಮೂಢನಂಬಿಕೆಯೇ ಒಮ್ಮೆಮ್ಮೆ ಅಸಮಾಧಾನವಾಗಿ ಸ್ಫೋಟಗೊಳ್ಳುತ್ತಿದೆ. ಇದರ ಫಲವಾಗಿ ನಮ್ಮಿಬ್ಬರ ನಡುವೆ, ವಾಗ್ವಾದಗಳು, ಜಗಳಗಳು ನಡೆದು ಹೋಗುವುದು. ಮತ್ತೆ ಒಂದು ಸಂದರ್ಭ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ. ಅಂದಿನ ಘಟನೆ .....
"ಅಂದು ಸೋಮವಾರ ಕಾಮಾಕ್ಷಿ ದೀಪವನ್ನು ತೆಗೆಯುತ್ತಿದ್ದಾಗ, ನನ್ನ ಕೈಗೆ ಗಾಯವಾಗಿ, ರಕ್ತ ಬರಲು ಪ್ರಾರಂಭವಾಯಿತು. ನನಗೆ ಆ ದೀಪದ ಮೇಲೆ ಎಲ್ಲಿಲ್ಲದ ಸಿಟ್ಟು. ಈ ಕಣ್ಣೆದುರಿಗಿದ್ದರೆ ತಾನೇ, ಈ ದೀಪ ಹಚ್ಚಿಸೋದು ಅಂತ ಬೈಯ್ದುಕೊಳ್ಳುತ್ತಾ ,, ಅದನ್ನು ಸೀದಾ ಹಾಕಿಕೊಂಡು ಹೋಗು, ರೂಂನ ಬೀರುವಿಗೆ ಸೇರುಸಿಬಿಟ್ಟೆ. ಬತ್ತಿ ಹಾಕಿ, ದೇವರ ಮನೆಯಲ್ಲಿಟ್ಟಿದ್ದೆ ಎಂದಿನಂತೆ ಸ್ನಾನ ಮುಗಿಸಿ ಬಂದ ರಾಘು, ಕಾಮಾಕ್ಷಿ ದೀಪಕ್ಕಾಗಿ ಹುಡುಕಾಟ ನಡೆಸುತ್ತಿದ್ದ, ಅದು ಸಿಗದಿದ್ದಾಗ, ನನ್ನನ್ನು ಕೂಗಿದ್ದ.
"ವಿಶು, ಇಲ್ಲಿ ನಂದಾದೀಪ ಕಾಣಿಸ್ತಿಲ್ಲ. ಬೇಗ ಹೋಗುವ ಬಾ. ನಾನು ಅದನ್ನು ಹಚ್ಚಿಸಿಬಿಟ್ಟು ಹೊರಗೆ ಬರುತ್ತೀನಿ"
"ಆ ಕಾಮಾಕ್ಷಿ ದೀಪವನ್ನು ಬೇರೆ ತರಬೇಕು. ಅದು ಒಂದು ಕಡೆ ಹಾಳಾಗಿದೆ. ಅದಕ್ಕೆ ಅದನ್ನು ಎತ್ತಿಟ್ಟಿದ್ದೀನಿ. ಹೇಗೋ ಇವತ್ತು ಆ ಜೋಡಿ ದೀಪವನ್ನೇ ಬೆಳಗಿಸಿಬಿಟ್ಟು ಹೊರಗೆ ಬಾ" ... ನಾನು ಅಡುಗೆ ಮನೆಯಿಂದಲೇ ಕೂಗಿ ಹೇಳಿದ್ದೆ
.
"ಹೋ! ಅದನ್ನು ಬೇರೆ ತರುವವರೆಗೂ, ಹಳೆಯದನ್ನೇ ತಂದು ಕೊಡಮ್ಮ, ನನಗೆ ಹೊತ್ತಾಗುತ್ತೆ. ಅದನ್ನು ಬೆಳಗಿಸದೆ ನಾನು ಹೊರಕ್ಕೆ ಬರಲ್ಲ" ರಾಘು ತನ್ನ ಪಟ್ಟನ್ನು ಬಿಡದೇ ಹೋದಾಗ, ನನಗೂ ರೇಗಿ ಹೋಗಿತ್ತು. ಅಡುಗೆ ಮನೆಯಿಂದ ದೇವರ ಮನೆಯವರೆಗೆ ದುಡು ದುಡಿ ಓಡಿ ಬಂದು, ಅವನ ಮೇಲೆ ಕಿರುಚಾಡಿದ್ದೆ.
"ಏನ್ ರಾಘು ನೀನು ಇಷ್ಟು ಹಠ ಮಾಡೋದು? ಇವತ್ತು ಅದನ್ನು ತೆಗೆಯುವಾಗ ನನ್ನ ಕೈಗೆ ಗಾಯವಾಗಿ ರಕ್ತ ಬಂದಿದೆಯೇ? ಅದಕ್ಕೇ ಅದನ್ನು ಕೊಟ್ಟು ಬದಲಿಸಿ, ಹೊಸದನ್ನು ತರುತ್ತೀನಿ. ಈಗ ಸದ್ಯಕ್ಕೆ ಈ ಎರಡು ಕಂಬಗಳನ್ನು ಬೆಳಗಿಸಿ ಹೊರಗೆ ಬಾ"
"ನಿನಗೆ ಗಾಯ ಆಗಿದ್ದಕ್ಕೂ, ದೀಪ ಹಚ್ಚಿಸೋದಕ್ಕೂ ಏನು ಸಂ 0 ಧ?" ಹೊಸದು ತೊಗೊಂಡು ಬಂದರೆ ಆಯ್ತು. ಈಗ ಸದ್ಯಕ್ಕೆ ಹಳೇದನ್ನ ತಂದು ಕೊಡಮ್ಮ. ನನಗೆ ಹೊತ್ತಾಗುತ್ತದೆ "ರಾಘು ತನ್ನ ಪಟ್ಟನ್ನೆ ಹಿಡಿದು, ಸಾಧಿಸಿದ, ನನಗೂ ತುಂಬಾ ರೇಗಿಹೋಯ್ತು. ಅವನ ಮೇಲೆ ಚೆನ್ನಾಗಿ ಕಿರುಚಾಡಿದ್ದೆ.
ಇನ್ನು ಈ ದೀಪದೊಡನಿದ್ದ ಸಂಬಂಧ ಮುಗಿದಂತೆಯೇ ಸರಿ '. ಯೋಚಿಸುತ್ತಾ ಕಣ್ಣೀರು ಹರಿಯುತ್ತಿರುವ, ಸ್ವಲ್ಪ ಸೋಫಾಗೆ ಒರಗಿದೆ. ಸ್ವಲ್ಪ ಹೊತ್ತು ಕಣ್ಮುಚ್ಚಿ ಯೋಚಿಸುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಭುಜದ ಮೇಲೆ ಕೈಬಿದ್ದಂತೆ ತಕ್ಷಣ ಕಣ್ಣುಬಿಟ್ಟಾಗ, ನನ್ನ ದೊಡ್ಡ ಮಗಳು, 'ನಂದ' ನನ್ನ ಪಕ್ಕ ಬಂದು ಕುಳಿತಿತ್ತು.
"ಅಮ್ಮಾ, ನೀನ್ಯಾಕೆ ಈ ನಿದ್ದೆ ಮಾಡಿಲ್ಲ? ನನ್ನ ಪಕ್ಕದಿಂದ ಯಾವಾಗ ಎದ್ದು ಬಂದೆ?" ಮಗು ನನ್ನ ಕಣ್ಣೀರನ್ನು ತೊಡೆಯಲು ಬಂದಿತು, ನನ್ನ ಕರುಳು ಚುರಕ್ ಎಂದಿತು. 'ಪಾಪ, ಈ ಚಿಕ್ಕ ಚಿಕ್ಕ ಮಕ್ಕಳು, ಅವುಗಳಿಗೆ ನನ್ನ ಸಂಕಟ ಹೇಗೆ ಅರ್ಥವಾದೀತು?'
"ಪುಟ್ಟಿ, ಈ ದೀಪಕ್ಕೆ ಎಣ್ಣೆ ಹಾಕೋಣವೆಂದು ಬಂದೆ. ಈಗ ನಡಿ, ನನಗೂ ಬರ್ತೀನಿ. ಇಬ್ಬರೂ ಮಲಗೋಣ"
ಅವಳನ್ನೂ ಕರೆದುಕೊಂಡು ಬಂದು, ಮಂಚದ ಮೇಲೆ ಮಲಗಿದೆ, ನನ್ನ ಒಂದು ಕಡೆ 'ದೀಪು', ಇನ್ನೊಂದು ಕಡೆ 'ನಂದ'-ಇಬ್ಬರನ್ನೂ ಹತ್ತಿರಕ್ಕೆಳೆದುಕೊಂದು ಮಲಗಿದೆ. ತುಂಬಾ ಚಿಕ್ಕವಳಾದ 'ದೀಪು'ಗೆ ಏನೂ ತಿಳಿಯುತ್ತಿಲ್ಲ. ಆದರೆ ಇದೇ ತಾನೆ ಹರೆಯದಂಚಿನಲ್ಲಿದ್ದ 'ನಂದೂ'ಗೆ ಎಲ್ಲ ಅರ್ಥವಾಗುತ್ತಿದೆ. ಸ್ವಲ್ಪ 'ಅಂತರ್ಮುಖಿ'ಯಾದ' ನಂದೂ 'ಒಳಗೊಳಗೇ ಕೊರಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದರೂ, ನಾನೂ ಸಹ ಅಸಹಾಯಕಳಾಗುತ್ತಿದ್ದೇನೆ .. ಇಷ್ಟು ಚಿಕ್ಕ ಪ್ರಾಯದಲ್ಲಿ ತಂದೆಯನ್ನು ಕಳೆದುಕೊಂಡಿರುವ ಈ ಹೆಣ್ಣು ಮಕ್ಕಳನ್ನೂ ನೋಡಿದಾಗ, ನನ್ನ ಕರುಳು ಚುರಕ್ ಅನ್ನುವುದರೊಟ್ಟಿಗೆ, ಮುಂದಿನ ಜವಾಬ್ದಾರಿಗಳ ಬಗ್ಗೆ ಆತಂಕವೂ ಆಗುತ್ತಿದೆ. ಆದರೂ ಆ ಮಕ್ಕಳೆದುರು ಧೈರ್ಯಗೆಡದೆ, ಅವರಿಗೆ ಆತ್ಮವಿಶ್ವಾಸ ತುಂಬುತ್ತಿದ್ದೆ. ಎಷ್ಟು ಬಿಗಿಯಾಗಿ ಕಣ್ಣು ಮುಚ್ಚಿದರೂ, ನಿದ್ರೆ ಸುಳಿಯಲಿಲ್ಲ. ನಂದೂಗೆ ಸ್ವಲ್ಪ ಜೊಂಪು ಹತ್ತಿದೆಯೆಂದು ಗೊತ್ತಾದಮೇಲೆ 'ದೀಪು' ಕಡೆ ತಿರುಗಿದೆ. ಅದರ ಮುಖದ 'ಮುಗ್ಧತೆ'ಗೆ' ಅಯ್ಯೋ 'ಅನಿಸಿತು. ಏನೂ ತಿಳಿಯದ ಆರರ ಹಸುಗೂಸು. ಈ 'ದೀಪು'ವನ್ನು ಕಂಡರಂತೂ, ರಾಘುವಿಗೆ ಎಲ್ಲಿಲ್ಲದ ಅಕ್ಕರೆ. ಸಂಜೆ ಮನೆಗೆ ಬಂದ ನಂತರ, ಅದು ಮಲಗುವವರೆಗೂ ಅದರ ಹಿಂದೆ ಹಿಂದೆಯೇ ಸುತ್ತುತ್ತಾ, ಅದನ್ನು ನಕ್ಕುನಲಿಸುತ್ತಾ, ರೇಗಿಸುತ್ತಾ, ಅಳಿಸುತ್ತಾ, ಆಟವಾಡುತ್ತಿದ್ದ. ಛಿ! ನನ್ನದು ಮತ್ತು ನನ್ನ ಮಕ್ಕಳಂತಹ ದುರ್ವಿಧಿ? ಎಲ್ಲವನ್ನೂ ಕೊಟ್ಟು ಸಂತೃಪ್ತಿಯಾಗಿದ್ದ ನಮ್ಮ ಕುಟುಂಬದಲ್ಲಿ, ಇದ್ದಕ್ಕಿದ್ದಂತೆ, ಮನೆಯ ಯಜಮಾನನನ್ನೇ ಕಿತ್ತುಕೊಂಡು ಬಿಟ್ಟ ಆ ಕ್ರೂರ ವಿಧಿಯ ಬಗ್ಗೆ ಯೋಚಿಸಿದಷ್ಟೂ, ಮುಗಿಯದ, ಪರಿಹಾರ ಸಿಗದ ಪ್ರಶ್ನೆಯೇ ಆಗಿದೆ.
ಗಂಡನನ್ನು ಕಳೆದುಕೊಂಡ ಹತ್ತನೆಯ ದಿನದ ರಾತ್ರಿಯಲ್ಲಿ ಹೆಂಡತಿಗೆ ನಿದ್ರೆ ತಾನೆ ಹೇಗೆ ಬಂದೀತು? ಮತ್ತೆ ನನ್ನ ನೆನಪಿನ ಪುಟಗಳು ಹಿಂತೆರೆದುಕೊ ಎ ಡವು. ನನ್ನ-ರಾಘುವಿನ ನಡುವಿನ ದಾಂಪತ್ಯದ ಸಿಹಿ-ಕಹಿಗಳು ನನ್ನ ಮುಂದೆ ಬಂದು ನಿಂತವು.
ನನಗೆ ಭಯವಾಗುತ್ತದೆ. ಅಷ್ಟಲ್ಲದೆ ನನ್ನ ಈ ನಡುವಯಸ್ಸಿನ ಹಿಂದಿರುವ ಈ ಕಾಲಘಟ್ಟದಲ್ಲಿ, ಗಂಡನ ಸಾಂಗತ್ಯವಿಲ್ಲದೆ ಇರಬೇಕಾಗಿದೆಯಲ್ಲಾ! ಛಿ! ಎಂತಹ ಕ್ರೂರ ವಿಧಿ ನನ್ನದು? ಮನುಷ್ಯ ಎತ್ತರಕ್ಕೆರಿದಷ್ಟು, ಬಿದ್ದಾಗಿನ ನೋವಿನ ತೀವ್ರತೆ ಹೆಚ್ಚೆಂಬುದು ನನ್ನ ಜೀವನದ ಅನುಭವವೇ ಆಗಿದೆ "
"ಅಮ್ಮ" ದೀಪು ಕಣ್ಬಿಟ್ಟು ನನ್ನನ್ನು ಹುಡುಕತೊಡಗಿದಾಗ, ಅದರ ಕಡೆಗೆ ತಿರುಗಿದೆ.
"ಏನ್ಮರಿ, ಮಲಕ್ಕೊ ಚಿನ್ನು" ಅದನ್ನು ತಬ್ಬಿಕೊಂಡು ತಟ್ಟುತ್ತಾ ಹೋದೆ. ಅವಳ ಹಣವನ್ನು ತಟ್ಟುತ್ತಾ, ಅದನ್ನೆ ದಿಟ್ಟಿಸಿದೆ. 'ಎಂತಹ ಮುದ್ದಾಗಿದೆ, ಬ್ರಹ್ಮ ಇದನ್ನು ಸಾವಧಾನವಾಗಿ ಸೃಷ್ಟಿಸಬೇಕು' ಎನಿಸಿತು. ಆದರೂ ಇದು ಹುಟ್ಟಿದಾಗ, ರಾಘುವಿನ ಮುಖ ಚಿಕ್ಕದಾಗಿದ್ದನ್ನು ಗಮನಿಸಿದ ನಾನು ಕಾರಣ ಕೇಳಿದಾಗ, ಇದು ಗಂಡಾಗಲಿಲ್ಲವೆಂಬ ಕೊರಗು ಅವನಲ್ಲಿತ್ತು ಎಂದು ತಿಳಿಯಿತು. ಆಗಂತೂ ನನಗೆ ತುಂಬಾ ಆಶ್ಚರ್ಯವಾಯಿತು. 'ಇಂತಹ ಮುಂದುವರಿದಕಾಲದಲ್ಲಿ, ವಿದ್ಯಾವಂತರೆನಿಸಿಕೊಂಡಂತಹವರಿಗೂ ಗಂಡು ಮಗುವಿನ ಬಗೆಗಿರುವ ವ್ಯಾಮೋಹ ಎಂತಹುದು? ಅದರಲ್ಲೂ ನನ್ನ ರಾಘುವಿಗೆ'- ಎನಿಸದಿರಲಿಲ್ಲ. ಅದನ್ನು ನಾನು ಬಾಯಿ ಬಿಟ್ಟು ಹೇಳಿಯೇಬಿಟ್ಟಿದ್ದೆ.
"ರಾಘು, ನೀನೂ ಸಹ ಹೀಗೆ ಯೋಚಿಸಬಹುದೇ? ಯಾವ ಜಮಾನದಲ್ಲಿದ್ದೀಯಾ?" ನನ್ನ ಬೇಸರವನ್ನು ಗುರುತಿಸಿದೆ ಅವನು ನನ್ನನ್ನು ಸಮಾಧಾನಪಡಿಸಿದ್ದಾನೆ. ನಂತರ ಮುಂದೆಂದೂ ಅವನು 'ಗಂಡು ಸಂತಾನ'ದ ಬಗ್ಗೆ ಚಕಾರವೆತ್ತಲಿಲ್ಲ. 'ಅಪುತ್ರಸ್ಯ ಗತಿರ್ನಾಸ್ತಿ' ಎಂಬ ಅವನ ವಾದ; 'ಕುವರಿಯಾದೊಡೆಕುಂದೇನು?' ಎಂಬ ನನ್ನ ವಾದ-ಎಲ್ಲವೂ, ದೀಪುವಿನ ಆಟಪಾಠಗಳಲ್ಲಿ ಮರೆತುಹೋದವು. ರಾಘುವು ದೀಪವನ್ನು ಅತ್ಯಂತ ಸಂಭ್ರಮದಿಂದ ಬೆಳೆಸಿದ್ದ, ಅಕ್ಕರೆಯಿಂದ ಆಡಿಸಿದ್ದ. ಪಾಪ! ಇಷ್ಟು ಸಣ್ಣ ವಯಸ್ಸಿನಲ್ಲೇ ಅಪ್ಪನ ಪ್ರೀತಿ ಕಳೆದುಕೊಂಡಿತಲ್ಲಾ! ನೆನಪುಗಳು ಹೆಕ್ಕಿ ಹೆಕ್ಕಿ ಕೆದಕತೊಡಗಿತ್ತು.
ಹೌದು, ಅಂದೇನೋ ರಾಘುವಿನ 'ಅಪುತ್ರಸ್ಯ ಗತಿರ್ನಾಸ್ತಿ' ಎಂಬ ತರ್ಕವನ್ನು ವಿರೋಧಿಸಿದ್ದೆ., ಆದರೆ ಅವನ ಮಾತಿನ ಸತ್ಯಾಂಶದ ಅರಿವು, ಅವನ ಮರಣಾನಂತರ ನನಗೆ ಗೋಚರಿಸತೊಡಗಿತು. ಈಗ ಹತ್ತುದಿನಗಳ ಹಿಂದೆ, ನಡೆದ ರಾಘುವಿನ ಅನಿರೀಕ್ಷಿತವಾದ ಸಾವಿನ ಸಂದರ್ಭದಲ್ಲಿ, ಅತ್ಯಂತ ಕಿರಿಯವನಾದ ಅವನ ಕರ್ಮಾಂತರಗಳನ್ನು ಮಾಡುತ್ತಿರುವ ಜಿಜ್ಞಾಸೆ ನಡೆದಾಗ, ನನಗೆ ದೀಪು ಹುಟ್ಟಿದಾಗ, ರಾಘು ಗಂಡು ಮಗನನ್ನು ಬಯಸುವುದು ನ್ಯಾಯಯುತವಾದದ್ದೇ ಎನಿಸುತ್ತಿದೆ. ಅಂದು ಕಡೆಗೆ ರಾಘುವಿನ ತಂದೆಯೇ ಅವನ ಕರ್ಮಾಂತರಗಳನ್ನು ಮಾಡಬೇಕಾಯಿತು. ಆದರೆ ಈ ಒಂದು ಸಂದರ್ಭಕ್ಕಾಗಿ 'ಗಂಡು' ಅನ್ನು ಬಯಸುತ್ತಾರೇನೋ?
ಯೋಚನೆಗಳಲ್ಲೇ ತೇಲುತ್ತಿರುವ ನನಗೆ ನಿದ್ರೆ ದೂರವೇ ಆಯಿತು. ಮತ್ತೆ ಹಜಾರಕ್ಕೆ ಬಂದ, 'ದೀಪ'ದಲ್ಲಿ ಎಣ್ಣೆ ಕಡಿಮೆಯಾಗಿ, ಆರಿ ಹೋಗುತ್ತಿರುವಂತಿದ್ದಾಗ, ಅದಕ್ಕೆ ಮತ್ತೆ ಎಣ್ಣೆ ಹಾಕಿ, ಕುಡಿಯುವುದನ್ನು ಮುಂದೆ ಮಾಡಿದೆ. ಆಗಾಗಲೇ ಬೆಳಗಿನ ಝಾವ ನಾಲ್ಕು ಘಂಟೆಯಾಗುತ್ತಿದೆ. ಹಾಗೇ ಅಲ್ಲಿಯೇ ಸೋಫಾದಲ್ಲಿ ಕುಳಿತು, ಆ ಉರಿಯುತ್ತಿರುವ ದೀಪವನ್ನೇ ನೋಡುತ್ತಿದ್ದೆ. ಇನ್ನು ಈ ದೀಪ ಕೇವಲ ಇನ್ನೊಂದೆರಡು ಗಂಟೆಗಳು ಮಾತ್ರ ಉರಿಯುವುದು, ನಂತರ ಇದಕ್ಕೆ ಬಿಡುಗಡೆ. ಇನ್ನೊಂದೆರಡು ಗಂಟೆಗಳು ಕಳೆದ ನಂತರ, ಈ 'ದೀಪ'ವನ್ನು ಹೊರಗಿಡಬೇಕು. ಅಲ್ಲಿಗೆ ಅದರ ಕೆಲಸ ಮುಗಿದಂತೆ. ಯಾಕೋ ಏನೋ, ನನಗೆ ಈ ದೀಪವನ್ನು ತಕ್ಷಣ ಎಸೆಯಬೇಕೆಂದರೆ, ಒಂದು ರೀತಿ ಸಂಕಟವೆನಿಸುತ್ತದೆ. ತನ್ನೊಡೆಯನಿಗಾಗಿ 'ಶ್ರದ್ಧಾಂಜಲಿ'ಯನ್ನು ಅರ್ಪಿಸಿದ ಈ ದೀಪ, ತನ್ನ ಕರ್ತವ್ಯವನ್ನು ಮುಗಿಸುತ್ತಿದೆ. ಯಾವ ದೀಪಕ್ಕಾಗಿ, ನನ್ನ ಮತ್ತು ರಾಘುವಿನ ನಡುವೆ ವೈರುಧ್ಯಗಳಿದ್ದವೋ, ಯಾವ ದೀಪ ಬೆಳಗಿಸುವುದರಿಂದ, ಮನೆ ಬೆಳಗಾಗಬೇಕಿತ್ತೋ, ಮತ್ತೆ 'ದೀಪ' ಇಂದು ಒಡೆಯನಿಗಾಗಿ ತನ್ನ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ರಾಘುವಿನ ನೆನಪಾದ ಈ ದೀಪವನ್ನು ಹೊರಗೆಸೆಯಬೇಕೆಂದರೆ, ನನಗೆ ಮನಸ್ಸಿಲ್ಲ.
'ಇಲ್ಲ, ಖಂಡಿತ ನಾನು ಈ ದೀಪವನ್ನು ಹೊರಗೆಸೆಯುವುದಿಲ್ಲ, ನಮ್ಮ ಮನೆ ಬೆಳಗಬೇಕು, ಇದನ್ನು ಜತನವಾಗಿ ಕಾಪಾಡಿಕೊಳ್ಳಬಹುದು'. ರಾಘು ನಮ್ಮ ಇಬ್ಬರು ಹೆಣ್ಣು ಮಕ್ಕಳಿಗೂ ಸಹ ಹೆಸರಿಟ್ಟಿರುವುದೂ ಸಹ ಈ 'ನಂದಾದೀಪ'ದ ನೆನಪಿನಲ್ಲೇ ಎಂದಾಗ, ಇದರ ಮೇಲೆ ಅವನಿಗಿದ್ದ ಪ್ರೀತಿ, ವ್ಯಾಮೋಹಗಳು ಎಷ್ಟು? ಅದು ನನಗೀಗ ಅರಿವಾಗುತ್ತಿದೆ. ಹಿಂದೆ ಈ 'ನಂದಾದೀಪ'ದ ಜೊತೆಗಿದ್ದ ರಾಘುವಿನ ವ್ಯಾಮೋಹವನ್ನು ಕಂಡು ಸಿಟ್ಟು ಮಾಡಿಕೊಳ್ಳುತಿದ್ದೆ ನಾನು, ಇಂದು ಬದಲಾಗಿ, ನಾನೇ ಈ ದೀಪದ ವ್ಯಾಮೋಹಕ್ಕೊಳಗಾಗುತ್ತಿರುವುದು ಅಂತಹ ವಿಪರ್ಯಾಸ?
ಈ ಹತ್ತು ದಿನಗಳಲ್ಲಿ ನನ್ನ ಆಲೋಚನಾ ಸರಣಿಯೇ ಬದಲಾಗಿರುವುದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ಕಷ್ಟವನ್ನೇ ಅರಿಯದೆ, ಐಶಾರಾಮಿಯಾಗಿದ್ದ ನನಗೆ ಇಂದು ದಿಢೀರ್ ಎಂದು ಎಂಥ ದೊಡ್ಡ ವಿಪತ್ತು ಒದಗಿದೆ? .... ಯೋಚಿಸುತ್ತಾ, ಸಮಯವೂ ಸರಿದು ಐದು ಘಂಟೆ ಹೊಡೆದಾಗ, ಸ್ವಲ್ಪ ಹೊತ್ತು ಕಣ್ಮುಚ್ಚಿ ಮಲಗಬೇಕೆನಿಸಿ, ನನ್ನ ರೂಂಗೆ ಹೋಗಿ ಮಕ್ಕಳ ಮಧ್ಯೆ ಮಲಗಿದೆ. ಆದರೆ ಮುಚ್ಚಿದ ಕಣ್ಣುಗಳ ಹಿಂದೆ ಮತ್ತೆ ರಾಘು ಪ್ರತ್ಯಕ್ಷನಾಗಿದ್ದ. ಅವನು ಬಂದು ನನ್ನ ಕಣ್ಣೀರನ್ನು ತೊಡೆದಂತಾಯಿತು. ಮಕ್ಕಳ ಭವಿಷ್ಯಕ್ಕಾಗಿ ಧೈರ್ಯವಾಗಿ ಬಳಸಲು ನಿರ್ಧರಿಸಲಾಗಿದೆ.
ನೆನಪುಗಳು ನನ್ನ ಅಂತರಿಕಚಕ್ಷುಗಳ ಮುಂದೆ ಓಡಾಡುತ್ತಿರುವಾಗಲೇ, ಕಿಟಕಿಯಿಂದ ಸೂರ್ಯಕಿರಣಗಳು ಇಣುಕತೊಡಗಿದವು. ಸೂರ್ಯನ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚ ತೊಡಗಿದಾಗ, ದಿಗ್ಗನೆದ್ದು, ಹಜಾರಕ್ಕೆ ಹೋಗಿ ಆ 'ದೀಪ'ದ ಮುಂದೆ ಕುಳಿತೆ ಸೂರ್ಯನ ಕಿರಣಗಳ ಬೆಳಕು,' ನಂದಾದೀಪ'ದ ಬೆಳಕನ್ನು ಆವರಿಸಿ, ನುಂಗಿತ್ತು. ಅಂತೂ-ಇಂತೂ ರಾಘುವಿನ ನೆಚ್ಚಿನ 'ನಂದಾದೀಪ' ತನ್ನೊಡೆಯನಿಗಾಗಿ ಶ್ರದ್ಧಾಂಜಲಿ ಸಲ್ಲಿಸಿ, ತನ್ನ ಕರ್ತವ್ಯ ಮುಗಿಯಿತು.
ಯಾಕೋ ಏನೋ? ಆ ದೀಪವನ್ನು ಹೊರಗೆಸೆಯಲು ಬಿಡಬಾರದೆನಿಸಿ, ಅದನ್ನು ಒಳಕ್ಕೆ ತೆಗೆದುಕೊಂಡು ಹೋಗಿ ತೊಳೆದು ಎತ್ತಿಟ್ಟೆ. ಏನೋ ಒಂದು ರೀತಿ ಸಮಾಧಾನವೆನಿಸಿ, ನನ್ನ ಕೋಣೆಗೆ ಹೋಗಿ ಮಲಗಿಬಿಟ್ಟೆ, ಆದರೆ ಸ್ವಲ್ಪ ಸಮಯದ ನಂತರ, ಆ ದೀಪ 'ಎಲ್ಲಿದೆ?' ಎಂದು ಎಲ್ಲರೂ ವಿಚಾರಿಸುತ್ತಿರುವಾಗ, ಅಮ್ಮ ಬಂದು, ನನ್ನನ್ನು ಕೇಳಿದಾಗ, ನಾನು ಆ ನಂದಾದೀಪದ ಮೇಲೆ ನನಗೂ ಮತ್ತು ರಾಘುವಿಗೂ ಇದ್ದ ಬಿಡಲಾರದ ನಂಟನ್ನು ತಿಳಿಸಿ, ಅದನ್ನು ಕೊಡಲು ಸಾಧ್ಯವಿಲ್ಲವೆಂದೆ. ಅಮ್ಮನಾದರೋ, ನನ್ನನ್ನು ಸಂತೈಸುತ್ತಾ, 'ಆದೀಪದ ಬದಲಾಗಿ ಹೊಸದೊಂದನ್ನು ತಂದರಾಯಿತು. ಆದರೆ ಈಗ ಅದನ್ನು ಇಟ್ಟುಕೊಳ್ಳಬಾರದಂತೆ. ಅದನ್ನು ಕೊಟ್ಟುಬಿಡಬೇಕಂತೆ 'ಎಂದು ಹೇಳುತ್ತಾ, ಕಡೆಗೆ ಅದನ್ನು ನನ್ನಿಂದ ತೆಗೆದುಕೊಂಡ ಹೋದಾಗ, ನನ್ನ ಬಳಕೆಯಖದ ಕಟ್ಟೆ ಒಡೆಯಿತು.
ಯಾವ ದೀಪಕ್ಕಾಗಿ ನಮ್ಮಿಬ್ಬರ ನಡುವೆ ವಾಗ್ವಾದಗಳು ನಡೆಯುತ್ತಿರುವವೋ; ಯಾವ ದೀಪ ರಾಘುವಿಗೆ ಅತ್ಯಂತ ಪ್ರೀತಿಪಾತ್ರವಾಗಿತ್ತೋ; ಯಾವ ದೀಪದ ಕುಡಿಯ ಬೆಳಕಿನಲ್ಲಿ ರಾಘುವಿನ ನೆನಪುಗಳನ್ನು ಮೆಲುಕು ಹಾಕುತ್ತಿದೆನೋ; ಯಾವ ದೀಪವು ರಾಘುವಿಗಾಗಿ ಇಷ್ಟು ದಿನ ತನ್ನ ಸೇವೆಯನ್ನು ಬೆಳಗುವ 'ನಂದಾದೀಪ'ವಾಗಿತ್ತೋ, ಹಿಂದಿನ' ದೀಪ'ವನ್ನು, ಅಮ್ಮ ನನ್ನಿಂದ ಹೊರಗಿನ ಹೊರಕ್ಕೆ ಹೋದಾಗ, ನಾನು ಬಿಕ್ಕಿ ಬಿಕ್ಕಿ ಅಳುತ್ತಿದ್ದೆ.