ವಿಧಿಯಾಟ
ವಿಧಿಯಾಟ


ಇದೊಂದು ಮರೆಯಲಾಗದ ಘಟನೆ. ಎಷ್ಟೋವರ್ಷಗಳ ಹಿಂದೆ ಅಂದರೆ ಆಗ fiat ಕಾರ್ ನ ಕಾಲ . ಬಳ್ಳಾರಿಯಲ್ಲಿ ಒಬ್ಬರು ಅಲ್ಲಿನ ದೊಡ್ಡ ವ್ಯಾಪಾರಿ ಫಿಯಟ್ ಕಾರ್ delivery ತೆಗೆದುಕೊಳ್ಳಲು ಒಬ್ಬ ಚಾಲಕನನ್ನು ಬೆಂಗಳೂರಿಗೆ ಕರೆತಂದಿದ್ದರು. ಹೋಗುವಾಗ ಡ್ರೈವರ್ ಕಾರ್ ಡ್ರೈವ್ ಮಾಡ್ತಿದ್ದ. ಪಕ್ಕದಲ್ಲಿ ಕುಳಿತ ಅವರು ಡ್ರೈವ್ ಮಾಡುವುದನ್ನೇ ಗಮನಿಸುತ್ತಿದ್ದು ಇದೇನು ಮಹಾವಿಧ್ಯೆ , ಯಾರು ಬೇಕಾದರೂ ಕಲಿಯಬಹುದು ಅಂತ ಆಗಾಗ ಸ್ವಲ್ಪದೂರ driver ಸಹಾಯದಿಂದ ತಾವೇ ಚಲಾಯಿಸಿದರು. ಬಳ್ಳಾರಿ ಹತ್ತಿರ ಬರುತ್ತಿದ್ದಂತೆ ತಮ್ಮ ಪರಿಚಯದವರೊಬ್ಬರ ಮನೆಗೆ ಹೋಗಿ ಮಡದಿಗೆ ಪೋನ್ ಮಾಡಿ ಹೊಸ ಕಾರಲ್ಲಿ ಬರುತ್ತಿರುವುದಾಗಿ ತಿಳಿಸಿದರು. ಬಳ್ಳಾರಿ ತಲುಪುವ ಹೊತ್ತಿಗೆ ಕತ್ತಲಾಗಿತ್ತು.ಅಲ್ಲಿಯವರೆಗೂ ಸುಮ್ಮನಿದ್ದವರು ಬೇಡವೆಂದರೂ ಕೇಳದೆ ತಾವೇ ಕಾರ್ ಡ್ರೈವ್ ಮಾಡಿ ತಮ್ಮ ಮಡದಿಗೆ
Surprise ಮಾಡಬೇಕೆಂದು ತೆಗೆದುಕೊಂಡರು..
ಇಲ್ಲಿ ಹೊಸ ಕಾರ್ ನೋಡುಲು ಉತ್ಸುಕರಾಗಿದ್ದ ಅವರ ವಯಸ್ಸಾದ ತಾಯಿ ಮಡದಿ ಮತ್ತು ಐದು ವರ್ಷದ ಮಗ Gate ಬಳಿ ನಿಂತಿದ್ದರು.ಆರತಿ ಮಾಡಲು ತಟ್ಟೆ ಹಿಡಿದು ಮಗನೊಂದಿಗೆ ಮಡದಿ ಸ್ವಲ್ಪ ಮುಂದೆ ಬಂದು ಕಾರನ್ನ ಅಲ್ಲೇ ನಿಲ್ಲಿಸಲು ಕೈ ಎತ್ತಿ ತಿಳಿಸಿದರೂ ವೇಗವಾಗಿ ಬಂದು ಮೂರೂ ಜನರ ಪ್ರಾಣ ತೆಗೆದಿತ್ತು. ಕೆಲವು ದಿನಗಳ ನಂತರ ಆ ವ್ಯಾಪಾರಿಗೆ ಬುದ್ದಿ ಭ್ರಮಣೆ ಆಯಿತೆಂದು ಕೇಳಿದ ನೆನಪು.