ವಿಧಿಯಾಟ
ವಿಧಿಯಾಟ
ಹೆಣ್ಣುಮಕ್ಕಳ ಕಷ್ಟ ಕೇಳಿದಾಗ ಎಂತಹವರಿಗೂ ಕಣ್ಣಲ್ಲಿ ನೀರು ಒತ್ತರಿಸಿ ಬರುವುದು ಸಾಮಾನ್ಯ . ಹಾಗಂತ ಗಂಡಸು ಕಲ್ಲು ಹೃದಯದವನೆಂದು ಹೇಳಲಾದೀತೆ. ಅನೇಕ ವೇಳೆ ಮನದ ಭಾವನೆಯನ್ನ ತೋರಿಸಿಕೊಳ್ಳದೆ ತಾನೇ ನೊಂದು ಕುಗ್ಗಿ ಹೋಗುತ್ತಾನೆ. ಆದರೆ ಗಂಡಿಗೂಈ ಹೃದಯವಿದೆ ಕರಗಿ ಹೋಗುವ ಮನಸ್ಸಿದೆ ಅಂತ ಹೊರ ಪ್ರಪಂಚಕ್ಕೆ ತಿಳಿಯದಿರುವುದು ಸೋಜಿಗವೇ ಸರಿ. ಕಥೆಗೆ ಈ ಪೀಠಿಕೆ ಏಕೆಂದು ನಿಮ್ಮ ಮನದಲ್ಲಿ ಪ್ರಶ್ನೆ ಮೂಡಿದ್ದರೆ ಅದು ಸಹಜ. ಈ ಕಥೆಯ ನಾಯಕನ ಪರಿಸ್ಥಿತಿಯೂ ಹಾಗೆಯೇ ಇದೆ.
ಬಾಲ್ಯದಲ್ಲೇ ಒಳ್ಳೆಯವರ ಸಹವಾಸ .ಬಡವರನ್ನು ಕಂಡರೆ ಕನಿಕರ. ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ಚಾಚುವ ಮುಕ್ತ ಮನಸು. ಹೀಗೆ ಬಾಲ್ಯದ ದಿನಗಳನ್ನ ಕಳೆದ ಕಥಾನಾಯಕ ಪ್ರಣವನಿಗೆ ವೃದ್ದ ತಂದೆ ತಾಯಿ ಮೂರು ಸಹೋದರಿಯರು. ಅಕ್ಕನಿಗೆ ಮದುವೆಯಾಗಿ ದೂರದ ಊರಿ ನಲ್ಲಿದ್ದರು. ಇಬ್ಬರು ತಂಗಿಯರ ಜವಾಬ್ದಾರಿ ಇವನ ಮೇಲಿತ್ತು. ತಾಯಿ ವಯೋಸಹಜ ಕಾರಣದಿಂದ ತೀರಿಕೊಂಡ ಆರು ತಿಂಗಳಿಗೆ ತಂದೆಯೂ ತೀರಿ ಕೊಂಡರು. ಪಿತ್ರಾರ್ಜಿತ ಆಸ್ತಿಯಾದ ಪುಟ್ಟ ಮನೆ ಬಿಟ್ಟರೆ ಬೇರೇನಿಲ್ಲ. ಆಗತಾನೇ ಸರ್ಕಾರಿ ಕೆಲಸಕ್ಕೆ ಸೇರಿದ್ದರಿಂದ ಇಬ್ಬರು ಸಹೋದರಿಯರನ್ನು ಸಾಕಲು ಕಷ್ಟವಿರಲಿಲ್ಲವಾದರೂ ಅವರ ಮದುವೆಗೆ ಹಣ ಹೊಂದಿಸಬೇಕಾದಸಬೇಕಾದ ಅನಿವಾರ್ಯತೆ ಇತ್ತು. . ಸ್ನೇಹಿತರ ಸಹಾಯದಿಂದ ಹೇಗೋ ಸಹೋದರಿಯರಿಗೆ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿ ಮುಗಿಸಿದ. ಮೊದಲಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ ಇದ್ದ ಕಾರಣ ಮದುವೆ ಆಗುವ ಬಯಕೆ ಇರಲಿಲ್ಲ. ಆದರೆ ಅಕ್ಕನ ಬಲವಂತಕ್ಕೆ ಮದುವೆಗೆ ಒಪ್ಪಿಗೆ ನೀಡಿ ಬಡವರ ಮನೆಯ ಹೆಣ್ಣಾದರೆ ಮಾತ್ರ ಮದುವೆ ಆಗುವುದಾಗಿ ಹೇಳಿದ. ತಂದೆ ಇಲ್ಲದ ಒಂದು ಹುಡುಗಿ . ಅವಳ ಅಕ್ಕ ಭಾವ ಹೆಚ್ಚು ಖರ್ಚುಮಾಡಲಾಗದೆ ಸಾಧಾರಣವಾಗಿ ಮದುವೆ ಮಾಡಿಕೊಡಲು ಒಪ್ಪಿದ್ದಾರೆಂದು ತಿಳಿದು ಹುಡುಗಿ ಹೇಗಿದ್ದಾಳೆಂದು ಸಹಾ ನೋಡದೆ ಒಪ್ಪಿಕೊಂಡ. ಇವನಿಗೆ ತಕ್ಕ ಹುಡುಗಿ .ಅತಿಯಾಸೆ ಇಲ್ಲದೆ ಸಂಸಾರ ತೂಗಿಸಿ ಕೊಂಡು ಹೋಗುವ ಆಸೆ ಹೊತ್ತ ಹುಡುಗಿಯೊಂದಿಗೆ ನೆಮ್ಮದಿಯ ದಿನಗಳು ಕಳೆಯುವ ಹೊತ್ತಿಗೆ ಒಬ್ಬ ಸಹೋದರಿಯ ಮನೆಯಲ್ಲಿ ತನ್ನ ಗಂಡ ಮತ್ತು ಅತ್ತೆಯ ಸಹಿಸಲಾರದ ಕಿರುಕುಳ .ಅಣ್ಣನ ಬಳಿ ಹೇಳಿಕೊಳ್ಳದೆ ಅತ್ತಿಗೆಯ ಹತ್ತಿರ ಹೇಳಿಕೊಳ್ಳುವಾಗ ಅಣ್ಣನಿಗೆ ತಿಳಿಯಬಾರದು ಎಂದು ಅಂಗಲಾಚಿದ ಕಾರಣ , ಸುಖವಾಗಿರಬಹುದೆಂದು ಇವನ ಅನಿಸಿಕೆ. ಈ ಪರಿಸ್ಥಿತಿ ತಂಗಿಯ ಮನೆಯಲ್ಲಿ ಹೆಚ್ಚುದಿನ ಮುಂದುವರೆಯಲಿಲ್ಲ. ಕಾರಣ ಅವಳ ಅತ್ತೆ ತೀರಿಕೊಂಡರು. ಕೆಲವೇ ವರ್ಷಗಳಲ್ಲಿ ಗಂಡ ಕ್ಯಾನ್ಸರ್ ನಿಂದ ತೀರಿಕೊಂಡ.ಇಬ್ಬರು ಗಂಡು ಮಕ್ಕಳು. ಅಣ್ಣಾ ಅತ್ತಿಗೆಗೆ ತೊಂದರೆಯಾಗ ಬಹುದೆಂದು ಮಕ್ಕಳೊಂದಿಗೆ ಹೇಗೋ ಹಳ್ಳಿಯಲ್ಲೇ ಜೀವನ ನಡೆಸುವ ನಿರ್ಧಾರ.ಇದೇ ಸಮಯಕ್ಕೆ ಮತ್ತೊಬ್ಬ ಸಹೋದರಿಯ ಗಂಡನ ವರದಕ್ಷಿಣೆ ಕಿರುಕುಳ ಶುರುವಾಯ್ತು.
ವ್ಯಾಪಾರದಲ್ಲಿ ನಷ್ಟವಾಗಿದೆ ಎಂದು ಆಗಾಗ ಸಹಾಯ ಪಡೆಯುವ ನೆಪದಲ್ಲಿ ಬಂದು ತಂಗಿಯ ಮೇಲೆ ಇಲ್ಲಸಲ್ಲದ ಆರೋಪ. ವಾಪಸ್ ಕಳುಹಿಸಿ ಬಿಡುತ್ತೇನೆಂಬ ಬೆದರಿಕೆ. ಕಷ್ಟಪಟ್ಟು ಮದುವೆ ಮಾಡಿಕೊಟ್ಟರೂ ನೆಮ್ಮದಿ ಇಲ್ಲದ ಜೀವನ.ಒಂದು ದಿನ ಪ್ರಣವ್ ನ ಹೆಂಡತಿ ಹೇಳಿದ್ದು ನೋಡಿ ನೀವು ತಪ್ಪು ತಿಳಿಯದಿದ
್ದರೆ ಒಂದು ಮಾತು .ಈಗ ನಮ್ಮದೂ ಒಂದು ಸಂಸಾರವಿದೆ ನಮಗೂ ಮಕ್ಕಳಿದ್ದಾರೆ.ಅವರ ಭವಿಷ್ಯದ ಬಗ್ಗೆಯೂ ನಾವು ಯೋಚಿಸಬೇಕಿದೆ. ತಂಗಿಯರಿಗೆ ಸಹಾಯ ಮಾಡಬೇಡಿ ಅಂತ ಎಂದೂ ನಾನು ಹೇಳಿಲ್ಲ. ಆದರೆ ನಾವು ಅಷ್ಟು ಅನುಕೂಲಸ್ಥರು ಅಲ್ಲದೆ ಇರುವ ಕಾರಣ ಮತ್ತು ಇನ್ನೂ ಅವರ ಮದುವೆ ಸಾಲವನ್ನೆ ತೀರಿಸಲು ಕಷ್ಟ ಪಡುತ್ತಿರುವುದರಿಂದ ಸ್ವಲ್ಪ ನೀವೇ ಯೋಚಿಸಿ ಎಂದಳು. ನಿನ್ನ ಯೋಚನೆ ಸರಿಯಾಗಿದೆ ಇನ್ನು ಮುಂದೆ ನಮ್ಮ ಮಕ್ಕಳ ಬಗ್ಗೆ ಹೆಚ್ಚಿಗೆ ಚಿಂತಿಸೋಣ ಎಂದ. ಆದರೆ ಅಷ್ಟು ಸುಲಭವಾಗಿ ಕಠಿಣ ನಿರ್ಧಾರ ತೆಗೆದು ಕೊಳ್ಳಲಾಗದೆ ಹೆಂಡತಿಗೆ ತಿಳಿಯದೆ ತಂಗಿಗೆ ಸಹಾಯ ಮಾಡಲು ಮುಂದುವರಿಸಿದ. ಒಂದು ದಿನ ಮೂರನೇ ವ್ಯಕ್ತಿ ಯಿಂದ ಒಂದು ವಿಷಯ ತಿಳಿದು ದಿಗ್ಭ್ರಮೆ ಯಾಯ್ತು. ಇಷ್ಟು ದಿನ ಕಷ್ಟ ಅಂತ ಆಫೀಸ್ ಹತ್ತಿರ ಬಂದು ಹಣ ಪಡೆಯುತ್ತಿದ್ದುದೆಲ್ಲ ತನ್ನ ಕೆಟ್ಟ ಹವ್ಯಾಸಗಳಿಗಾಗಿ. ಈ ವಿಷಯ ತಂಗಿಯ ಹತ್ತಿರ ಕೇಳಿದಾಗ ನಿಜ ನಾನು ನಿನ್ನ ಬಳಿ ಹೇಳಿಕೊಂಡಿಲ್ಲ ಆದರೆ ಅದು ನಿನ್ನ ಹತ್ತಿರ ಹಣ ಪಡೆಯೋದು ಮಾತ್ರ ಇದುವರೆಗೂ ಗೊತ್ತಿಲ್ಲ. ಅದನ್ನ ನಾನು ಕೇಳಿದರೆ ಇನ್ನೂ ಹೆಚ್ಚು ಹಿಂಸೆ ಕೊಡ್ತಾರೆ. ಈಗಾಗಲೇ ಇವರಿಂದ ಬೇಸತ್ತಿದ್ದೇನೆ. ದಯವಿಟ್ಟು ಹಣ ಮಾತ್ರ ಇನ್ನು ಮುಂದೆ ಕೊಡಬೇಡ ಎಂದಳು.ಮನೆಗೆ ಬಂದು ವಿಧಿ ಇಲ್ಲದೆ ಎಲ್ಲ ವಿಷಯ ಹೆಂಡತಿಗೆ ಹೇಳಿ ಮನಸ್ಸು ಹಗುರ ಮಾಡಿಕೊಂಡ.ಅಂದಿನಿಂದ ತನ್ನ ಸಂಸಾರದ ಬಗ್ಗೆ ಮಾತ್ರ ಚಿಂತಿಸ ಬೇಕೆಂದರೆ ಯಾರಿಂದಲೋ ಅವರ ಪರಿಸ್ಥಿತಿ ತಿಳಿದು ನಿದ್ದೆ ಇಲ್ಲದ ದಿನಗಳನ್ನ ಕಳೆಯುತ್ತಿದ್ದ. ಕೆಲವು ವರ್ಷಗಳು ಹೀಗೆ ಉರುಳಿ ಹೋದವು. ಈಗ ಇವನ ಸಂಸಾರದಲ್ಲಿ ಮತ್ತೊಂದು ಬಿರುಗಾಳಿ . ಹೆಂಡತಿಗೆ ಕಂಡು ಕೇಳರಿಯದವಿಚಿತ್ರ ಖಾಯಿಲೆ .ಒಂದು ಲಕ್ಷದಲ್ಲಿ ಒಬ್ಬರಿಗೆ ಬರುತ್ತದೆಂದು ಡಾಕ್ಟರ್ ಹೇಳಿದಾಗ ಆಕಾಶವೇ ಕಳಚಿ ಬಿದ್ದ ಹಾಗಾಯ್ತು. ಬದುಕುಳಿದವರು ಅದು ಪವಾಡ ಮಾತ್ರ ಎಂದು ಹೇಳಿದಾಗ ಆಸೆಯನ್ನೇ ಬಿಟ್ಟ.ಈ ವಿಷಯ ಹೆಂಡತಿಗೆ ತಿಳಿಸಲಿಲ್ಲ.ಒಂದು ದಿನ ಇಬ್ಬರೇ ಇದ್ದಾಗ ಹೇಳಿದಳು ನನಗೆ ಮನೆಗೆ ಬರುತ್ತೇನೆಂದು ನಂಬಿಕೆ ಈಗ ಇಲ್ಲ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ತಂಗಿಯರ ಕೈಬೀಡಬೇಡಿನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಬಹಳ ಹೊತ್ತಾಗಿದೆ ಏಕೋ ಎಂದೂ ಇಷ್ಟು ನಿದ್ದೆ ಬಂದಿದ್ದಿಲ್ಲ ಮಲಗೋಣ ಅಂತ ಅನಿಸ್ತಿದೆ. ನಾನು ಒಂದು ವಿಷಯ ಹೇಳಬೇಕು ನನ್ನ ಬಟ್ಟೆ ಬೀರುವಿನಲ್ಲಿ ಸುಮಾರು ದಿನದಿಂದ ಉಳಿಸಿ ಕೂಡಿಟ್ಟ ಹಣ ಇದೆ ನಾನು ಎಂದೂ ಎಣಿಸಿಲ್ಲ . ಈ ಸಮಯಕ್ಕೆ ನಿಮಗೆ ಬೇಕು ತೆಗೆದು ಕೊಳ್ಳಿ ಎಂದು ಮಲಗಿದವಳು ಅದೇ ಕೊನೆಯ ಮಾತಾಗಿ ಕಣ್ಣು ಮುಚ್ಚಿದಳು. ಡಾಕ್ಟರ್ ಅಂತ ಕಿರುಚಿದ .duty ಡಾಕ್ಟರ್ ಬಂದು ಎಲ್ಲಾ ಟೆಸ್ಟ್ ಗಳನ್ನೂ ಮಾಡಿ ಅಂತ್ಯ ಹಾಡಿದರು. ಅಲ್ಲಿಯವರೆಗೂ ಹಿಡಿದಿಟ್ಟಿದ್ದ ದುಃಖ ಒಮ್ಮೆಲೇ ಉಕ್ಕಿಬಂತು. ಮಗುವಿನಂತೆ ಹೊರ ಬಂದು ಅಳುತ್ತಾ ನಿಂತ. ಯಾರೋ ಹೆಂಗಸು ಬಂದು ಅತ್ತುಬಿಡಪ್ಪ ಎಷ್ಟು ಬೇಕೋ ಅಷ್ಟು ಅತ್ತುಬಿಡು. ಅಂತ ಹೇಳಿ ಹೋದರು. ಏಕೆಂದು ತಿಳಿಯಲೇ ಇಲ್ಲ. ಇಡೀ ರಾತ್ರಿ ಮುಂದಿನ ಕಾರ್ಯಗಳ ಬಗ್ಗೆಯೇ ಯೋಚಿಸ ತೊಡಗಿದ. ಜೀವನದ ಕರಾಳ ದಿನ ದ ಸೂರ್ಯೋದಯ ವಾಯ್ತು.ಕಷ್ಟದ ದಿನಗಳಲ್ಲಿ ಬೆನ್ನಾಗಿ ನಿಂತವಳ ನೆನಪಿನಲ್ಲಿದಿನ ದೂಡಬೇಕಾಯ್ತು.