Kalpana Nath

Tragedy Others

4  

Kalpana Nath

Tragedy Others

ತಾಯಿ

ತಾಯಿ

2 mins
24



 

ಒಂದಾನೊಂದು ಕಾಲದಲ್ಲಿ ಒಬ್ಬ ತಪಸ್ವಿ ಊರ ಹೊರಗಡೆ ಪುಟ್ಟ ಗುಡಿಸಲಲ್ಲಿ ಇದ್ದ . ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಿದ್ದ ಹಾಗಾಗಿ ಜನರಿಗೆಲ್ಲ ಆತನ ಬಗ್ಗೆ ಬಹಳ ಆತ್ಮೀಯ ಭಾವನೆ ಇತ್ತು. 

ಒಮ್ಮೆ ಅದೇ ಊರಿನ ಒಬ್ಬ ಯುವಕ ಮನೆ ಬಿಟ್ಟು ಕೆಟ್ಟ ಸಹವಾಸ ಮಾಡಿ ಪಕ್ಕದ ಊರುಗಳಲ್ಲಿ ಕಳ್ಳತನ ಸುಲಿಗೆ ಮಾಡಿ ಅನೇಕ ಸಲ ಜೈಲು ಶಿಕ್ಷೆ ಅನುಭವಿಸಿದ್ದ. ಅವನ ತಾಯಿ ಈ ವಿಷಯ ತಿಳಿದು ಬಹಳ ನೊಂದಿದ್ದಳು. ಕಡು ಬಡುತನದಲ್ಲೂ ಒಳ್ಳೆಯ ಸ್ವಭಾವ ಹೊಂದಿದ್ದ ಈಕೆಯ ಮಗನ ಬಗ್ಗೆ ಊರಲ್ಲಿ ಎಲ್ಲರಿಗೂ ಕೋಪವಿತ್ತು. 


ಒಂದು ದಿನ ಹೆಚ್ಚು ಕುಡಿದು ತೂರಾಡುತ್ತ ವಾಹನದ ಕೆಳಗೆ ಬಿದ್ದು ಪ್ರಾಣ ಬಿಟ್ಟವಿಷಯ ತಾಯಿಗೆ ತಿಳಿಯಿತು. ಮಗನ ಮುಖ ನೋಡಲು ಇಷ್ಟವಿಲ್ಲವೆಂದು ಬಾಯಲ್ಲಿ ಹೇಳಿದರು ತಾಯಿಯ ಹೃದಯ ಕೇಳಲಿಲ್ಲ. ಅವನ ಹೆಣ ತಂದು ಆಗಲೇ ಆ ತಪಸ್ವಿಯ ಆಶ್ರಮದ ಹತ್ತಿರ ಇಟ್ಟಿದ್ದರು . ಅಲ್ಲಿಗೆ ಬಂದು ಒಮ್ಮೆ ಮಗನ ಮುಖ ನೋಡಿ ದುಃಖ ತಡೆಯಲಾರದೆ ಹೆಣದ ಮೇಲೆ ಬಿದ್ದು ರೋಧಿಸಿದ ಧೃಶ್ಯ ಬಹಳ ಘೋರವಾಗಿತ್ತು. ಆ ತಪಸ್ವಿಯ ಕಾಲಿಗೆ ಬಿದ್ದು ಮಗನನ್ನ ಬದುಕಿಸಿಕೊಡಲು ಬೇಡಿಕೊಂಡಳು. ಅದಕ್ಕೆ ಅವರು ಆಗಬಹುದು ನಿನ್ನ ಮಗನನ್ನ ಬದುಕಿಸುತ್ತೇನೆ. ಆದರೆ ಅವನು ಮೊದಲಿಗಿಂತಲೂ ಹೆಚ್ಚು ಕ್ರೂರವಾಗಿ ವರ್ತಿಸುತ್ತಾನೆ. ಇದುವರೆಗೂ ಬರೀ ಕಳ್ಳತನ ಸುಲಿಗೆ ಮೋಸ ವಂಚನೆಯಲ್ಲಿ ಮುಳುಗಿದ್ದವನು ಕೊಲೆಗಳನ್ನು ಮಾಡಬಹುದು. ಪರವಾಗಿಲ್ಲ ಎಷ್ಟಾದರೂ ಮಗ ತಾನೇ ಮಾಡಿಕೊಂಡಿರಲಿ ಅನ್ನುವುದಾದರೆ ಹೇಳು ಹತ್ತು ನಿಮಿಷದಲ್ಲಿ ಬದುಕಿಸುತ್ತೇನೆ ಅಂದರು. ಬೇಡ ಬೇಡವೇ ಬೇಡ ಸತ್ತಿರುವುದೇ ಒಳ್ಳೆಯದು ಎಂದು ತಕ್ಷಣ ಮನಃ ಪರಿವರ್ತನೆಯಾದವಳಂತೆ ಹೇಳಿದಳು. ಅಲ್ಲೆ ಇದ್ದ ಕೆಲವರನ್ನ ಕರೆದು ದೇಹವನ್ನು ಸುಡಲು ಚಿತೆಗೆ ಏರ್ಪಾಡುಮಾಡಿಸಿದರು. ಮೊದಲೇ ಬೆಂಕಿಹಚ್ಚಿ ದೊಡ್ಡದಾಗಿ ಉರಿಯುತ್ತಿದ್ದಾಗ, ಹೆಣವನ್ನ ಅದರಲ್ಲಿ ಎಳೆದುಕೊಂಡು ಹೋಗಿ ಬಿಸಾಡಿ ಎಂದರು. ಅಲ್ಲಿಯ ವರೆಗೂ ಮೌನವಾಗಿದ್ದ ಅವನ ತಾಯಿ, ಏನು ಸ್ವಾಮಿ ಹೀಗೆ ಮಾಡ್ತಿದ್ದೀರಿ ನನ್ನ ಮಗ ಎಷ್ಟೇ ಕೆಟ್ಟ ನಡತೆಯವನಾದರೂ ಈಗ ಅದು ದೇಹ. ಅದಕ್ಕೆ ಈ ರೀತಿ ಅನಾಗರಿಕವಾಗಿ ಪ್ರಾಣಿಗಳನ್ನೂ ಸಂಸ್ಕಾರ ಮಾಡದ ರೀತಿ ಮಾಡುತ್ತಿದ್ದೀರಲ್ಲ ಎಂದು ಕೇಳಿದಳು. ಅದಕ್ಕೆ ಅವರು ಹೌದು ಎಷ್ಟಾದರೂ ನೀನು ಅವನ ಹೆತ್ತವಳು. ನಿನ್ನಂತೆ ಯಾರೂ ಯೋಚಿಸಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸು. ನಮಗೆ ಇದರಲ್ಲಿ ಯಾವ ಕೆಟ್ಟ ಉದ್ದೇಶವು ಇಲ್ಲ. ನಿನ್ನ ಮಗನ ಮುಖ ಕೊನೆಯ ಸಲ ನೋಡಿಬಿಡು. ಬೇರೊಂದು ಚಿತೆ ಮಾಡಿ ಸಂಸ್ಕಾರ ಮಾಡೋಣ ಬೇಸರ ಮಾಡಿಕೊಳ್ಳಬೇಡ ಅಂದರು. ಆ ಮಗನ ಮುಖ ನೋಡುವಾಗ ನಿಧಾನಕ್ಕೆ ಕಣ್ಣು ಬಿಟ್ಟು ಅಮ್ಮ ನನ್ನನ್ನ ಕ್ಷಮಿಸು. ನಾನು ಸತ್ತಿಲ್ಲ ಆ ನಿನ್ನ ಮಗ ಸತ್ತು ಎರಡು ವರ್ಷವಾಗಿದೆ. ಈ ನಿನ್ನ ಹೊಸ ಮಗನಿಗೆ ಹೊಸ ಬಾಳು ಕೊಟ್ಟು ಇವರ ಆಶ್ರಮದಲ್ಲೇ ಯಾರಿಗೂ ತಿಳಿಯದ ಹಾಗೇ ನನ್ನನ್ನ ಕಾಪಾಡಿದ್ದಾರೆ. ಹೀಗೊಂದು ನಾಟಕವಾಗಲಿ ಎಂದು ನಾವೆಲ್ಲ ಸಮ್ಮತಿಸಿ ಮಾಡಿದ್ದು . ತಪ್ಪು ಮಾಡಿದ್ದರೆ ಕ್ಷಮಿಸು ಎಂದ. ಆಕೆ ಏನು ಹೇಳದಾಗಿ ಅಲ್ಲೆ ಮೌನವಾಗಿ ನಿಂತಿದ್ದ ಆ ಮಹಾತ್ಮರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಳು. ಮಗನನ್ನ ಕರೆದುಕೊಂಡು ಹೋಗಬಹುದೆಂದು ಹೇಳಿದರೂ ಇಲ್ಲ ಈಗ ಇವನು ನಿಮ್ಮಮಗ. ನನ್ನ ಮಗ ಎಂದೋ ಸತ್ತಿದ್ದಾನೆ. ಇಲ್ಲೇ ನಿಮ್ಮ ಬಳಿ ಆಶ್ರಮದಲ್ಲೇ ಇರಲಿ ಎಂದು ಹೊರಟು ಹೋದಳು.


Rate this content
Log in

Similar kannada story from Tragedy