ಹಂಸವೇಣಿ ಕುಲಾಲ್

Drama Others Children

4  

ಹಂಸವೇಣಿ ಕುಲಾಲ್

Drama Others Children

ಸುವ್ವಿ ಸುವ್ವಲಾಲಿ - ೫

ಸುವ್ವಿ ಸುವ್ವಲಾಲಿ - ೫

3 mins
291


ಅಂದು ಅಮೃತ ಮನೆಗೆ ಬೇಗನೇ ಬರುವುದಕ್ಕೆ ಅಮ್ಮನ ಆದೇಶವಾಗಿತ್ತು. ಪ್ರತಿದಿನ ತನ್ನ ಬೆನ್ನ ಹಿಂದೆಯೇ ಸುತ್ತುತ್ತಿದ್ದ ಜೀವನ್ ಇಲ್ಲದ್ದು ಬೇಸರ ಎನಿಸಿದರು. ತನ್ನ ಕಲ್ಪನೆಗೆ ನಾಚಿಕೆ ಮೂಡಿತು. ಅದರ ನಂತರ ಭಯ ಮೂಡಿತು.


ಸಂಜೆಯ ವೇಳೆಗೆ ಮನೆಯನ್ನು ತಲುಪಿದಳು. ಒಳಗೆ ಹೋಗುತ್ತಿದ್ದಂತೆ ಅಚ್ಚರಿ ಅವಳಿಗೆ. ಜೀವನ್ ಜೊತೆಗೆ ಅವನ ತಂದೆ-ತಾಯಿ ಮನೆಗೆ ಬಂದಿರುವರು. ಅವಳನ್ನು ಕಂಡದ್ದೇ ಹತ್ತಿರಕ್ಕೆ ಬಂದ ಜೀವನ್.


"ಹಲೋ... ಸರ್ಪ್ರೈಸ್ ಅಮ್ಮು"

ಕಣ್ಣು ಹೊಡೆದ.


ಅಲ್ಲಿನ ವಾತಾವರಣ ನೋಡಿದವಳಿಗೆ ಸಂಪೂರ್ಣ ಚಿತ್ರಣ ಅರ್ಥವಾಯಿತು.


"ಇದೆಲ್ಲಾ ಏನು ಜೀವನ್?"

ಕೋಪದಲ್ಲಿ ಕೇಳಿದಳು.


"ನನ್ನ, ನಿನ್ನ ಮದುವೆಗೆ ಡಿಸ್ಕಸ್ ಮಾಡ್ತಾ ಇದ್ದಾರೆ"


"ಸ್ಟಾಪ್ ಇಟ್. ಕಿರುಚಿದಳು.

ನಿಮ್ಮ ಹುಚ್ಚಾಟ ಇಲ್ಲಿವರೆಗೆ ಬರುತ್ತೆ ಅಂತ ತಿಳಿದಿರಲಿಲ್ಲ ನಾನು. ಎಷ್ಟು ಸಾರಿ ಹೇಳಿಲ್ಲ ನಾನು, ನೀವಂದ್ರೆ ಇಷ್ಟ ಇಲ್ಲ ನನಗೆ. ಈ ಮದುವೆ ಕೂಡ ಇಷ್ಟ ಇಲ್ಲ. ಅರ್ಥ ಆಯ್ತಾ"


ಮಾತಿಗೆ ಪೂರ್ಣ ವಿರಾಮ ನೀಡಿ. ಮುಂದೆ ಹೆಜ್ಜೆ ಹಾಕಿದಳು. ಅವಳ ಎದುರಿಗೆ ಅಡ್ಡಲಾಗಿ ನಿಂತ ಜೀವನ್


"ಯಾಕೆ? ಯಾಕೆ ಇಷ್ಟ ಇಲ್ಲ ಅಂತ ಹೇಳು ಅಮ್ಮು? ಸಾಕು ಅಮ್ಮು, ನೀನು ಹೇಳ್ತಾ ಇರೋದೆಲ್ಲಾ ಸುಳ್ಳು ಅಂತ ನನಗೂ ತಿಳಿದಿದೆ. ನೀನು ನನಷ್ಟೇ, ನನ್ನನ್ನ ಪ್ರೀತಿ ಮಾಡ್ತಾ ಇದ್ದೀಯ ಅನ್ನೋದು ಗೊತ್ತು. ನನ್ನ ಮುಂದೆ ಪ್ರೀತಿ ಇಲ್ಲ ಅಂದ್ರು, ನಾನು ಎದುರು ಬಂದು ಪಕ್ಕ ಸರಿದಾಗ ನಿನ್ನ ಮೊಗದಲ್ಲಿ ಮೂಡಿದ ನಗುನ ನೋಡಿದ್ದೀನಿ. ನನಗೆ ಸ್ವಲ್ಪ ನೋವಾದರೂ ನಿನ್ನ ಮನಸ್ಸಿಗೆ ಎಷ್ಟು ನೋವಾಗುತ್ತೆ ಅಂತ ತಿಳಿದಿದೆ ನನಗೆ. ತುಂಬಾ ದೂರ ಬೇಡ, ನಿನ್ನ ಬರ್ತಡೇ ದಿನ ನಾನು ಕೊಟ್ಟ ಗಿಫ್ಟ್ ನೀನ್ಯಾಕೆ ರಿಜೆಕ್ಟ್ ಮಾಡ್ಲಿಲ್ಲ? ಅದೆಲ್ಲಾ ನಿನ್ನ ರೂಮ್‌ನಲ್ಲಿ ಇದೆ. ಇದೆಲ್ಲಾ ಪ್ರೀತಿ ಇಲ್ಲ ಅಂದಿದ್ರೆ ನೀನು ಮಾಡ್ತಾ ಇದ್ದ? ಅಮ್ಮು, ನನಗೆ ಎಲ್ಲಾ ತಿಳಿದಿದೆ. ನೀನು ಮದುವೆ ಬೇಡ ಅನ್ನೋದರ ಹಿಂದೆ ಇರುವ ಕಾರಣ ತಿಳಿದಿದೆ ನನಗೆ"


ಅವನ ಮಾತುಗಳಿಗೆ ಅವಕ್ಕಾಗಿ ನಿಂತಳು.


"ಅಮ್ಮು ಪುಟ್ಟ ಏನು ಇದೆಲ್ಲಾ? ಜೀವನ್ ನಿಮ್ಮ ಮಾತು ಒಂದು ಅರ್ಥ ಆಗ್ತಾ ಇಲ್ಲ"

ಆಕಾಶ್ ಗಾಬರಿಯಲ್ಲಿ ಕೇಳಿದ.


"ಅಮ್ಮು... ಅವಳ ಸನಿಹ ಬಂದ ಜೀವನ್.

ಇನ್ನೂ ಎಷ್ಟು ದಿನ ಅಂತ ಈ ನೋವಿನಲ್ಲೇ ಕೊರಗ್ತೀಯಾ? ನನ್ನ ಅಮ್ಮು ಮನಸ್ಸಲ್ಲಿ ಇಷ್ಟು ನೋವಿದೆ ಅಂತ ಖಂಡಿತ ತಿಳಿದಿರಲಿಲ್ಲ"

ಅವಳ ಮೊಗವನ್ನು ಬೊಗಸೆಯಲ್ಲಿ ಹಿಡಿದ.


"ಜಿ... ಜೀವನ್ ನಿಮಗೆ ಹೇಗೆ...?"


"ಡಾಕ್ಟರ್ ಗುರುದಾಸ್ ಹೇಳಿದ್ರು. ಹೇಳ್ಬಿಡು ಅಮ್ಮು ನಿನ್ನ ಮನಸ್ಸಿನ ನೋವನ್ನ ಎಲ್ಲರ ಮುಂದೆ. ಆಗ ನಿನ್ನ ನೋವು ಸ್ವಲ್ಪನಾದರು ಕಡಿಮೆ ಆಗುತ್ತೆ"


ಅವನ ಮಾತುಗಳು ಎಲ್ಲರ ಮನಸ್ಸನ್ನ ಮತ್ತಷ್ಟು ಗಾಬರಿ ಮಾಡಿಸಿತು. ಅಮೃತಾ ಅಳಲು ಶುರು ಮಾಡಿದಳು.


"ಅಮ್ಮು... ಅವಳನ್ನ ತನ್ನ ಎದೆಗೆ ಒರಗಿಸಿಕೊಂಡ ಜೀವನ್.

ನಾನೇ ಹೇಳ್ತೀನಿ ಅಮ್ಮು"


ಅವನು ಎಲ್ಲರಿಗೂ ಸತ್ಯ ಹೇಳಲು ಬಂದಾಗ ಅವನನ್ನ ತಡೆದು ತಾನೇ ಹೇಳಲು ಮುಂದಾದಳು.


"ಅಮ್ಮ... ನನ್ನ ಕ್ಷಮಿಸು ಮೊದಲು. ಅಪ್ಪ, ಅಣ್ಣ... ದುಃಖ ಮೂಡಿತು ಅವಳಿಗೆ. ನಿಮ್ಮೆಲ್ಲರಿಂದ ಒಂದು ಸತ್ಯನ ಮರೆ ಮಾಡಿದ್ದೀನಿ ಅಮ್ಮ...

ಅವರನ್ನ ತಬ್ಬಿದ್ದಳು.

ಪ್ರತಿ ತಿಂಗಳು ನಿನಗೆ ನಾನು ಮೋಸ ಮಾಡ್ತಾ ಇದ್ದೆ ಅಮ್ಮ. ನಿಮ್ಮೆಲ್ಲರ ಮುಂದೆ ನಾಟಕ ಮಾಡಿದ್ದೀನಿ"


"ಅಮ್ಮು... ಅಳ್ಬಾರದು ಕಂದ. ಅಮ್ಮನಿಗೆ ನೀನು ಯಾವತ್ತೂ ಮೋಸ ಮಾಡಿಲ್ಲ. ಇಲ್ಲ ಕಂದ"

ಅವಳ ಕೆನ್ನೆಯ ಮೇಲೆ ಜಾರಿದ ಹನಿಯನ್ನ ಸವರಿದರು ಅವರು.


"ಇಲ್ಲ ಅಮ್ಮ ನಿನ್ನ ಮಗಳು ಅಂತ ತಪ್ಪನ್ನೇ ಮಾಡಿದ್ದಾಳೆ. ಅವಳು ತುಂಬಾ ದೊಡ್ಡ ದ್ರೋಹ ಮಾಡಿದ್ದಾಳೆ"

ಅವರಿಂದ ದೂರ ಸರಿದಳು. ಕಂಬನಿಯ ಹನಿಗಳು ಅಂತರವಿಲ್ಲದೆ ಜಾರುತ್ತಿದೆ.


"ಅಮ್ಮು... ಅವಳು ದೂರ ಸರಿದರು ಮಾತೃ ಹೃದಯ ಕ್ಷಣವೂ ಬಿಟ್ಟಿರದೆ ಅಪ್ಪಿತು ಅವಳನ್ನ.

ಅದೇನು ಅಂತ ಹೇಳು ಅಮ್ಮು?"


  

"ಅದು ಏನಂದ್ರೆ... ಗಟ್ಟಿ ಮನಸ್ಸು ಮಾಡಿಕೊಂಡಳು.

ನನ್ನ ಬರ್ತಡೇ ದಿನ ಫ್ರೆಂಡ್ಸ್ ಜೊತೆ ಬೈಕ್ ರೈಡ್ ಹೋಗಿ ಆಕ್ಸಿಡೆಂಟ್ ಆಗಿದ್ದು ನೆನಪಿದೆ ಅಲ್ವಾ ಅಮ್ಮ. ಆಗ, ಆ ಆಕ್ಸಿಡೆಂಟ್‌ನಲ್ಲಿ ನನ್ನ ಹೊಟ್ಟೆ, ಹೊಟ್ಟೆಯ ಮೇಲೆ ಜೋರಾಗಿ ಪೆಟ್ಟಾಗಿತ್ತು. ಈ ವಿಷಯ ನಿಮಗೆ ಹೇಳ್ಬಾರದು ಅಂತ ನಾನೇ ಡಾಕ್ಟರ್‌ಗೆ ಹೇಳಿದೆ. ನ, ನನಗೆ ತಾಯಿ ಆಗೋ ಭಾಗ್ಯ ಇಲ್ಲ ಅಮ್ಮ"


ಕೆಳಗೆ ಕುಸಿದು ಕುಳಿತಳು.


ಎಲ್ಲರ ಹೃದಯ ಕ್ಷಣ ಮಿಡಿಯಿತು. ಈ ಮನೆಯ ರಾಜಕುಮಾರಿ ಅವಳು. ಸದಾ ಹೂವಿನ ಮೇಲೆ ನಡೆಸುತ್ತಿದ್ದ ಅವರಿಗೆ ಈ ನೋವನ್ನ ಆ ಪುಟ್ಟ ಹೃದಯ ಅದೇಗೆ ಸಹಿಸಿತೋ ಎಂದು ಕೊರಗಿದರು. ಅವಳನ್ನ ಸಂತೈಸಲು ಮುಂದಾದರು. 


"ಅಮ್ಮು... ಈ ಕಾರಣದಿಂದ ನೀನು ಮದುವೆ ಬೇಡ ಅಂತ ಹೇಳ್ತಾ ಇದ್ದೀಯ. ನಿನಗೆ ಮದುವೆ ಆದ್ಮೇಲೆ ಈ ರೀತಿ ಆಗಿದ್ರೆ? ನನ್ನ ನೋಡು ಅಮ್ಮು.

ಜೀವನ್ ಅವಳ ಮುಖವನ್ನ ಅವನ ಕಡೆಗೆ ತಿರುಗಿಸಿಕೊಂಡ.

ನಾನು ನಿನ್ನನ್ನ ತುಂಬಾ ಪ್ರೀತಿ ಮಾಡ್ತೀನಿ. ನಿನಗೆ ಮಕ್ಕಳಾಗುವುದಿಲ್ಲ ಅಂತ ನಾನು, ನನ್ನ ಪ್ರೀತಿನಾ ಮರೀತಿನಿ ಅನ್ಕೊಂಡ. ನೆವರ್ ನನಗೆ ಈ ಪುಟ್ಟ ಮಗು ಜೊತೆಗೆ ಇದ್ರೆ ಅಷ್ಟೇ ಸಾಕು"


ಅವಳ ಕೆನ್ನೆ ಹಿಡಿದು ಎಳೆದ. ಎಲ್ಲರೂ ನಕ್ಕರು.


"ಪ್ಲೀಸ್ ಜೀವನ್, ನನಗೋಸ್ಕರ ನೀವು ಹೀಗೆ ಹೇಳ್ತಾ ಇದ್ದೀರಾ. ನನ್ನಿಂದ ಯಾರ ಜೀವನ ಕೂಡ ನೋವಿನಲ್ಲಿ ಇರೋದು ಇಷ್ಟ ಇಲ್ಲ ನನಗೆ. ನೋ, ನೋ ಜೀವನ್. ನಿಮ್ಮ ಜೀವನದ ಬಗ್ಗೆ ಯೋಚನೆ ಮಾಡಿ. ನನ್ನನ್ನ ಪ್ಲೀಸ್ ಮರೆತು ಬಿಡಿ"


"ಅದರ ಬದಲು ಸೂಸೈಡ್ ಮಾಡ್ಕೋ ಅಂತ..."


"ಜೀವನ್..."

ಅವನ ಬಾಯಿ ಮುಚ್ಚಿದಳು.


"ಮತ್ತೆ ಮರೆತು ಬಿಡು ಅಂದ್ರೆ, ನಾನು ಮಾಡೋದೇ ಇದನ್ನೇ"

ಅವಳ ಹಣೆಗೆ ತನ್ನ ಹಣೆಯ ತಾಗಿಸಿದ.


"ಅಮೃತಾ ನೋಡಮ್ಮ, ಬೇರೆ ಯಾವ ಮಾತು ಬೇಡ. ನನ್ನ ಮಗ ಮೊದಲೇ ಎಲ್ಲಾನ್ನು ಹೇಳಿದ್ದಾನೆ. ನೀನು ನಮ್ಮ ಮನೆಗೆ ಸೊಸೆಯಾಗಿ ಬರೋಕ್ಕೆ ಒಪ್ಪಿನೆ ನಾವು ಬಂದಿರೋದು. ಅವನ ಆಸೆ, ನಮ್ಮ ಆಸೆ"


ಜೀವನ್ ತಂದೆ ಸಂಪತ್ ಕುಮಾರ್ ಹೇಳಿದರು.


"ಅಮ್ಮು... ಒಪ್ಕೊಳ್ಳೇ"

ಮುದ್ದಿನಿಂದ ಕೇಳಿದ ಜೀವನ್.


ನಾಚಿಕೆಯಲ್ಲಿ ತಲೆಯಾಡಿಸಿ ಓಡಿದಳು ಹುಡುಗಿ.


ಕೊನೆಗೂ ಮದುವೆಗೆ ಸಮ್ಮತಿ ನೀಡಿದಳು ಅಮೃತಾ. ಕಹಿಯ ಹಿಂದೆಯೇ ಬಂದ ಈ ಸಿಹಿ ಎಲ್ಲರ ಮನಸ್ಸನ್ನ ತಂಪಾಗಿಸಿತು. ಇಬ್ಬರ ಮದುವೆಗೆ ತಯಾರಿ ಪ್ರಾರಂಭವಾಯಿತು.


       *********************


ಮುಂದುವರೆಯುತ್ತದೆ...



Rate this content
Log in

Similar kannada story from Drama