Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

ಹಂಸವೇಣಿ ಕುಲಾಲ್

Drama Romance Fantasy


2  

ಹಂಸವೇಣಿ ಕುಲಾಲ್

Drama Romance Fantasy


ಸ್ಫಟಿಕ-೧

ಸ್ಫಟಿಕ-೧

4 mins 102 4 mins 102

             ಸ್ಫಟಿಕ -೧


ಇದೊಂದು ಕಾಲ್ಪನಿಕ ಕಥೆ. ಕೆಲವೊಂದು ಸನ್ನಿವೇಶಗಳಲ್ಲಿ ಅವಾಸ್ತವಿಕತೆಯಲ್ಲಿ ಇರುತ್ತದೆ. ಪ್ರತಿ ಪಾತ್ರ, ಸನ್ನಿವೇಶ ನನ್ನ ಕಲ್ಪನೆ.


ಓಂ,, ನಮಃ,, ಶಿವಾ,,,ಯ 

ಓಂ,, ನಮಃ,, ಶಿವಾ,,,ಯ 

ಓಂ,, ನಮಃ,, ಶಿವಾ,,,ಯ    ಮೂಡನದಿ ಆಗಷ್ಟೆ ತನ್ನ ದರುಶನ ತೋರುತ್ತಾ ನೇಸರನು ಇಣುಕಿರಲು. ಗುರು ಶ್ರೇಷ್ಠರಾದ ಪೂರ್ಣವರ್ಮರು ಸೂರ್ಯ ನಮಸ್ಕಾರ ಮುಗಿಸಿ ಎಂದಿನಂತೆ ತಮ್ಮ ಆರಾಧ್ಯ ದೈವ ಮಹಾದೇವನ ಧ್ಯಾನದಲ್ಲಿ ಮುಳುಗಿದರು.


ಓಂ,, ನಮಃ,, ಶಿವಾ,,,ಯ 

ಓಂ,, ನಮಃ,, ಶಿವಾ,,,ಯ 

ಓಂ,, ನಮಃ,, ಶಿವಾ,,,ಯ ಅಷ್ಟು ಮೌನ ಸುತ್ತಲು. ಜೀವಜಂತುಗಳು ಸಹ ಇವರೊಡನೆ ಧ್ಯಾನದಲ್ಲಿ ಮಗ್ನರಾಗಿರಲು,


"ಪೂರ್ಣವರ್ಮರೆ... ಪೂರ್ಣವರ್ಮರೆ"


ಹಾಗೆಯೇ ತೇಲಿ ಬಂದಿತ್ತು ಸ್ವರ. ಈ ಸ್ವರ ಧ್ಯಾನದಲ್ಲಿ ಮುಳುಗಿರುವ ಪೂರ್ಣವರ್ಮರನ್ನ ಎಚ್ಚರಿಸಿತು. ಧ್ಯಾನದ ಸ್ಥಿತಿಯಲ್ಲಿ ಮುಳುಗಿರುವ ಅವರನ್ನ, ಎಂದಿಗೂ ಅವರೇ ಎಚ್ಚರಿಸಿಕೊಳ್ಳುವ ಸಮಯದವರೆಗೂ ಎಚ್ಚರಿಸುವುದು ಅಸಾಧ್ಯ ಎಂಬ ಮಾತು ರೂಢಿಯಲ್ಲಿತ್ತು, ಗುರು ಶ್ರೇಷ್ಠರುಗಳ ನಡುವೆ."ಯಾವುದೀ ಸ್ವರ? ಒಮ್ಮೆಲ್ಲೇ ನನ್ನ ಧ್ಯಾನಕ್ಕೆ ಅಂತ್ಯ ಹೇಳುವಂತೆ ಪ್ರೇರೇಪಿಸುತ್ತಿದೆ. ಅಬ್ಬಾ! ನನ್ನ ಮನ ಈ ಸ್ವರದಲ್ಲಿ ತನ್ನನ್ನೇ ಮರೆಯುತ್ತಿದೆಯಲ್ಲ"


ಹಾಗೆ ಕಣ್ಣಿನ ರೆಪ್ಪೆಯ ನಿಧಾನವಾಗಿ ತೆರೆದರು.


ಅದೇನು ತೇಜಸ್ಸು, ಕಣ್ಣಲ್ಲಿ ಪ್ರಜ್ವಲಿಸುವ ಬೆಳಕು, ಮಂದಸ್ಮಿತದ ನಗು,


"ಮಹಾದೇವ..."

ಎಂಬ ಉದ್ಗಾರ


ಅದೇ ಮಂದಸ್ಮಿತದ ನಗು, ಪೂರ್ಣವರ್ಮರಿಗೆ ಅದೆಷ್ಟೇ ನೋಡಿದರು ಸಾಲದು ಎನಿಸುತ್ತಿದೆ.


"ಪೂರ್ಣವರ್ಮರೆ... ಪೂರ್ಣವರ್ಮರೆ"

ಮಹಾದೇವ ಎಚ್ಚರಿಸಿದ್ದರು.


"ಮಹಾದೇವ,,, ಪ್ರಭು, ಭಕ್ತರ ಪಾಲಿನ ಕಲ್ಪತರು, ಜಗತ್ತಿನ ಪಾಲಕರಿಗೆ ನಿಮ್ಮ ಭಕ್ತನ ಪ್ರಣಾಮಗಳು ಪ್ರಭು"


ಕೈ ಜೋಡಿಸಿ ನಮಸ್ಕರಿಸಿದರು. ಪ್ರಿಯ ಭಕ್ತನ ಪ್ರಣಾಮ ಸ್ವೀಕರಿಸಿದ ಮಹಾದೇವ ತಮ್ಮ ತ್ರಿಶೂಲವನ್ನು ಮತ್ತೊಂದು ಹಸ್ತಕ್ಕೆ ಸ್ಥಳಾಂತರಿಸಿ ಆಶೀರ್ವಾದಿಸಿದರು.


"ಇದೇನು ಪ್ರಭು ನಿಮ್ಮ ಲೀಲೆ? ತಾ...ವು ಇಲ್ಲಿವರೆಗೂ ನನ್ನ ಅರಸಿ ಬಂದ್ದೀರುವಿರಿ ? ನೀವು ಒಮ್ಮೆ ನೆನಸಿದರೆ ಕೈಲಾಸಕ್ಕೆ ಕ್ಷಣ ಮಾತ್ರವೇ ನಿಮ್ಮೆದುರು ಇರುವ ನಿಮ್ಮ ಈ ಭಕ್ತ. ಆ...ಗಿರಲು ತಾವು"


"ಅವಶ್ಯವಿರುವಾಗ ಅವಶ್ಯ ಇರುವ ವ್ಯಕ್ತಿಯನ್ನ ಅರಸಿ ಬರಬೇಕಿರುವುದು ಅವಶ್ಯವಿರುವಾತ ಪೂರ್ಣವರ್ಮರೆ. ಈಗ ನಿಮ್ಮ ಅವಶ್ಯ ನನಗಿದೆ; ನಾನು ಅರಸಿ ಬಂದಿರುವೆ"


"ನಿಮ್ಮ ಮಾತಿಗೆ ನಂದಿಯಂತೆ ತಲೆ ಆಡಿಸುವುದಷ್ಟೆ ನನ್ನ ಕಾರ್ಯ ಮಹಾದೇವ. ನನ್ನ ಅವಶ್ಯ ನಿಮಗೆ?"


"ಹಾ, ನಿಮ್ಮ ಅವಶ್ಯವೇ ಪೂರ್ಣವರ್ಮರೆ. ದೇವಿ ಪಾರ್ವತಿ ನಾವು ತಪ್ಪಸ್ಸನ್ನ ಆಚರಿಸಲು ತೆರಳಿದ್ದು ತಿಳಿದಿದೆ ಅಲ್ಲವೇ?"


" ನಿಮ್ಮ ದರುಶನಕ್ಕೆ ಬಂದ ಸಮಯದಿ, ನಂದಿಯಿಂದ ತಿಳಿಯಿತು ಪ್ರಭು"


"ಪೂರ್ಣವಾಗಿ ತಪ್ಪಸ್ಸು ಯಶಸ್ಸು ಕಂಡಿದೆ. ಆ ತಪ್ಪಸ್ಸಿಗೆ ಒಂದು ಕಾರಣ ಉಂಟು ಶ್ರೆಷ್ಟರೆ"


"ತಿಳಿದಿದೆ ಮಹಾದೇವ ಲೋಕಕಲ್ಯಾಣಕ್ಕಾಗಿ, ನಾನು ಅಷ್ಟು ಊಹಿಸಬಲ್ಲೆ"


"ಮುಂದೆ ಈ ಜಗತ್ತಿನಲ್ಲಿ ನಾವು ಪ್ರವೇಶವ ನಿಷೇಧಿಸುವ ಸಮಯದಿ,,,"


"ಮಹಾದೇವ (ಆಶ್ಚರ್ಯದಲ್ಲಿ) ಇದೇನು?


"ಪೂರ್ಣವರ್ಮರೆ ಮುಂದಿನ ಯುಗದಲ್ಲಿ ಮಾನವನ ಅಧಿಕಾರ, ಜೀವಿಗಳ ದಿನಚರಿ ವ್ಯತ್ಯಾಸ ಆಗುವುದು. ಮಾನವನ ಕೃತಕಗಳಿಗೆ ಜಗತ್ತು ಸೋಲುತ್ತದೆ. ನಾನು ಎಂಬ ಸ್ವಾರ್ಥದ ಮಾನವರ ಕೈಯಲ್ಲಿ ನನ್ನ ಮುಗ್ಧ ಭಕ್ತರು ಸಿಲುಕುವ ಸಾಧ್ಯತೆ ಇದೆ"


"ಏನಿದು ಪ್ರಭು ನಿಮ್ಮ ಮಾತು ಸತ್ಯವೇ? ಆದರೆ... ಆದರೆ ಈ ಭೂಮಿಯ ಪಾಡು ಏನು? ನೀವೇ ಇಲ್ಲವೆಂದರೆ ರಕ್ಷಣೆ ಎಲ್ಲಿಂದ?"


"ಆ ಯುಗದಲ್ಲಿ ನಮ್ಮ ರಕ್ಷಣೆಗೆ ಸಾಕಷ್ಟು ತೊಡಕು ಮೂಡುತ್ತದೆ. ತ್ರಿಮೂರ್ತಿಗಳ ಶಕ್ತಿಗೆ ವಿರುದ್ಧ ಶಕ್ತಿ ತನ್ನ ಆಳ್ವಿಕೆ ನಡೆಸಿದರು ಸ್ವೀಕರಿಸಲೇಬೇಕು. ಆ ಕಾಲದಲ್ಲಿ ನಾವು ಇಲ್ಲಿ ಇರುವುದು ಅಸಾಧ್ಯ. ಹಾಗಾಗಿಯೇ ಈ ತಪಸ್ಸು. ಇದರ ಯಶಸ್ಸೇ ಅದ್ಬುತ ಶಕ್ತಿಯ ಈ ಸ್ಫಟಿಕ *** ( ಸ್ಫಟಿಕದಿಂದ ಮೂಡಿರುವ ಆ ಅದ್ಭುತ ಶಕ್ತಿ ಮುಂದೆ ತಿಳಿಯುತ್ತದೆ. ಮಹಾದೇವ ತಮ್ಮ ಕೈ ಮುಂದೆ ಮಾಡಿ ಹಸ್ತವ ಚಾಚಿ ತೋರಿದಾಗ, ಅದೇನೆಂಬುದು ಪೂರ್ಣವರ್ಮಾರಿಗೆ ಕಾಣುತ್ತದೆ.) ಇನ್ನು ಮುಂದೆ ನನ್ನ ಭಕ್ತರ ಕಾಯಲು ಭೂಲೋಕದಲ್ಲಿ ಸ್ಥಾಪಿತಗೊಳ್ಳುತ್ತದೆ ಆದರೆ..."


"ಆದರೆ... ಆದರೇನು ಪ್ರಭು?"


"ಈ ಸ್ಫಟಿಕ *** ಕ್ಕೆ ತೊಂದರೆ ಇದೆ. ಒಂದು ಶಕ್ತಿ ಭೂಮಿಯ ಮೇಲೆ ಬಂದಿದೆ ಅಂದರೆ ಅದು ದುಷ್ಟ ಗಣಕ್ಕೆ ಎಂದಿಗೂ ಅವಶ್ಯ. ಲೋಕವ ಕಾಯುಲು ಈ ಸ್ಫಟಿಕ ***. ಅದೆಷ್ಟೇ ಯುಗಗಳು ಸಾಗುವುದರ ಜೊತೆಯಲ್ಲಿ ಈ ಸ್ಫಟಿಕದ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಹೋಗುತ್ತದೆ. ಇದೇನಾದರೂ ದುಷ್ಟ ಶಕ್ತಿ ವಶವಾದರೆ ಮುಂದೆ ದೈವ ಶಕ್ತಿ ತನ್ನ ನೆಲೆ ಕಳೆದುಕೊಳ್ಳುತ್ತದೆ. ಇದರ ಶಕ್ತಿಗಾಗಿ ಹಂಬಲ ಸಹ ದುಷ್ಟ ಶಕ್ತಿಗೆ ಅವಶ್ಯ ಇರುತ್ತದೆ"


"ಮಹಾದೇವ ಚಿಂತಿಸಬೇಡಿ. ಇದರ ಹೊಣೆ ನನ್ನದು. ನನ್ನ ಪ್ರಾಣದ ಹಂಗಣೆ ತೊರೆದು ಇದನ್ನು ರಕ್ಷಿಸುವೆ"


"ಅದು ಅಸಾಧ್ಯದ ಮಾತು ವರ್ಮರೆ"


"ಮಹಾದೇವ.... ನನ್ನ ಮಾತಲ್ಲಿ ನಂಬಿಕೆ ಇಲ್ಲವೇ? ಅಥವಾ ನನ್ನ ಶಕ್ತಿಯ ಮೇಲೆ ತಮಗೆ ಅಪನಂಬಿಕೆಯೇ? ಇಲ್ಲ ಈ ಸ್ಫಟಿಕ *** ನನ್ನ ಬಳಿ ಇರಿಸಲು ನಾನು ಯೋಗ್ಯನಲ್ಲವೆ? ಹೇಳಿ ಮಹಾದೇವ,,"

ಕ್ಷಣಕ್ಕೆ ಕೋಪಗೊಂಡರು.


"ಕೋಪದ ಕೈಗೆ ಬುದ್ದಿ ನೀಡಲು ಉಚಿತ ಸಮಯ ಅಲ್ಲ ವರ್ಮರೆ ಇದು. ಶಾಂತಚಿತ್ತರಾಗಿ ನನ್ನ ಮಾತನ್ನ ಆಲಿಸಿ. ಇದು ಶಿವ-ಶಕ್ತಿಯ ಪ್ರತೀಕದ ಸ್ಫಟಿಕ ***. ಜಗತ್ತಿನ ರಕ್ಷಣೆಗೆ ನನ್ನ ಅವಶ್ಯ ಎಷ್ಟಿದೆಯೋ, ಅಷ್ಟೇ ಶಕ್ತಿ ಅಂದರೆ ಪಾರ್ವತಿ ದೇವಿಯ ಅವಶ್ಯ ಸಹ ಉಂಟು. ಈ ಪ್ರಕೃತಿ ಪುರುಷ ಅಥವಾ ಸ್ತ್ರೀಯಿಂದ ಸೃಷ್ಟಿಗೊಂಡಿಲ್ಲ. ಪುರುಷ ಹಾಗೂ ಸ್ತ್ರೀಯ ಸಮ್ಮಿಲನದ ಪ್ರತಿರೂಪ. ಒಬ್ಬರ ಗೈರಾದರು ಈ ಪ್ರಕೃತಿ ಇಲ್ಲ""ಮಹಾದೇವ ತಮ್ಮ ಈ ಮಾತುಗಳನ್ನ ನಾನು ಒಪ್ಪುವೆ. ಆದರೆ ಇಂದೇಕೆ ಈ ಮಾತು""ವರ್ಮಾರೆ ತಾವು ಪಾಲಿಸಿಕೊಂಡು ಬಂದಿರುವ ಬ್ರಹ್ಮಾಚಾರತ್ವ ಎಂತಹದು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಇದರ ರಕ್ಷಣೆಗೆ ತೊಡಕ್ಕಾಗಿರುವುದೇ ನಿಮ್ಮ ಈ ಬ್ರಹ್ಮಾಚಾರತ್ವ ಪಾಲನೆ. ಇದರ ರಕ್ಷಣೆಗೆ ಪುರುಷ ಹಾಗೂ ಸ್ತ್ರೀ ಇಬ್ಬರ ಅಗತ್ಯವಿದೆ. ಇದನ್ನು ರಕ್ಷಿಸಲು ಅವರಿಬ್ಬರೂ ಸಕ್ತರಾಗುವುದು ತಮ್ಮ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದ ನಂತರವೇ""ಮಹಾದೇವ ನಿಮ್ಮ ಸಾನಿಧ್ಯ ಪಡೆಯಲು ನಾನು ಅನುಸರಿಸಿದ ಮಾರ್ಗ ಇದು. ಇಂದು ನನ್ನ ಅರಸಿ ಬಂದಿರುವ ತಮಗೆ ಶೂನ್ಯ ಉತ್ತರ ನೀಡುವ ಪರಿಸ್ಥಿತಿ ತಂದೀರಿ""ನೀವು ಚಿಂತಿಸುವ ಅಗತ್ಯವಿಲ್ಲ ವರ್ಮಾರೆ. ಇದರ ರಕ್ಷಣೆಗೆ ನಿಮ್ಮ ಬಳ್ಳಿ ಇರುವ ಅತ್ಯಮೂಲ್ಯ ಸ್ಫಟಿಕವನ್ನ ಅರಸಿ ನಾನು ಬಂದಿರುವುದು"


"ನನ್ನ ಬಳ್ಳಿ ಅತ್ಯಮೂಲ್ಯ ಸ್ಫಟಿಕವೆ?

ಅಚ್ಚರಿಯ ಕಣ್ಣುಗಳಿಂದ ನೋಡಿದರು.

ಇದೇನು ಮಹಾದೇವ ನಿಮ್ಮ ಪರಿಹಾಸ್ಯ? ನನ್ನ ಬಳಿ..."


"ಏನು ವರ್ಮರೇ ನಿಮ್ಮ ಬಳಿ ಇರುವ ಸ್ಫಟಿಕದ ಬಗ್ಗೆ ನನಗೆ ತಿಳಿದಿಲ್ಲವೇ? ಅಥವಾ ನನ್ನಿಂದ ಮರೆಮಾಚುವ ಬಯಕೆಯೇ ತಮಗೆ?"


"ನಿಮ್ಮ ಮಾತು ನಿಜಕ್ಕೂ ನನಗೆ ಒಗಟಾಗಿ ತೋರುತ್ತಿದೆ ಮಹಾದೇವ. ಈ ಭಕ್ತನ ಪರೀಕ್ಷೆಯೇ ತಮಗೆ? ಅಂತಹ ಅತ್ಯಮೂಲ್ಯ ಸ್ಫಟಿಕ ನನ್ನ ಬಳ್ಳಿ ಇರುವುದೇ? ಯಾವುದು ಅದು?"


"ನಿಮ್ಮ ಮರೆವೆಗೆ ನಾನೇ ಉತ್ತರಿಸಿವೆ. ಆ ಸ್ಫಟಿಕ ಮತ್ಯಾವುದೋ ಅಲ್ಲ, ನನ್ನ ಪ್ರಿಯ ಭಕ್ತ ಹಗಲಿರುಳು ನನ್ನದೇ ಜಪದಲ್ಲಿ ಮೈಮರೆವ ನಿಮ್ಮ ಪ್ರಿಯ ಶಿಷ್ಯ. ಅವನೇ ಈ ಸ್ಫಟಿಕದ ರಕ್ಷಣೆಗೆ ಯೋಗ್ಯ ಅಲ್ಲವೇ ನಾನೇ ಪೂರ್ತಿ ವಿವರಿಸಬೇಕೇ ಹೇಳಿ"


       **************


"ಇಲ್ಲಿ ಯುವರಾಜರು ಮಹಾದೇವನ ಧ್ಯಾನದಲ್ಲಿ ಮುಳುಗಿರುವರು. ಅಲ್ಲಿ ಮಹಾರಾಜರ ಆಜ್ಞೆ ನಾನೊಬ್ಬ ಶಿವ ಭಕ್ತನಾಗಿ ಅವರ ಧ್ಯಾನಕ್ಕೆ ಭಂಗ ತರುವುದು ಉಚಿತವಲ್ಲ. ಹಾಗೆಂದು ಮಹಾರಾಜರ ಆಜ್ಞೆ ಮೀರುವುದು ಅಪಮಾನದ ಕಾರ್ಯ. ಅಯ್ಯೋ ನಾನೇನೂ ಮಾಡಲಿ ಈಗ? ಮಹಾದೇವ ನೀವೇ ನನಗೆ ದಾರಿ ತೋರಬೇಕು"


ತಮ್ಮ ಮನದಲ್ಲಿ ಯೋಚಿಸಿ ಮುಂದೇನು ಎಂಬ ಚಿಂತೆಯಲ್ಲಿ ಸೇನಾಪತಿಗಳು ಸುಮ್ಮನೆ ನಿಂತರು.


"ನನ್ನ ಕಾಣಲು ಬಂದು ಅಲ್ಲೇ ನಿಂತಿರುವಿರೇಕೆ ಸೇನಾಪತಿಗಳೇ?"


"(ಆಶ್ಚರ್ಯದಲ್ಲಿ) ಯುವರಾಜರೆ,, ತಮಗೆ ನಾನು ಬಂದ ವಿಷಯ?"


"ತಿಳಿಯಿತು ನನ್ನ ಮಹಾದೇವ ಮನಸ್ಸಿಗೆ ತಂದರು. ಬಂದ ಕಾರಣ?"


"ಪ್ರಭು ಶಾರ್ವರ್ಥ ರಾಜನ ಸೇನೆ ಕಾರಣವಿಲ್ಲದೆ ನಮ್ಮ ಗಡಿಭಾಗದಲ್ಲಿ ನೆಲೆಸಿರುವ ಶಿವಭಕ್ತರ ನೆಲೆಗಳನ್ನೆಲ್ಲಾ ಧ್ವಂಸ ಮಾಡಿ, ಅಲ್ಲಿ ತಮ್ಮ ರಾಜಭಾವುಟ ಹಾರಿಸಿದ್ದರೆಂಬ ಮಾಹಿತಿ ತಲುಪಿದೆ. ಹಾಗಾಗಿ ಮಹಾರಾಜರು ತಮಗೆ ಸಂದೇಶ ನೀಡಿದ್ದಾರೆ. ತಾವು ಈ ಕ್ಷಣವೇ ಹೊರಡಬೇಕಂತೆ ಆದರೆ ನೀವು ಮಹಾದೇವನ,,"


"ನನ್ನ ಕತ್ತಿ ತನ್ನಿ ಸೇನಾಪತಿಗಳೇ, ಇಲ್ಲಿ ನಾನು ಮಹಾದೇವರ ಧ್ಯಾನದಲ್ಲಿ ನಿರತನಾದರೆ ನನ್ನ ದೇವಾ ಮೆಚ್ಚರು. ಅವರ ಭಕ್ತರ ನೋವಿನ ಕೂಗಿಗೆ ನನ್ನ ಎಚ್ಚರಿಸಿದರು ಆ ಜಗದ ಪಾಲಕ. ಯುದ್ಧಕ್ಕೆ ಸಿದ್ಧ. ಸೈನ್ಯಕ್ಕೆ ವಿಷಯ ತಿಳಿಸಿ"


"ನಿಮ್ಮ ಆಜ್ಞೆ ಯುವರಾಜರೆ"ಪ್ರಕ್ಷರ ಎಂಬ ಒಂದೇ ಕೂಗಿಗೆ. ಪ್ರಕ್ಷರ ಕ್ಷಣ ಮಾತ್ರದಿ ಬಂದು ನಿಂತ. ಯುವರಾಜರ ನೆಚ್ಚಿನ ಪ್ರಕ್ಷರ ಆತ.ಹರ ಹರ ಮಹಾದೇವ...

ಹರ ಹರ ಮಹಾದೇವ...


       *************"ಮಹಾದೇವ ಈ ಸ್ಫಟಿಕದ ಬಗ್ಗೆಯೇ ನೀವು ನುಡಿದದ್ದು. ಇದರ ರಕ್ಷಣೆಗೆ ಅವನೇ ಶಕ್ತ ನಿಮ್ಮ ಆಯ್ಕೆಯಲ್ಲಿ ಎರಡು ಮಾತು ಇರುವುದೇ?""ಅವನ ಶಿವ ಭಕ್ತಿಯಲ್ಲಿ ಒಂದಷ್ಟು ಸಂಶಯ ನಾನು ಕಾಣಲಿಲ್ಲ. ಅದೆಷ್ಟೇ ಯುಗಗಳು ಬಂದು ನಿಂತರು ಅದರ ರಕ್ಷಣೆ ಇವನ್ನೊಬ್ಬನಿಂದ ಮಾತ್ರ ಸಾಧ್ಯ"


ಮಹಾದೇವರ ಮನದಲ್ಲಿ ಅಡಗಿರುವ ಆ ಸ್ಫಟಿಕ ಯಾರು?


       *************ಮುಂದುವರೆಯುತ್ತದೆ......


Rate this content
Log in

More kannada story from ಹಂಸವೇಣಿ ಕುಲಾಲ್

Similar kannada story from Drama